1. ಸುದ್ದಿಗಳು

ಬೆಂಗಳೂರಲ್ಲಿ ಜಿ-20 ಶೃಂಗಸಭೆ: ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮಹತ್ವದ ಸಭೆ!

Hitesh
Hitesh
G-20 Summit in Bangalore: Meeting chaired by Chief Secretary

ಭಾರತ ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ನಂತರ ಎರಡು ಸಭೆಗಳು ಬೆಂಗಳೂರಿನಲ್ಲಿ ನಿಗದಿ ಮಾಡಲಾಗಿದೆ.

ಈ ಸಭೆಗಳು ಡಿಸೆಂಬರ್ 13 ರಿಂದ 15 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿವೆ.   

ಈ ಹಿನ್ನೆಲೆಯಲ್ಲಿ ಜಿ-20ಯ ಸಭೆಗೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.  

ಉನ್ನತ ಮಟ್ಟದ ಸಭೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ  ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಆನ್‌ಲೈನ್‌ನಲ್ಲೇ ಬೆಳೆಗಳ ಖರೀದಿ ಮತ್ತು ವಿತರಣೆ! 

ಬೆಂಗಳೂರಿನಲ್ಲಿ ಡಿಸೆಂಬರ್ 13 ರಿಂದ 15ರವರೆಗೆ ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಪ್ರತಿನಿಧಿಗಳ

ಸಭೆ ಹಾಗೂ ಡಿಸೆಂಬರ್ 16 ಮತ್ತು 17 ರಂದು ಜಿ-20 ಚೌಕಟ್ಟು ನಿರೂಪಣೆಗೆ ಸಂಬಂಧಪಟ್ಟಂತೆ ವಿವಿಧ ಸಭೆಗಳು ಇಲ್ಲಿ ನಡೆಯಲಿವೆ.

G-20 Summit in Bangalore: Meeting chaired by Chief Secretary

ಡಿಸೆಂಬರ್ 1 ರಂದು ಭಾರತ ಜಿ-20 ಶೃಂಗಸಭೆಯನ್ನು ಅಧಿಕೃತವಾಗಿ ವಹಿಸಿಕೊಂಡಿತು.

ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ

ಹೈದರಾಬಾದ್, ಬೆಂಗಳೂರು ಸೇರಿದಂತೆ ದೇಶಾದ್ಯಂತ ಅಂದಾಜು 200 ಸಭೆಗಳು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಈ ಬಾರಿ ಭಾರತ ಮಹತ್ವದ ಪಾತ್ರವನ್ನು ವಹಿಸಿದೆ. ಈಗಾಗಲೇ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಸಂಕಷ್ಟದ ಸಮಯದಲ್ಲಿ ಮುನ್ನಡೆಸುವುದು ಸವಾಲಾಗಿದೆ.

Published On: 05 December 2022, 04:41 PM English Summary: G-20 Summit in Bangalore: Meeting chaired by Chief Secretary

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.