1. ಸುದ್ದಿಗಳು

BJP ಸಂಸದನ ಮನೆ ಮುಂದೆ ಅರಿಶಿನ ಸುರಿದು ಗರಂ ಆದ ರೈತರು

Maltesh
Maltesh
Farmers Dump Turmeric Produce Outside MP Residence

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದಕ್ಕಾಗಿ ಸಿಟ್ಟಾದ ರೈತರು ಅರಿಶನವನ್ನು ಬಿಜೆಪಿ ಸಂಸದ ಡಿ. ಅರವಿಂದ್ ಅವರ ನಿವಾಸದ ಮುಂದೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಆರ್ಮೂರ್‌ನ ಪರ್ಕಿಟ್ ಗ್ರಾಮದಲ್ಲಿರುವ, ಬಿಜೆಪಿ ಸಂಸದ ,ಅರವಿಂದ್ ಅವರ ನಿವಾಸದ ಮುಂದೆ ರೈತರು ಅರಿಶಿನವನ್ನು ಸುರಿದಿದ್ದಾರೆ. ಬಳಿಕ ಸಂಸದರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ಅರಿಶಿನ ಕೃಷಿ ಮಾಡಿ ದುಪ್ಪಟ್ಟು ಲಾಭ ತೆಗೆಯಿರಿ..ಬೇಸಾಯದ ಕ್ರಮಗಳೇನು..?

ಸಂಸದರಾಗಿ ಆಯ್ಕೆಯಾದರೆ ಜಿಲ್ಲೆಗೆ ಅರಿಶಿಣ ಮಂಡಳಿ ಮಂಜೂರು ಮಾಡುವುದಾಗಿ ಹಾಗೂ ಅರಿಶಿನ ಮತ್ತು ಕೆಂಪು ಜೋಳಕ್ಕೆ ಸರಿಯಾದ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವುದಾಗಿ 2019ರ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ನಿಜಾಮಾಬಾದ್‌ನ ರೈತ ಸಮುದಾಯಕ್ಕೆ ಅರವಿಂದ್ ಅವರು ಈ ಹಿಂದೆ ಭರವಸೆ ನೀಡಿದ್ದರು. ಆದರೆ ಸದ್ಯ ಈ ಭರವಸೆಗಳು ಕೇವಲ ಭರಸವೆಗಳಾಗಿ ಉಳಿದಿವೆ ಎಂದು ರೈತರು ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಂಸದರು ಕಲ್ವಕುಂಟ್ಲ ಕವಿತಾ ಅವರು ಸಂಸದೆಯಾಗಿ ಜನರಿಂದ ತಿರಸ್ಕೃತಗೊಂಡು ಹತಾಶರಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಗೂಂಡಾಗಿರಿ ನಡೆಸುತ್ತಿದ್ದಾರೆ, ಐದು ವರ್ಷಗಳಿಂದ ಸಾಧನೆ ಮಾಡದೇ ಸೋತಿದ್ದಾರೆ, ವಿಪರ್ಯಾಸವೆಂದರೆ ಅವರು ತೆಲಂಗಾಣ ಸಿಎಂ ಪುತ್ರಿಯಾಗಿದ್ದರು ಐದು ವರ್ಷಗಳಲ್ಲಿ ₹ 10 ಲಕ್ಷ ರೂಪಾಯಿಯ ಅನುದಾನ ತಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.ಮೋದಿ ಸರ್ಕಾರದ ಸುಧಾರಣಾಕಾರಿ ಆಡಳಿತದಲ್ಲಿ ಅರಿಶಿನ ಬೆಲೆ ನಿಜಾಮಾಬಾದ್‌ನಲ್ಲಿ ₹ 10,000 ಮತ್ತು ಸಾಂಗ್ಲಿಯಲ್ಲಿ ₹ 12,000 ತಲುಪಿದೆ ಎಂದು ಅವರು ಹೇಳಿದ್ದಾರೆ.

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಇನ್ನು ಈ ಹಿಂದೆಯೂ ಇದೇ ವೇಳೆ ರೈತರೆಂದು ಹೇಳಿಕೊಂಡವರು ಸಂಸದ ಅರವಿಂದ್ ಅವರ ಮನೆ ಮುಂದೆ ಭತ್ತ ಎಸೆದ ಘಟನೆ ನಡೆದಿತ್ತು. ಸಂಸದ ಅರವಿಂದ್ ಅವರು ಸ್ಥಳೀಯ ಆರ್ಮೂರ್ ಶಾಸಕ ಜೀವನ್ ರೆಡ್ಡಿ ಅವರ ಕೂಲಿ ರೈತರಂತೆ ಕಾರ್ಮಿಕರು ಎಂದು ಕಿಡಿಕಾರಿದರು.

