1. ಸುದ್ದಿಗಳು

#HarGharTiranga: ಕೃಷಿ ಜಾಗರಣ ಕಚೇರಿಯಲ್ಲಿ “ಪ್ರತಿ ಮನೆಯಲ್ಲೂ ಬಾವುಟ” ಅಭಿಯಾನ ಆಚರಣೆ!

Kalmesh T
Kalmesh T
#HarGharTiranga: "Flag in Every House" Campaign Celebration at Krishi Jagran Office!

ಪ್ರತಿ ಮನೆಯಲ್ಲೂ ಬಾವುಟಅಭಿಯಾನದ ಅಂಗವಾಗಿ ಕೃಷಿ ಜಾಗರಣದ ಇಡೀ ತಂಡ ಕಚೇರಿಯ ಮೇಲ್ಛಾವಣಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು.

ಇದನ್ನೂ ಓದಿರಿ: #Azadi Ka Amrit Mahotsav: ಸ್ವಾತಂತ್ರ್ಯದ ನಂತರ ಆಲ್ ಇಂಡಿಯಾ ರೇಡಿಯೊದೊಂದಿಗಿನ ನೆನಪುಗಳು

#HarGharTiranga:  ದೇಶಾದ್ಯಂತ ಭಾರತದ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ “ಹರ್‌ ಘರ್‌ ತಿರಂಗಾಅಭಿಯಾನವನ್ನು ಆರಂಭಿಸಿದೆ.

ಇದರಿಂದಾಗಿ ದೇಶದ ಪ್ರತಿಯೊಂದು ಮನೆ , ಶಾಲೆ ಮತ್ತು ಕಚೇರಿಗಳಲ್ಲಿ ತ್ರಿವರ್ಣ ಧ್ವಜವು ಬೀಸುತ್ತಿದೆ. ತನ್ನ ಕಚೇರಿಯಲ್ಲಿ ಅತಿಥಿಗಳೊಂದಿಗೆ ಪ್ರತಿದಿನ ತ್ರಿವರ್ಣ "ರಾಷ್ಟ್ರಧ್ವಜ"ವನ್ನು ಕೃಷಿ ಜಾಗರಣದಲ್ಲಿಯೂ ಹಾರಿಸಲಾಯಿತು.

ಈ ಅಭಿಯಾನದ ನಿಮಿತ್ತ ಕೃಷಿ ಜಾಗರಣದಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎಲ್ಲರೂ ಸೇರಿ ಕಚೇರಿಯ ಮೇಲ್ಛಾವಣಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಕೃಷಿ ಜಾಗರಣ ತಂಡವು ಇಂದು ಅಂದರೆ ಶನಿವಾರ, 13ನೇ ಆಗಸ್ಟ್ 2022 ರಂದು ದೆಹಲಿಯ ತನ್ನ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ಪ್ರತಿ ಮನೆಯಲ್ಲೂ ತ್ರಿವರ್ಣ ಕಾರ್ಯಕ್ರಮವನ್ನು ಮುಂದುವರೆಸಿದೆ.

ಕಾರ್ಯಕ್ರಮದಲ್ಲಿ ಸೋಮಾನಿ ಸೀಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಸೋಮಾನಿ ಮುಖ್ಯ ಅತಿಥಿಯಾಗಿದ್ದರು. ಕೃಷಿ ಜಾಗರಣ ತಂಡದೊಂದಿಗೆ ಕಚೇರಿಯ ಮೇಲ್ಛಾವಣಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಈ ಕ್ಷಣವು ಎಲ್ಲರಿಗೂ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಹೃದಯದಲ್ಲಿ ದೇಶಭಕ್ತಿಯ ಭಾವನೆ ಮೂಡಿತು.

ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ, ಎಲ್ಲರೂ ಒಟ್ಟಾಗಿ ರಾಷ್ಟ್ರಗೀತೆಯನ್ನು ಹಾಡಿದರು ಮತ್ತು ಸ್ವಾತಂತ್ರ್ಯದ ಘೋಷಣೆಗಳನ್ನು ಸಹ ಕೂಗಿದರು .

ಎಂ.ಸಿ.ಡೊಮಿನಿಕ್, ನಿರ್ದೇಶಕರಾದ ಶೈನಿ ಡೊಮಿನಿಕ್ ಹಾಗೂ ಕೃಷಿ ಜಾಗರಣ ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಕೆ.ವಿ.ಸೋಮಾನಿ ದೇಶದ ಸ್ವಾತಂತ್ರ್ಯ ದಿನಾಚರಣೆ ಕುರಿತು ಕಿರು ಭಾಷಣ ಮಾಡಿದರು.  

ಹರ್‌ ಘರ್‌ ತಿರಂಗಾ..

ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ರಾಷ್ಟ್ರದಾದ್ಯಂತ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ಆಗಸ್ಟ್‌ 13 ರಿಂದ ಆಗಸ್ಟ್‌ 15ರವರಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಿಗೊಳಿಸಲು ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

Published On: 13 August 2022, 05:06 PM English Summary: #HarGharTiranga: "Flag in Every House" Campaign Celebration at Krishi Jagran Office!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.