ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ಎಲ್ಲ ಮೂಲದ ಹಣವನ್ನೂ ಒತ್ತಾಯ ಪೂರ್ವಕವಾಗಿ ಕೇಳುತ್ತೇವೆ ಎಂದು
ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಅದರ ಬೆನ್ನಲ್ಲೇ ಕೇಂದ್ರದಿಂದ ಭಾರೀ ಮೊತ್ತದ ಅನುದಾನ ರಾಜ್ಯಕ್ಕೆ ಬಿಡುಗಡೆ ಆಗಿದೆ.
ರಾಜ್ಯಕ್ಕೆ ಬರಬೇಕಾಗಿರುವ ಅನುದಾನವನ್ನು ಕೇಂದ್ರ ಸರ್ಕಾರವು ಸಕಾಲದಲ್ಲಿ ನೀಡಿಲ್ಲ.
ಹೀಗಾಗಿ, ರಾಜ್ಯ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಅಲ್ಲದೇ ಜಿಎಸ್‌ಟಿ ಮೊತ್ತದಲ್ಲಿಯೂ ಕಡಿತವಾಗಿದೆ. ರಾಜ್ಯದ ಪಾಲನ್ನು ಪಡೆಯುವಲ್ಲಿ ಈ ಹಿಂದೆ ಇದ್ದಂತಹ
ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂದು ಸಹ ಆರೋಪಿಸಲಾಗಿತ್ತು.
ಇದೀಗ ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯಕ್ಕೆ ಭಾರೀ ಮೊತ್ತದ ಅನುದಾನ ಬಿಡುಗಡೆ ಆಗಿದೆ.
ಸಾಮಾನ್ಯ ಮಾಸಿಕ ₹ 59,140 ಕೋಟಿಗೆ ಬದಲಾಗಿ ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ 3 ನೇ ಕಂತಾಗಿ
₹ 1,18,280 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು 12 ಜೂನ್ 2023ರಂದು ₹ 1,18,280 ಕೋಟಿ ಮೊತ್ತದ ತೆರಿಗೆ ಹಂಚಿಕೆಯ 3ನೇ ಕಂತನ್ನು ರಾಜ್ಯ ಸರ್ಕಾರಗಳಿಗೆ
ಬಿಡುಗಡೆ ಮಾಡಿದೆ. ಇದು ಸಾಮಾನ್ಯ ಮಾಸಿಕ ₹ 59,140 ಕೋಟಿಗೆ ಹೋಲಿಸಿದರೆ ಹೆಚ್ಚುವರಿ ಮೊತ್ತವಾಗಿದೆ.
ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅವರ ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಆದ್ಯತೆಯ
ಯೋಜನೆಗಳು/ಯೋಜನೆಗಳಿಗೆ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಲು ಜೂನ್ 2023 ರಲ್ಲಿ ಬಾಕಿ ಇರುವ ನಿಯಮಿತ
ಕಂತಿನ ಜೊತೆಗೆ ಒಂದು ಮುಂಗಡ ಕಂತನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.
ಕರ್ನಾಟಕಕ್ಕೆ ಸಿಕ್ಕ ಅನುದಾನವೆಷ್ಟು?
ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಈ ಬಾರಿ ಬರೋಬ್ಬರಿ 4314 ಕೋಟಿ ರೂಪಾಯಿ
ಬಿಡುಗಡೆ ಮಾಡಿದೆ.
ಆದರೆ, ಇದೇ ಸಂದರ್ಭದಲ್ಲಿ ಹೆಚ್ಚು ತೆರಿಗೆ ಪಾವತಿಯನ್ನು ಮಾಡದ ರಾಜ್ಯಗಳಿಗೂ ಹೆಚ್ಚು ಅನುದಾನ ಸಂದಾಯವಾಗಿದೆ.
ಕೇಂದ್ರದಿಂದ ದೇಶದ ವಿವಿಧ ರಾಜ್ಯಗಳಿಗೆ ಬಿಡುಗಡೆ ಆಗಿರುವ ಅನುದಾನದ ಮೊತ್ತದ ವಿವರ
ರಾಜ್ಯದ ಹೆಸರು ಒಟ್ಟು (₹ ಕೋಟಿ)
1 ಆಂಧ್ರ ಪ್ರದೇಶ 4787
2 ಅರುಣಾಚಲ ಪ್ರದೇಶ 2078
3 ಅಸ್ಸಾಂ 3700
4 ಬಿಹಾರ 11897
5 ಛತ್ತೀಸ್‌ಗಢ 4030
6 ಗೋವಾ 457
7 ಗುಜರಾತ್ 4114
8 ಹರಿಯಾಣ 1293
9 ಹಿಮಾಚಲ ಪ್ರದೇಶ 982
10 ಜಾರ್ಖಂಡ್ 3912
11 ಕರ್ನಾಟಕ 4314
12 ಕೇರಳ 2277
13 ಮಧ್ಯಪ್ರದೇಶ 9285
14 ಮಹಾರಾಷ್ಟ್ರ 7472
15 ಮಣಿಪುರ 847
16 ಮೇಘಾಲಯ 907
17 ಮಿಜೋರಾಂ 591
18 ನಾಗಾಲ್ಯಾಂಡ್ 673
19 ಒಡಿಶಾ 5356
20 ಪಂಜಾಬ್ 2137
21 ರಾಜಸ್ಥಾನ 7128
22 ಸಿಕ್ಕಿಂ 459
23 ತಮಿಳುನಾಡು 4825
24 ತೆಲಂಗಾಣ 2486
25 ತ್ರಿಪುರ 837
26 ಉತ್ತರ ಪ್ರದೇಶ 21218
27 ಉತ್ತರಾಖಂಡ 1322
28 ಪಶ್ಚಿಮ ಬಂಗಾಳ 8898
ಒಟ್ಟು 118280 ಕೋಟಿ ರೂ.
Share your comments