ಈ ಯೋಜನೆಯಡಿ ಬೋರ್‌ವೆಲ್‌ ಕೊರೆಸಲು ಸರ್ಕಾರವೇ ನೀಡಲಿದೆ ಹಣ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?

Kalmesh T
Kalmesh T
the government will pay for the borewell drilling

ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಬೋರ್‌ವೆಲ್‌ ಕೊರೆಸಲು ಸರ್ಕಾರ ಸಹಾಯಧನ ನೀಡುತ್ತದೆ. ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ:  PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

Rain Alert: ನಾಳೆಯಿಂದ ದೇಶಾದ್ಯಂತ ಹವಾಮಾನ ಬದಲಾವಣೆ, ಮಳೆ ಸಾಧ್ಯತೆ ! ಕರ್ನಾಟಕದಲ್ಲಿ ಎಲ್ಲೆಲ್ಲಿ ಹೇಗಿರಲಿದೆ ಹವಾಮಾನ?

ಗಂಗಾ ಕಲ್ಯಾಣ ಯೋಜನೆ ಗಂಗಾ ಕಲ್ಯಾಣ ಯೋಜನೆ ಮೂಲಕ ರಾಜ್ಯದ ರೈತರು ದೀರ್ಘಕಾಲಿಕ ನೀರಿನ ಮೂಲಗಳ ಬಳಕೆ ಅಥವಾ ಪೈಪ್‌ಲೈನ್‌ಗಳ ಮೂಲಕ ನೀರನ್ನು ಎತ್ತುವ ಸೂಕ್ತ ನೀರಾವರಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 

ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೋರ್‌ವೆಲ್‌ಗಳ ನಿರ್ಮಾಣಕ್ಕಾಗಿ ಕೆಎಂಡಿಸಿ ಒಟ್ಟು 1.5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಿದೆ. ಕರ್ನಾಟಕದಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಬೋರ್‌ವೆಲ್ ಕೊರೆಸುವುದು ಅಥವಾ ತೆರೆದ ಬಾವಿಗಳನ್ನು ತೋಡಿಸುವುದು.

ಅವುಗಳಿಗೆ ಪಂಪ್ ಸೆಟ್‌ಗಳು ಮತ್ತು ಇತರೆ ಸಾಮಗ್ರಿಗಳನ್ನು ಅಳವಡಿಸಲಾಗುತ್ತದೆ. ಅಂತರ್ಜಲ ಕುಸಿದಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಂದು ಘಟಕಕ್ಕೆ 4.50 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.

ಇತರೆ ಜಿಲ್ಲೆಗಳಲ್ಲಿ ಒಂದು ಘಟಕಕ್ಕೆ 3.50 ಲಕ್ಷ ರೂಪಾಯಿ ಅನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಒಂದು ಘಟಕದ ವೆಚ್ಚದ 50,000 ರೂಪಾಯಿಗಳಲ್ಲಿ ಪಂಪ್ ಸೆಟ್‌ಗಳು ಮತ್ತು ಇತರೆ ಸಾಮಗ್ರಿಗಳ ವೆಚ್ಚವೂ ಸೇರಿರುತ್ತದೆ. 50,000 ರೂಪಾಯಿ ಸಾಲದ ಮೊತ್ತವಾಗಿರುತ್ತದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಹೊಸ ಫಾರ್ಮೂಲಾದೊಂದಿಗೆ ಬದಲಾಗಲಿದೆ ಸಂಬಳದ ಲೆಕ್ಕ! ಏನಿದು ತಿಳಿಯಿರಿ

ರೈತರಿಗೆ ನೀಡುವ ಈ ಹಣದಲ್ಲಿ ವಾರ್ಷಿಕ ಶೇ.6ರ ಬಡ್ಡಿದರದಂತೆ 50,000 ರೂಪಾಯಿ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಒಂದು ವರ್ಷದಲ್ಲಿ ಎರಡು ಕಂತುಗಳಂತೆ ಒಟ್ಟು 12 ಕಂತುಗಳನ್ನು ಪಾವತಿ ಮಾಡಬೇಕಾಗುತ್ತದೆ.

