1. ಸುದ್ದಿಗಳು

ಆನ್‌ಲೈನ್‌ನಲ್ಲೇ ಬೆಳೆಗಳ ಖರೀದಿ ಮತ್ತು ವಿತರಣೆ!

Hitesh
Hitesh
Buy and deliver crops online!

ರಾಜ್ಯದಲ್ಲಿ ರೈತರು ತಮ್ಮ ಕೆಲಸ ಮತ್ತು ಆರ್ಥಿಕ ವ್ಯವಹಾರವನ್ನು ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಕೃಷಿ ಇಲಾಖೆಯು ಸಕ್ರಿಯವಾಗಿದ್ದು, ಈ ನಿಟ್ಟಿನಲ್ಲಿ ಭರದಿಂದಸಾಗಿದೆ.

ರಾಜ್ಯದ ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿದ್ದು, 2023ರ ವೇಳೆಗೆ ಆನ್‌ ಲೈನ್‌ನಲ್ಲಿಯೇ ಬೆಳೆಗಳ

ವಿತರಣೆ ಹಾಗೂ ಖರೀದಿ ಮಾಡಲಿದ್ದಾರೆ. ರೈತರು ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆಗೆ ಒಳಗಾಗುತ್ತಿರುವುದು

ದೇಶದಲ್ಲಿಯೇ ಇದೇ ಮೊದಲಾಗಿದೆ ಎನ್ನುವುದು ಹೆಗ್ಗಳಿಕೆಯ ವಿಷಯವಾಗಿದೆ.

ರೈತರನ್ನು ಡಿಜಿಟಲೀಕರಣ ಪ್ರಕ್ರಿಯೆಗೆ ಒಳಪಡಿಸುವ ನಿಟ್ಟಿನಲ್ಲಿ ರಾಜ್ಯದ ಕೃಷಿ ಇಲಾಖೆ ದಿಟ್ಟ ಹೆಜ್ಜೆ ಇರಿಸಿದೆ.

2023ರ ಏಪ್ರಿಲ್ 1 ರಿಂದ ರೈತರು ಸಂಪೂರ್ಣ ಕಾಗದರಹಿತ ಹಾಗೂ ಪಾರದರ್ಶಕ

ರೀತಿಯಲ್ಲಿ ಖರೀದಿ ಮತ್ತು ವಿತಾರಣಾ ಪ್ರಕ್ರಿಯೆ ಮಾಡುವುದು ಕಡ್ಡಾಯ ಎಂದು ಘೋಷಿಸಲಾಗಿದೆ.  

ನವೆಂಬರ್ 24, 2022 ರಂದು ಸರ್ಕಾರ ರೈತರ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿತ್ತು.

ಡಿಸೆಂಬರ್ 31, 2022 ರ ಆರಂಭದಲ್ಲಿ, ಶಿವಮೊಗ್ಗ, ವಿಜಯಪುರ, ಚಿತ್ರದುರ್ಗ ಮತ್ತು ಮೈಸೂರು ನಾಲ್ಕು

ಜಿಲ್ಲೆಗಳು ಆನ್‌ಲೈನ್ ವಿತರಣೆ ಹಾಗೂ ಖರೀದಿ ಮಾಡುವ ಸೌಲಭ್ಯ ಕಲ್ಪಿಸಲಾಗಿತ್ತು.

ಇದೀಗ ಜನವರಿ 1 ರಿಂದ ಪ್ರಾಯೋಗಿಕವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಅಲ್ಲದೇ ಏಪ್ರಿಲ್ 1, 2023 ರಿಂದ ಕಡ್ಡಾಯ ಮಾಡಲು ಮುಂದಾಗಿದೆ.

ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಸೇರಿದಂತೆ ಕೃಷಿ

ಇಲಾಖೆಯ ಅಧೀನದಲ್ಲಿರುವ ಎಲ್ಲಾ ಕಚೇರಿಗಳು, ಜಿಲ್ಲಾ ತರಬೇತಿ ಕೇಂದ್ರಗಳು, ಪ್ರಯೋಗಾಲಯಗಳು

ಮತ್ತು ರೈತ ಸಂಪರ್ಕ ಕೇಂದ್ರಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

PmKisan | ಪಿ.ಎಂ ಕಿಸಾನ್‌ ಸಮ್ಮಾನ್‌ 13ನೇ ಕಂತಿನ ಹಣಕ್ಕೆ ಕ್ಷಣಗಣನೆ!

Buy and deliver crops online!

ಡಿಜಿಟಲೀಕರಣದ ಸಂಪೂರ್ಣ ವ್ಯವಸ್ಥೆಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ  ಸಹಯೋಗದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಿಸಲಾಗುತ್ತಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ 30ಕ್ಕೂ ಹೆಚ್ಚು ಯೋಜನೆಗಳಿಂದ ಪ್ರಯೋಜನಗಳನ್ನು

ರೈತರು ಆನ್‌ಲೈನ್‌ನ ಮೂಲಕವೇ ಪಡೆದುಕೊಳ್ಳಲು ಸಾಧ್ಯವಾಗಲಿದೆ.   

ರೈತರು ನಿರ್ದಿಷ್ಟ ರೈತ ಸಂಪರ್ಕ ಕೇಂದ್ರದಿಂದ ಬೀಜಗಳು ಅಥವಾ ರಸಗೊಬ್ಬರಗಳನ್ನು ಖರೀದಿಸಿದರೆ,

ಈ ಉತ್ಪನ್ನಗಳಿಗೆ ಕ್ಯೂಆರ್ ಕೋಡ್ ಇರುತ್ತದೆ. ಸ್ಕ್ಯಾನಿಂಗ್ ಮೂಲಕ, ಯಾವ ರೈತರು

ಯಾವ ಮಾರಾಟಗಾರರಿಂದ ಖರೀದಿಸಿದ್ದಾರೆ ಮತ್ತು ಖರೀದಿದಾರರ ವಿವರಗಳನ್ನು ಇದು ಸ್ಪಷ್ಟಪಡಿಸುತ್ತದೆ.

ಉತ್ತರ ಕೊರಿಯಾದಲ್ಲಿ ಮಕ್ಕಳಿಗೆ ಬಾಂಬ್‌,ಗನ್‌ ಹೆಸರು, ಕಾರಣವೇನು ಗೊತ್ತೆ?!

Buy and deliver crops online!
Published On: 05 December 2022, 03:40 PM English Summary: Buy and deliver crops online!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.