1. ಸುದ್ದಿಗಳು

ಚೀನಾವನ್ನು ಕಾಡುತ್ತಿರುವ ಬಿಎಫ್‌7 ವೈರಸ್‌ ಭಾರತಕ್ಕೂ ಎಂಟ್ರಿ!

Hitesh
Hitesh
The BF7 virus that is bothering China has entered India too!

ಜಗತ್ತನ್ನು ಆತಂಕಕ್ಕೆ ದೂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಹಾಗೂ ಓಮೈಕ್ರಾನ್‌ನ ಉಪ ತಳಿ ಎಂದು ಗುರುತಿಸಲಾಗಿರುವ ಬಿಎಫ್‌ 7 ವೈರಸ್‌ ಸೋಂಕು ಭಾರತದಲ್ಲೂ ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

ಹೌದು ಭಾರತದ ವಿವಿಧ ರಾಜ್ಯಗಳಲ್ಲಿ ಬಿಎಫ್.7 ವೈರಸ್ ದೃಢಪಟ್ಟಿದೆ. ಚೀನಾದಲ್ಲಿ ಈ ವೈರಸ್‌ನಿಂದ ಲಕ್ಷಾಂತರ ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೇ ಲಕ್ಷಾಂತರ ಜನ ಈ ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವನ್ನು ಅನುಸರಿಸುವಂತೆ ಹಾಗೂ ಮುಂದಿನ ಮೂರು ತಿಂಗಳುಗಳ ಕಾಲ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಲಾಗಿದೆ. 

ಬಿಎಫ್‌ 7 ವೈರಸ್‌ನ ಮೊದಲ ಪ್ರಕರಣ ಕಳೆದ ಅಕ್ಟೋಬರ್‌ನಲ್ಲಿ ಗುಜರಾತ್‌ನ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್‌ನಲ್ಲಿ ದೃಢಪಟ್ಟಿತ್ತು. ಅಲ್ಲದೇ ಇದಕ್ಕೂ ಮುನ್ನವೂ ಗುಜರಾತ್‌ನಿಂದ ಎರಡು ಪ್ರಕರಣಗಳು ವರದಿಯಾಗಿದ್ದು, ಒಡಿಶಾದಿಂದ ಒಂದು ಪ್ರಕರಣ ವರದಿಯಾಗಿದೆ.

Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈಗಾಗಲೇ ಬಿಎಫ್‌ 7 ವೈರಸ್‌ ಚೀನಾ, ಜಪಾನ್, ಬ್ರೆಜಿಲ್, ಯುಎಸ್ ಮತ್ತು ಕೊರಿಯಾದಲ್ಲಿ ಹೆಚ್ಚಾಗುತ್ತಿದ್ದು, ಭಾರತದಲ್ಲಿಯೂ ಇದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿಯೂ ತುರ್ತು ಕ್ರಮಗಳನ್ನು ಅನುಸರಿಸುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಅವರು ಮಾತನಾಡಿ, ಬಿಎಫ್‌ 7 ವೈರಸ್‌ ಬೆಳವಣಿಗೆ ನಿಜಕ್ಕೂ ಆತಂಕಕಾರಿಯಾಗಿದೆ. ರಾಜ್ಯವು ಕೂಡಲೇ ಮುಂಜಾಗ್ರತಾ ಕ್ರಮಗಳ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

The BF7 virus that is bothering China has entered India too!

ಅಲ್ಲದೇ  ಮಾಸ್ಕ್ ಕಡ್ಡಾಯ ಮಾಡುವುದು, ಬೂಸ್ಟರ್ ಡೋಸ್‌ಗಳ ನೀಡುವುದು ಮತ್ತು ಮೂರನೆಯದಾಗಿ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಪರೀಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ  ನೀಡಿದ್ದಾರೆ.

ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ಮೊದಲು ಬೂಸ್ಟರ್ ಡೋಸ್ ಲಸಿಕೆ ನೀಡುವಿಕೆಯನ್ನು ಹೆಚ್ಚಿಸಬೇಕು. ಕೋವಿಡ್ ಲಸಿಕೆಯನ್ನು ಎರಡು ಡೋಸ್ ಪಡೆದ ಎಲ್ಲರೂ ತಕ್ಷಣವೇ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು, ಅದನ್ನು ಖರೀದಿಸಿ ರಾಜ್ಯದಾದ್ಯಂತ ಜನರಿಗೆ ಲಭ್ಯವಾಗುವಂತೆ ಮಾಡಬೇಕು. ಮುಂದೆ, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ರೋಗಲಕ್ಷಣಗಳನ್ನು ಇರುವವರನ್ನು ಕೂಡಲೇ ಪರೀಕ್ಷೆಗೊಳಪಡಿಸಿ, ಐಸೋಲೇಷನ್ ನಲ್ಲಿ ಇರಿಸಬೇಕು. ಮಾಸ್ಕ್‌ಗಳನ್ನು ಕಡ್ಡಾಯಗೊಳಿಸುವುದು ಪ್ರಮುಖವಾಗಿದೆ. ಎಲ್ಲಾ ಮುಚ್ಚಿದ ಸ್ಥಳಗಳಲ್ಲಿ ಮತ್ತು ಒಳಾಂಗಣದಲ್ಲಿ ಮಾಸ್ಕ್ ಕಡ್ಡಾಯ ಮಾಡಬೇಕು ಎಂದು ತಿಳಿಸಿದ್ದಾರೆ.

The BF7 virus that is bothering China has entered India too!

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ತಜ್ಞರು, ಸದ್ಯಕ್ಕೆ ಕೋವಿಡ್ ಕೇಸೆಲೋಡ್‌ನಲ್ಲಿ ಒಟ್ಟಾರೆ ಯಾವುದೇ ಹೆಚ್ಚಳವಿಲ್ಲವಾದರೂ, ಅಸ್ತಿತ್ವದಲ್ಲಿರುವ ಮತ್ತು ಹೊಸ ರೂಪಾಂತರಗಳ ಜಾಡನ್ನು ಪತ್ತೆಹಚ್ಚಲು ನಿರಂತರ ಕಣ್ಗಾವಲು ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಳ ಸೇರಿದಂತೆ ಕೋವಿಡ್ ಸೋಂಕಿನ ಸ್ಥಿತಿಗತಿ ಮೇಲೆ ಕಣ್ಗಾವಲು ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಡಾ ಸುದರ್ಶನ್ ಅವರು, ಪಾಸಿಟಿವ್ ಬಂದ ಜನರ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಳಿಗಾಗಿ ಜೀನೋಮಿಕ್ ಅನುಕ್ರಮಕ್ಕಾಗಿ ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಚೀನಾದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್‌: ವಿಶ್ವದೆಲ್ಲೆಡೆ ಆತಂಕ! 

Published On: 22 December 2022, 12:24 PM English Summary: The BF7 virus that is bothering China has entered India too!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.