1. ಸುದ್ದಿಗಳು

ಮಹಿಳೆಯರಿಗೆ ಗುಡ್‌ನ್ಯೂಸ್‌: ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೆಲಸದಲ್ಲಿ ಶೇ 50 ರಷ್ಟು ವಿನಾಯಿತಿ

Maltesh
Maltesh
50% exemption from work for pregnant women

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಅಧಿಕ ಮಾಡುವ ಸಲುವಾಗಿ ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಇನ್ನು ಮುಂದೆ ನರೇಗಾ ಅಡಿಯಲ್ಲಿ ಒಂದು ದಿನಕ್ಕೆ ನಿಗದಿಪಡಿಸಿ ಕೂಲಿ ಪಡೆಯಲು ಮಾಡಬೇಕಾದ ಕೆಲಸದಲ್ಲಿ ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ 50% ರಷ್ಟು ವಿನಾಯಿತಿಯನ್ನು ನೀಡುವುದಾಗಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್‌ಗಳ  CEO ಗಳಿಗೆ ಆದೇಶ ಹೊರಡಿಸಿದೆ.

ಕೊರೊನಾ ಭೀತಿ : 4 ವರ್ಷಗಳಿಂದ ಮನೆಯಿಂದ ಹೊರ ಬಾರದ ತಾಯಿ ಮಗಳು

ಈ ಮೊದಲಿನಿಂದಲೂ  ಈ ಯೋಜನೆಯಡಿ  ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ 1 ದಿನದ ಕೂಲಿ ಕೆಲಸದ ಪ್ರಮಾಣದಲ್ಲಿ ಶೇ.50 ರಿಯಾಯಿತಿ ನೀಡುತ್ತಿರುವ ಸರ್ಕಾರ ಇದನ್ನು ಗರ್ಭಿಣಿ ಮಹಿಳೆಯರಿಗೆ ಹಾಗೂ ಬಾಣಂತಿಯರಿಗೂ ವಿಸ್ತರಿಸಿ ಆದೇಶ ಹೊರಡಿಸಿದೆ.

ರೀಯಾಯತಿ ವಿಸ್ತರಣೆ ಹೇಗೆ..?

6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗು ಜನನ ಆಗುವ ಸಮಯದವರೆಗೆ

ಬಾಣಂತಿಯರಿಗೆ ಮಗು ಜನಸಿದ ದಿನದಿಂದ ಮುಂದಿನ 6 ತಿಂಗಳ ಅವಧಿ

Swiggy: ಸ್ವಿಗ್ಗಿಯಲ್ಲಿ ₹ 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ..!

ಈ ಎರಡು ಸಮಯದಲ್ಲಿ  ನಿಗದಿತ ಕೂಲಿ ಪಡೆಯಲು ಕೆಲಸದ ಪ್ರಮಾಣದಲ್ಲಿ 50 % ರಷ್ಟು ರೀಯಾಯಿತಿ ನೀಡಲು ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಂದರೇನು..?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ MNREGA, ಮೊದಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ ಅಥವಾ NREGA ಎಂದು ಕರೆಯಲಾಗುತ್ತಿತ್ತು, ಇದು ಭಾರತೀಯ ಕಾರ್ಮಿಕ ಕಾನೂನು ಮತ್ತು ಸಾಮಾಜಿಕ ಭದ್ರತಾ ಕ್ರಮವಾಗಿದ್ದು ಅದು 'ಕೆಲಸ ಮಾಡುವ ಹಕ್ಕನ್ನು' ಖಾತರಿಪಡಿಸುವ ಗುರಿಯನ್ನು ಹೊಂದಿದೆ.

ವಿಶ್ವದ ಅತಿದೊಡ್ಡ ಸಿಲಿಂಡರಾಕಾರದ ಅಕ್ವೇರಿಯಂ ಸ್ಫೋಟ: 1,500ಕ್ಕೂ ಹೆಚ್ಚು ಮೀನುಗಳ ಸಾವು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಯೋಜನೆಯನ್ನು 2005ರ ಸೆಪ್ಟೆಂಬರ್ 5ರಂದು ಜಾರಿಗೆ ತರಲಾಯಿತು

ಈ ಯೋಜನೆಯಡಿ ಉದ್ಯೋಗಾವಕಾಶ ಕಲ್ಪಿಸುವುದು.

ಇದು ನೈಸರ್ಗಿಕ ಸಂಪನ್ಮೂಲಗಳನ್ನು ಪುನರ್ನಿರ್ಮಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ಮತ್ತು ಆಸ್ತಿಗಳನ್ನು ಸೃಷ್ಟಿಸುವ ಗುರಿ ಹೊಂದಿದ

Published On: 21 December 2022, 02:47 PM English Summary: 50% exemption from work for pregnant women

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.