ಇಂದಿನಿಂದ ದೇಶದಾದ್ಯಂತ ಹವಾಮಾನ ಬದಲಾವಣೆಯಾಗುತ್ತಿದ್ದು, ಕರ್ನಾಟಕದ ಹಲವಾರು ಭಾಗದಲ್ಲಿ ಯಾವ ತರದ ಹವಾಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿರಿ: ಈ ಯೋಜನೆಯಡಿ ಬೋರ್‌ವೆಲ್ ಕೊರೆಸಲು ಸರ್ಕಾರವೇ ನೀಡಲಿದೆ ಹಣ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?
ಈ ರಾಜ್ಯಗಳಲ್ಲಿ ಆಗಲಿದೆ ಮಳೆ
ಹವಾಮಾನ ಇಲಾಖೆಯ ಪ್ರಕಾರ, ಇಂದು ರಾಷ್ಟ್ರ ರಾಜಧಾನಿ ದೆಹಲಿ, ಕರ್ನಾಟಕ , ಮಧ್ಯಪ್ರದೇಶ, ಕೊಂಕಣ, ಮಧ್ಯ ಮಹಾರಾಷ್ಟ್ರ, ಆಂಧ್ರಪ್ರದೇಶ, , ಅಂಡಮಾನ್ ಮತ್ತು ನಿಕೋಬಾರ್, ಛತ್ತೀಸ್‌ಗಢ, ಯುಪಿ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಸಣ್ಣ ಮಳೆಯಿಂದಾಗಿ ತಾಪಮಾನದಲ್ಲಿ ಇಳಿಕೆ ಕಂಡುಬರಬಹುದು.
ಹವಾಮಾನ ಇಲಾಖೆಯ ಪ್ರಕಾರ, ನಾಳೆ ಅಂದರೆ 15ನೇ ಜೂನ್ ಮತ್ತು 16ನೇ ಜೂನ್ 2022 ರಂದು ಸಹ ಭಾರತದ ಈ ರಾಜ್ಯಗಳು ಮೋಡ ಕವಿದಿರುತ್ತವೆ. ಇದರೊಂದಿಗೆ ಶೀತಗಾಳಿ ಬೀಸುವ ಭೀತಿಯೂ ಎದುರಾಗಿದೆ.
ದೆಹಲಿ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಮೋಡಗಳ ಜೊತೆಗೆ ತಣ್ಣನೆಯ ಗಾಳಿಯೂ ಬೀಸಲಿದೆ.
ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ
PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿರುವ ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಜನ ಮುಂಗಾರು ಮಳೆಯತ್ತ ಕಣ್ಣು ನೆಟ್ಟಿದ್ದಾರೆ. ಹವಾಮಾನ ಇಲಾಖೆಯ ಇತ್ತೀಚಿನ ನವೀಕರಣದ ಪ್ರಕಾರ, ಭಾರತದ ಅನೇಕ ರಾಜ್ಯಗಳು ಈಗ ಶಾಖದ ಗಾಳಿಯಿಂದ ನೆಮ್ಮದಿಯ ನಿಟ್ಟುಸಿರು ಪಡೆಯಲಿವೆ.
ಮುಂದಿನ ಕೆಲವು ದಿನಗಳಲ್ಲಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ (IMD) ಹೇಳಿದೆ.
ಶ್ರಮಜೀವಿ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ “ಕಾರಹುಣ್ಣಿಮೆ”..! ಏನಿದರ ವಿಶೇಷತೆ ?
₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?
ಭಾರತದ ಈ ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗುತ್ತದೆ
ಭಾರತದ ಇತರೆ ರಾಜ್ಯಗಳ ಬಗ್ಗೆ ಮಾತನಾಡಿದರೆ ತಾಪಮಾನ ಹೆಚ್ಚಾಗುವ ಸಾಧ್ಯತೆಯೂ ವ್ಯಕ್ತವಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಇಂದು ಅಹಮದಾಬಾದ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಜೈಪುರ, ಮುಂಬೈ, ಲಕ್ನೋ, ಗಾಜಿಯಾಬಾದ್ ಮತ್ತು ಪಾಟ್ನಾದಲ್ಲಿ ಕನಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ.
Share your comments