1. ಸುದ್ದಿಗಳು

ಚೀನಾದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್‌: ವಿಶ್ವದೆಲ್ಲೆಡೆ ಆತಂಕ!

Hitesh
Hitesh
Covid has increased again in China: worry all over the world!

ಚೀನಾದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ವಿಶ್ವದಾದ್ಯಂತ ಆತಂಕ ಹೆಚ್ಚಳವಾಗಿದೆ.

ಕೇರಳದಲ್ಲಿ ಹಕ್ಕಿ ಜ್ವರ ಉಲ್ಬಣ: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಆತಂಕ 

ಕಳೆದ ಕೆಲವು ವಾರಗಳಿಂದ ಚೀನಾದಲ್ಲಿ ಹಲವು ಭಾಗದಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಆಗುತ್ತಿದೆ. ಶೇ.60 ಚೀನಿಯರಿಗೆ ಮುಂದಿನ ಮೂರು ತಿಂಗಳಲ್ಲಿ ಕೋವಿಡ್‌ ಸೋಂಕು ತಗಲುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

Cylinder ಬಳಕೆದಾರರಿಗೆ ಸಿಹಿಸುದ್ದಿ: ಮುಂದಿನ ತಿಂಗಳಿಂದ ಕೇವಲ 500ಕ್ಕೆ ಸಿಗಲಿದೆ ಸಿಲಿಂಡರ್‌ !

ಅಲ್ಲದೇ ಕೋವಿಡ್‌ ಸೋಂಕಿನಿಂದಾಗಿ ಚೀನಾದಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ 21 ಲಕ್ಷ ಜನ ಸಾವನ್ನಪ್ಪುವ ಸಾಧ್ಯತೆ ಇದೆ. ಹೀಗಾಗಿ, ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗುತ್ತಿದೆ.  ಕೋವಿಡ್‌ನಿಂದಾಗಿ 21 ಲಕ್ಷ ಜನ ಸಾವನ್ನಪ್ಪಬಹುದು ಎಂದು ಅಮೆರಿಕ, ಬ್ರಿಟನ್‌ನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಚೆಗೆ ಚೀನಾದಲ್ಲಿ ಜನರ ತೀವ್ರ ಆಕ್ರೋಶದಿಂದಾಗಿ ಎಲ್ಲ ಮಾದರಿಯ ನಿರ್ಬಂಧಗಳನ್ನು ಅಲ್ಲಿನ ಸರ್ಕಾರ ತೆಗೆದುಹಾಕಿತ್ತು.   

Covid has increased again in China: worry all over the world!

ಇನ್ನು 3 ತಿಂಗಳಲ್ಲಿ ಶೇ.60ಕ್ಕೂ ಹೆಚ್ಚು ಚೀನಾದ ಜನಸಂಖ್ಯೆಗೆ (Population) ಕೋವಿಡ್‌ ಸೋಂಕು ತಗುಲಲಿದೆ ಎಂದು ಎಚ್ಚರಿಸಿದ್ದಾರೆ

ಚೀನಾ ಜನರಲ್ಲಿ ಪ್ರತಿಕಾಯ ಶಕ್ತಿ ಕಮ್ಮಿ ಇದೆ. ಅಲ್ಲದೆ ಸ್ವದೇಶಿ ನಿರ್ಮಿತ 2 ಲಸಿಕೆ ಪರಿಣಾಮಕಾರಿಯಲ್ಲ ಎಂದು ರುಜುವಾತಾಗಿದೆ. ಹೀಗಾಗಿ 13ರಿಂದ 21 ಲಕ್ಷ ಜನ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ‘ಏರ್‌ಫಿನಿಟಿ’ ಎಂಬ ಚಿಂತಕರ ತಂಡ ತಿಳಿಸಿದ್ದಾರೆ.

Covid has increased again in China: worry all over the world!

ಕೋವಿಡ್‌ ಹೆಚ್ಚಳಕ್ಕೆ ಕಾರಣವಾದರೂ ಏನು  

ಚೀನಾದಲ್ಲಿ ವೃದ್ಧರು ಕೋವಿಡ್‌ ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಕಡೆ 3ನೇ ಡೋಸ್‌ ಲಸಿಕಾಕರಣವೇ ಆರಂಭವಾಗಿಲ್ಲ. ಅಲ್ಲದೆ, ಚೀನಾ ಲಸಿಕೆಗೆ ವಿಶ್ವ ಮನ್ನಣೆ ಕೂಡ ಇಲ್ಲ.

ಇನ್ನು ಕೋವಿಡ್‌ ಶೂನ್ಯ ಸಹಿಷ್ಣುತೆ ಕಾರಣ ವಿಧಿಸಲಾದ ನಿರ್ಬಂಧದಿಂದ ಅನೇಕ ಚೀನೀಯರು 2 ವರ್ಷದಿಂದ ಮನೆ ಹೊರಗೇ ಬಂದಿರಲಿಲ್ಲ. ಅಂಥವರಿಗೆ ಹೊರಗಿನ ವಾತಾವರಣದಲ್ಲಿನ ಪ್ರತಿಕಾಯ ಶಕ್ತಿ ಇಲ್ಲ.

ಈಗ ಲಾಕ್‌ಡೌನ್‌ ತೆರವು ಕಾರಣ ಅವರು ಹೊರ ಬರುತ್ತಿದ್ದು, ಅವರಿಗೆ ಬೇಗ ಕೋವಿಡ್‌ ತಗಲುತ್ತಿದೆ. ಹೀಗಾಗಿ ಚೀನಾದಲ್ಲಿ ಕೋವಿಡ್‌ ಹೆಚ್ಚಳ ಆಗುತ್ತಿದೆ ಎನ್ನಲಾಗಿದೆ.  

Published On: 21 December 2022, 02:45 PM English Summary: Covid has increased again in China: worry all over the world!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.