ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಹಲವು ಪ್ರದೇಶದ ಜನ ಚಳಿಯಿಂದ ನಡಗುವ ಪರಿಸ್ಥಿತಿ ನಿರ್ಮಾಣವಾಗಿದೆ
ಯುವಕರಿಗೆ ಪ್ರತಿ ತಿಂಗಳು 10 ಸಾವಿರ ಉದ್ಯೋಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನವದೆಹಲಿ ಸೇರಿದಂತೆ ಹರಿಯಾಣ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚಳಿ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭಾನುವಾರ ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಇದು ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದ ಚಳಿ ಎಂದು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Sugarcane Growers| ಕಬ್ಬು ಬೆಳೆಗಾರರಿಗೆ ವಂಚನೆ: 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ!
ದೆಹಲಿಯ ಹಲವು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನ ಕಂಡು ಬಂದಿದ್ದು, ಇಲ್ಲಿ ದಟ್ಟವಾದ ಚಳಿ ಹಾಗೂ ಮಂಜು ಆವರಿಸಿರುವುದು ವರದಿ ಆಗಿದೆ. ಚಳಿಯಿಂದ ಅಲ್ಲಲ್ಲಿ ಮೈಕಾಯಿಸಿಕೊಳ್ಳುವುದು ಮಾಮೂಲಿ ಆಗಿದೆ. ಇನ್ನು ಗರಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 4.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
PM Kisan| ಪಿ.ಎಂ ಕಿಸಾನ್ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ
ಸೋಮವಾರ ದೆಹಲಿಯಲ್ಲಿ 5ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ವರದಿಯಾಗಿದ್ದು, ಬಹುತೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಮತ್ತು ಶೀತದ ವಾತಾವರಣ ವರದಿ ಆಗಿದೆ. ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯವು ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಪ್ರಮಾಣವು ಸಾಮಾನ್ಯವಾಗಿ ವರದಿ ಆಗುವ ಕನಿಷ್ಠ ತಾಪಮಾನಕ್ಕಿಂತ ಮೂರು ಪ್ರಮಾಣ ಕಡಿಮೆ ಎಂದು ಹೇಳಲಾಗಿದೆ.
ವಧು ಹುಡುಕಿಕೊಡಿ ಎಂದು ಕುದುರೆಯಲ್ಲಿ ಬಂದರು!
ಇನ್ನು ಗರಿಷ್ಠ ತಾಪಮಾನವು 16.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸಹ ವಾಡಿಕೆ ನಿರೀಕ್ಷಿತ ತಾಪಮಾನಕ್ಕಿಂತ ಸುಮಾರು ಐದು ಪಟ್ಟು ಕಡಿಮೆ ಆಗಿದೆ.
ಈ ವರ್ಷ ಚಳಿಗಾಲದ ಋತುವಿನಲ್ಲಿ ಭಾನುವಾರದ ಕನಿಷ್ಠ ತಾಪಮಾನವೇ (ಕನಿಷ್ಠ 03 ಡಿ.ಸೆ) ಇದು ಇಲ್ಲಿಯವರೆಗೆ ದಾಖಲೆಯ ಮಟ್ಟದ ಚಳಿ ಆಗಿದೆ. ದೆಹಲಿಯ ರಿಜ್ಡ್ ಪ್ರದೇಶ ರಾಜಧಾನಿಯ ಅತ್ಯಂತ ಚಳಿಯ ಪ್ರದೇಶವಾಗಿದೆ. ರಿಜ್ಟ್ ಪ್ರದೇಶದ ಹೊರತಾಗಿ ದೆಹಲಿಯ ಬೇರೆಡೆ ಮಾಪನ ಕೇಂದ್ರಗಳಲ್ಲಿ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದ್ದು, ಇದು ಸಹ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶವಾಗಿದೆ.
ಚೀನಾವನ್ನು ಕಾಡುತ್ತಿರುವ ಬಿಎಫ್7 ವೈರಸ್ ಭಾರತಕ್ಕೂ ಎಂಟ್ರಿ!
ಬಯಲು ಪ್ರದೇಶದಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ ಅದನ್ನು ಶೀತದ ಅಲೆ ಎಂದು ಘೋಷಿಸಲಾಗುತ್ತದೆ. ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಆದಾಗ ಶೀತ ವಾತಾವರಣದ ಸೃಷ್ಟಿಯ ಹಂತ ಎಂದು ಪರಿಗಣಿಸಲಾಗುತ್ತದೆ. ಕನಿಷ್ಠ 02 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಇಳಿಕೆಯಾದರೆ, ಅದನ್ನು ತೀವ್ರಶೀತ ಅಲೆ ಎಂದು ಕರೆಯಲಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Share your comments