ಭಾರತ-ಚೀನಾ ಗಡಿಯಲ್ಲಿ ಸಂಘರ್ಷವಾದ ಬಳಿಕ ದೇಶಾದ್ಯಂತ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ದೇಶಾದ್ಯಂತ ಯುವಜನರಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದ್ದ ವಿಡಿಯೋ ಶೇರಿಂಗ್ ಆ್ಯಪ್ ಟಿಕ್ ಟಾಕ್, ಶೇರ್ ಇಟ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಒಟ್ಟು 59 ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಭಾರತದ ಯೋಧರನ್ನು ಚೀನಾ ಸೈನಿಕರು ಹತ್ಯೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಚೀನಾ ಅಭಿವೃದ್ಧಿ ಪಡಿಸಿದ ಆ್ಯಪ್‌ಗಳನ್ನು ಮೊಬೈಲ್ನಿಂದ ಅನ್ಇನ್ಸ್ಟಾಲ್ ಮಾಡಿ ಎಂದು ಹಲವು ಪ್ರಮುಖ ಸಂಘಟನೆಗಳು, ಸೆಲೆಬ್ರಿಟಿಗಳು ಕರೆ ನೀಡುತ್ತಿದ್ದರಿಂದ ಕೇಂದ್ರ ಸರ್ಕಾರ ಚೀನಾ ದೇಶಕ್ಕೆ ದೊಡ್ಡದೊಂದು ಶಾಕ್ ನೀಡಿದೆ.
2020ರ ಎಪ್ರಿಲ್ ಹೊತ್ತಿಗೆ ವಿಶ್ವಾದ್ಯಂತ ಟಿಕ್ ಟಾಕ್ ಬಳಕೆದಾರರ ಸಂಖ್ಯೆ 1.5 ಬಿಲಿಯನ್ ಮುಟ್ಟಿತ್ತು ಮತ್ತು ಭಾರತದಲ್ಲೇ ಈ ಆ್ಯಪ್ 611 ಮಿಲಿಯನ್ ಡೌನ್ಲೋಡ್ ಕಂಡಿತ್ತು. ಅದರಲ್ಲೂ ಕೋವಿಡ್ ಸಂಬಂಧಿತ ಲಾಕ್ ಡೌನ್ ಕಾಲದಲ್ಲಿ ಭಾರತೀಯರು ಟಿಕ್ ಟಾಕ್ ಬಳಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದರು. ದೇಶದ ಸಾರ್ವಭೌಮತೆ, ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರಕಾರ ನಿಷೇಧಿಸಿರುವ ಪ್ರಮುಖ ಚೈನೀಸ್ ಆ್ಯಪ್ಗಳ ಪಟ್ಟಿ:
ಟಿಕ್ ಟಾಕ್
ಶೇರ್ ಇಟ್
ಯುಸಿ ಬ್ರೌಸರ್
ಬೈಡು ಮ್ಯಾಪ್
ಕ್ಲ್ಯಾಷ್ ಆಫ್ ಕಿಂಗ್ಸ್
ಡಿಯು ಬ್ಯಾಟರಿ ಸೇವರ್
ಹೆಲೋ
ಲೈಕೀ
ಯೂ ಕ್ಯಾನ್ ಮೇಕಪ್
ಎಂ.ಐ. ಕಮ್ಯುನಿಟಿ
ವೈರಸ್ ಕ್ಲೀನರ್
ಕ್ಲಬ್ ಫ್ಯಾಕ್ಟರಿ
ನ್ಯೂಸ್ ಡಾಗ್
ವಿ ಚಾಟ್
ಯುಸಿ ನ್ಯೂಸ್
ಕ್ಯುಕ್ಯು ಮೇಲ್
ಕ್ಯುಕ್ಯು ಮ್ಯೂಸಿಕ್
ಬಿಗೋ ಲೈವ್
ಸೆಲ್ಫೀ ಸಿಟಿ
ಮೈಲ್ ಮಾಸ್ಟರ್
ಮಿ ವಿಡಿಯೋ ಕಾಲ್ ಕ್ಸಿಯೋಮಿ
ವಿ ಸಿಂಕ್
ವಿಗೋ ವಿಡಿಯೋ
ಡಿಯು ರೆಕಾರ್ಡರ್
ಡಿಯು ಬ್ರೌಸರ್
ಕ್ಯಾಮ್ ಸ್ಕ್ಯಾನರ್
ಕ್ಲೀನ್ ಮಾಸ್ಟರ್ ಚೀತಾ ಮೊಬೈಲ್
ವಂಡರ್ ಕೆಮರಾ
ಫೊಟೋ ವಂಡರ್
ಸ್ವೀಟ್ ಸೆಲ್ಫೀ
ಕ್ಸೆಂಡರ್
ಕ್ವಾಯ್
Share your comments