1. ಸುದ್ದಿಗಳು

ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ

Hitesh
Hitesh
Food crisis due to shortage of fertilizers: PM Modi warns

ಜಿ–20 ದೇಶಗಳ ಶೃಂಗ ಸಭೆ: ವಿಶ್ವವನ್ನು ಕಾಡುತ್ತಿರುವ ರಸಗೊಬ್ಬರ ಕೊರತೆಯಿಂದ ಮುಂದಿನ ದಿನಗಳಲ್ಲಿ ಆಹಾರ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ಓದಿರಿ: #Recruitment: ಯುವ ವೃತ್ತಿಪರ ಹುದ್ದೆಗಳಿಗೆ ನೇಮಕಾತಿ, 50,000 ಸಂಬಳ!

ವಿಶ್ವವನ್ನು ಕಾಡುತ್ತಿರುವ ರಸಗೊಬ್ಬರ ಕೊರತೆಯಿಂದ ಮುಂದಿನ ದಿನಗಳಲ್ಲಿ ಆಹಾರ ಬಿಕ್ಕಟ್ಟಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ.
ಜಿ-20 ದೇಶಗಳ ಶೃಂಗಸಭೆಯಲ್ಲಿ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಆಹಾರ ಬಿಕ್ಕಟ್ಟಿನ ಪರಿಹಾರಕ್ಕಾಗಿ ರಸಗೊಬ್ಬರ ಮತ್ತು ಆಹಾರ ಧಾನ್ಯ ಪೂರೈಕೆಯನ್ನು ಸರಳೀಕರಿಸುವಂತೆ ಸಲಹೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ರಸಗೊಬ್ಬರ ಕೊರತೆಯು ಆಹಾರ ಸಮಸ್ಯೆಯಾಗಿ ಬದಲಾದರೆ, ಪರಿಹಾರ ಕಂಡುಕೊಳ್ಳುವುದು ಸವಾಲಾಗಲಿದೆ.

ಆಹಾರ ಸಮಸ್ಯೆ ಎದುರಾದರೆ, ಪರಿಹಾರವೇ ಇಲ್ಲ. ಹೀಗಾಗಿ, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆ ಪ್ರಕ್ರಿಯೆಯನ್ನು ಸುಲಭವಾಗಿಸಬೇಕು. ಪರಸ್ಪರ ಸಹಕಾರ,ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ. 

ಭಾರತವು ಆಹಾರ ಭದ್ರತೆಯ ಸುಸ್ಥಿರತೆಗಾಗಿ ಸಹಜ ಕೃಷಿ ಮತ್ತು ಸಾಂಪ್ರದಾಯಿಕವಾದ ಸಿರಿಧಾನ್ಯ ಬಳಕೆಯನ್ನು ಉತ್ತೇಜಿಸುತ್ತಿದೆ ಎಂದೂ ಮೋದಿ ಅವರು ತಿಳಿಸಿದ್ದಾರೆ.    

#Tabebuia rosea: ಹೂವುಗಳ ಲೋಕದ ರಾಣಿಯಂತೆ ಕಂಗೊಳಿಸುತ್ತಿರುವ ʼಪಿಂಕ್‌ ತಬೂಬಿಯಾ ರೋಸಿಯಾʼ! 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರೈಸ್ ರಿಸರ್ಚ್‌ ಸಂಶೋಧಕರಿಂದ ಕನಿಷ್ಠ 30ರಷ್ಟು ಕಡಿಮೆ ರಂಜಕ ಬಳಸಿ ಬೆಳೆಯುವ ಭತ್ತದ ತಳಿಗಳ ಅಭಿವೃದ್ಧಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರೈಸ್ ರಿಸರ್ಚ್‌ ಸಂಶೋಧಕರು ಕನಿಷ್ಠ 30%ರಷ್ಟು ಕಡಿಮೆ ರಂಜಕವನ್ನು ಬಳಸಿ ಬೆಳೆಯಬಹುದಾದ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. 

ಸಗೊಬ್ಬರಬೇಡಿಕೆಯನ್ನು ಪೂರೈಸಲು ಸವಾಲು ಎದುರಾಗಿರುವ ಸಂದರ್ಭದಲ್ಲಿ ಇಂಡಿಯನ್

ಇನ್‌ಸ್ಟಿಟ್ಯೂಟ್ ಆಫ್ ರೈಸ್ ರಿಸರ್ಚ್‌ನ ಸಂಶೋಧಕರು ಕನಿಷ್ಠ 30% ಕಡಿಮೆ ರಂಜಕದ ಅಗತ್ಯವಿರುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ತಳಿಗಳನ್ನು ತೆಲಂಗಾಣ ಮತ್ತು ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಬೆಳೆಯಲು ಪ್ರಾರಂಭಿಸಲಾಗಿದೆ.