ಹಿಂಗೋಳಿಯಲ್ಲಿ ಭಾರೀ ಏರಿಕೆ ಕಂಡ ಅರಿಶಿನ

ಹಿಂಗೋಳಿ ಅರಿಶಿಣ ಮಾರುಕಟ್ಟೆಗೆ ಸೋಮವಾರದಿಂದ (ಮಾ.2) ಶುಕ್ರವಾರದವರೆಗೆ (ಮಾ.6) 11000 ಕ್ವಿಂಟಾಲ್ ಅರಿಶಿನ ಬಂದಿದೆ. ಬುಧವಾರ (ಮಾ.4) 3800 ಕ್ವಿಂಟಲ್ ಅರಿಶಿಣ ಮಾರಾಟವಾಗಿದ್ದು, ಕನಿಷ್ಠ ರೂ. ಸೋಮವಾರ (ಮಾ.2) 4000 ಕ್ವಿಂಟಾಲ್ ಅರಿಶಿನ ಆಮದು ಮಾಡಿಕೊಳ್ಳಲಾಗಿದ್ದು, ಪ್ರತಿ ಕ್ವಿಂಟಲ್ ಗೆ ಕನಿಷ್ಠ 6200 ರೂ.ನಿಂದ ಗರಿಷ್ಠ 7500 ರೂ.ವರೆಗೆ ಖರೀದಿಯಾಗುತ್ತಿದೆ.

Bitter Gourd :ಹೈಬ್ರೀಡ್‌ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್‌ ಟಿಪ್ಸ್‌

Bottle Gourd Home Gardening! ಮನೆಯಲ್ಲಿಯೇ ಬೆಳೆಯಿರಿ!

ಕಳೆದ ವಾರಕ್ಕೆ ಹೋಲಿಸಿದರೆ ಕ್ವಿಂಟಾಲ್‌ಗೆ 400 ರಿಂದ 500 ರೂ.ಗಳಷ್ಟು ಕಡಿಮೆಯಾಗಿದೆ. ಕಳೆದ ವಾರ ಸೋಮವಾರ (25) ಅರಿಶಿಣ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 6 ಸಾವಿರದಿಂದ ಗರಿಷ್ಠ 8 ಸಾವಿರ ರೂ.ವರೆಗೆ ಕ್ವಿಂಟಲ್‌ಗೆ ಸರಾಸರಿ 7 ಸಾವಿರ ರೂ. ಮಂಗಳವಾರ (ಫೆ.26) ಅರಿಶಿಣ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 6,800 ರೂ.ನಿಂದ ಗರಿಷ್ಠ 7,580 ರೂ.ವರೆಗೆ ಮತ್ತು ಸರಾಸರಿ 7,300 ರೂ ಇತ್ತು.

ಶುಕ್ರವಾರ (ಫೆ.29) ಅರಿಶಿಣ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 6,600 ರೂ.ನಿಂದ ಗರಿಷ್ಠ 7,711 ರೂ.ವರೆಗೆ ಮತ್ತು ಸರಾಸರಿ 7,155 ರೂ. ಕಳೆದ ವರ್ಷ (2021) ಏಪ್ರಿಲ್‌ನಲ್ಲಿ ಪ್ರತಿ ಕ್ವಿಂಟಲ್‌ಗೆ ಸರಾಸರಿ 7,865 ರೂ.ಗಳಷ್ಟಿದ್ದ ಅರಿಶಿನ ಬೆಲೆ ಮೇ ತಿಂಗಳಲ್ಲಿ 7,032 ರೂ.ಗಳಷ್ಟಿತ್ತು ಎಂದು ಮೂಲಗಳು ತಿಳಿಸಿವೆ.

Bengaluru: ತಲೆ ಎತ್ತಲಿದೆ 85 ಕೋಟಿಯ ಕೆಂಪೆಗೌಡರ ಪ್ರತಿಮೆ: ದೆಹಲಿಯಿಂದ ಬೆಂಗಳೂರಿಗೆ 4 ಸಾವಿರ ಕೆ.ಜಿ ತೂಕದ ಖಡ್ಗ!

ಹಾವೇರಿಯಲ್ಲಿ “ಮೀನು ಹಬ್ಬ” ಆರಂಭ: ವಿಶೇಷ ಆಚರಣೆಯ ಬಗ್ಗೆ ನಿಮಗೆ ಗೊತ್ತೆ! ಇಲ್ಲಿದೆ ಕಂಪ್ಲಿಟ್ ಮಾಹಿತಿ.

Published On: 09 May 2022, 10:11 AM English Summary: Farmers Dump Turmeric Produce Outside MP Residence

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.