ಇದರ ಹೊರತಾಗಿ ಉಳಿದ ಹಣವು ಸರ್ಕಾರದಿಂದ ಫಲಾನುಭವಿಗಳಿಗೆ ನೀಡುವ ಸಹಾಯಧನ ಆಗುತ್ತದೆ. ಅಂದರೆ ಅಂತರ್ಜಲ ಕುಸಿದ ಜಿಲ್ಲೆಗಳಲ್ಲಿ 3.50 ಲಕ್ಷ ರೂಪಾಯಿ ಮತ್ತು ಇತರೆ ಜಿಲ್ಲೆಗಳಲ್ಲಿ 2.50 ಲಕ್ಷ ರೂಪಾಯಿ ಅನ್ನು ಸರ್ಕಾರವು ಸಬ್ಸಿಡಿಯಾಗಿ ನೀಡುತ್ತದೆ.

ರೈತರ ಭೂಮಿಗೆ ನದಿ ಮತ್ತು ನಾಲೆಗಳಿಂದ ನೀರಾವರಿ ಸೌಲಭ್ಯ ರೈತರ ಭೂಮಿಗೆ ಹತ್ತಿರದಲ್ಲಿ ಇರುವ ನದಿ ಮತ್ತು ನಾಲೆಗಳಿಂದ ಪಂಪ್ ಮೋಟಾರ್ ಮತ್ತು ಪರಿಕರಗಳನ್ನು ಅಳವಡಿಸುವ ಮೂಲಕ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಎಂಟು ಎಕರೆ ಭೂಮಿಗಾಗಿ ನೀರಾವರಿ ಸೌಲಭ್ಯವನ್ನು ಒದಗಿಸುವುದಕ್ಕೆ 4 ಲಕ್ಷ ರೂಪಾಯಿ ಮತ್ತು 15 ಎಕರೆಗಿಂತ ಹೆಚ್ಚು ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು 6 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಹೀಗೆ ಬಳಸುವ ಅಷ್ಟೂ ಹಣವನ್ನು ಸಹಾಯಧನ (ಸಬ್ಸಿಡಿ) ಎಂದು ಪರಿಗಣಿಸಲಾಗುತ್ತದೆ.

ಶ್ರಮಜೀವಿ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ “ಕಾರಹುಣ್ಣಿಮೆ”..! ಏನಿದರ ವಿಶೇಷತೆ ?

₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?

ಅರ್ಜಿ ಸಲ್ಲಿಸುವುದು ಹೇಗೆ?

1: ಮೊದಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್  https://kmdc.karnataka.gov.in/ ಗೆ ಹೋಗಿರಿ –

2: ಮುಖಪುಟದಲ್ಲಿ, "ಆನ್‌ಲೈನ್ ಸರ್ವಿಸಸ್" ಟ್ಯಾಬ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ಕೆಳಗೆ ತೋರಿಸುವ "ಆನ್‌ಲೈನ್ ಅಪ್ಲಿಕೇಶನ್‌" ಲಿಂಕ್ ಅನ್ನು ಕ್ಲಿಕ್ ಮಾಡಿ –

3: ನಂತರ https://kmdc.karnataka.gov.in/info-3/ONLINE+APPLICATION/kn ನೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆನ್‌ಲೈನ್ ಅಪ್ಲಿಕೇಶನ್ ಪುಟವು ತೆರೆಯುತ್ತದೆ. "ಗಂಗಾ ಕಲ್ಯಾಣ ಯೋಜನೆ - ಅಪ್ಲೈ ಮಾಡಲು ಇಲ್ಲಿ ಕ್ಲಿಕ್‌ ಮಾಡಿ" ಎಂಬ ಸಾಲಿನ ಮೇಲೆ ಒತ್ತಿರಿ. –

4: ನೇರ ಲಿಂಕ್ - https://kmdc.kar.nic.in/loan/Login.aspx -

5: ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, KMDC ಕರ್ನಾಟಕ ಲೋನ್ ಲಾಗಿನ್ ಪುಟವು ಕಾಣಿಸಿಕೊಳ್ಳುತ್ತದೆ –

6: ಈ ಪುಟದಲ್ಲಿ, ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆಯಲು "ಗಂಗಾ ಕಲ್ಯಾಣ ಯೋಜನೆ" ಲಿಂಕ್ ಅನ್ನು ಕ್ಲಿಕ್ ಮಾಡಿ.

ಯೋಜನೆ ಪಡೆದುಕೊಳ್ಳಲು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಫಲಾನುಭವಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. - ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. - ಅಭ್ಯರ್ಥಿಗಳು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು. - ರೈತ ಕುಟುಂಬದ ವಾರ್ಷಿಕ ಆದಾಯವು 22,000ಕ್ಕಿಂತ ಹೆಚ್ಚು ಇರಬಾರದು

Published On: 14 June 2022, 05:29 PM English Summary: the government will pay for the borewell drilling

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.