ಕಡಿಮೆ ರಂಜಕವನ್ನು ಬಳಸಿ, ಬೆಳೆಯಬಹುದಾದ ನಾಲ್ಕು ಭತ್ತದ ಪ್ರಭೇದಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಬಿಪಿಟಿ ತಳಿಯ ಭತ್ತವನ್ನು ರೈತರಿಗೆ ಪರಿಚಯಿಸಲಾಗಿದೆ.

ಕರ್ನಾಟಕದ ಬಳ್ಳಾರಿ, ಕುಷ್ಟಗಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು 20 ರೈತರು ಈ ಸಂಸ್ಥೆಯಿಂದ ಸಣ್ಣ ಪ್ರಮಾಣದ ಬೀಜಗಳನ್ನು ಪಡೆದಿದ್ದಾರೆ.    

ಸಿಎಂ ಬೊಮ್ಮಾಯಿಯಿಂದ ಸರ್ಕಾರಿ ನೌಕರರ ಪರಿಷ್ಕೃತ ವೇತನ ಪ್ರಕಟ; ಹಾಗಿದ್ರೆ ಇನ್ಮುಂದೆ ಎಷ್ಟಾಗಲಿದೆ ವೇತನ?

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ, ಔಷಧ ಸಂಶೋಧನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ

ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಹತೋಟಿಗೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ.    

ಎಲೆಚುಕ್ಕಿ ರೋಗದ ಮೂಲವನ್ನು ಪತ್ತೆ ಮಾಡಿ, ರೋಗದ ನಿವಾರಣೆಗೆ ಔಷಧಿ ಸಂಶೋಧನೆ ಮಾಡವಂತೆ ವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.  

ಎಲೆಚುಕ್ಕಿ ರೋಗವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಯಲು ಅಗತ್ಯ ಕ್ರಮ ವಹಿಸುತ್ತಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. 

ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ತಡೆಗೆ 10 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. 

ಕೇಂದ್ರ ಸರ್ಕಾರವು ಅಡಿಕೆಯಲ್ಲಿ ಕಂಡು ಬಂದಿರುವ ಎಲೆಚುಕ್ಕಿ ರೋಗದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಈಗಾಗಲೇ ತಜ್ಞರ ಸಮಿತಿಯನ್ನು ರಚಿಸಿದೆ.  
 
“ಪಿಎಂ ಗತಿ ಶಕ್ತಿ” ರಾಷ್ಟ್ರೀಯ ಮಹಾ ಯೋಜನೆಯ ಮೂಲಸೌಕರ್ಯಗಳ ಪ್ರಕ್ರಿಯೆ ಪ್ರಾರಂಭ

ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆಯ ಮೂಲಸೌಕರ್ಯಗಳ ಪ್ರಕ್ರಿಯೆ ಪ್ರಾರಂಭವಾಗಿದೆ.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪಿಎಂ ಗತಿ ಶಕ್ತಿ-ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನೊಂದಿಗೆ ಇಲಾಖೆಯ ವಿವಿಧ ಮೂಲಸೌಕರ್ಯಗಳ ಏಕೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಮೊದಲ ಹಂತವಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು 12 ತಳಿ ಸುಧಾರಣೆ ಸಂಸ್ಥೆಗಳನ್ನು ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯಲ್ಲಿ ಸಂಯೋಜಿಸಿದೆ. 

ಇವುಗಳಲ್ಲಿ ಕೇಂದ್ರೀಯ ಜಾನುವಾರು ಸಾಕಣೆ ಕೇಂದ್ರ, ಕೇಂದ್ರೀಯ ಹಿಂಡಿನ ನೋಂದಣಿ ಯೋಜನೆ ಪ್ರಮುಖವಾಗಿದೆ. 

ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಮಗ್ರ ಯೋಜನೆ ಮತ್ತು ಸಂಘಟಿತ ಅನುಷ್ಠಾನಕ್ಕಾಗಿ  16 ಸಚಿವಾಲಯಗಳನ್ನು ಒಟ್ಟಿಗೆ ತರಲು ಮಾಸ್ಟರ್ ಪ್ಲಾನ್ ಡಿಜಿಟಲ್ ವೇದಿಕೆಯಾಗಿದೆ.
 

Published On: 17 November 2022, 10:21 AM English Summary: Food crisis due to shortage of fertilizers: PM Modi warns

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.