1. ಸುದ್ದಿಗಳು

EPFO Good News: ಸದ್ಯದಲ್ಲೇ ನಿಮ್ಮ ಖಾತೆಗೆ ಬರಲಿದೆ PF ಬಡ್ಡಿ ಹಣ! ಯಾವಾಗ ತಿಳಿಯಿರಿ

Kalmesh T
Kalmesh T
EPFO Good News: PF interest money will come to your account soon!

ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ನೀಡಲಿದೆ ಗುಡ್‌ನ್ಯೂಸ್‌. ಕೇಂದ್ರ ನೌಕರರ ಪಿಎಫ್ ಖಾತೆಗೆ ಬಡ್ಡಿ ಮೊತ್ತವನ್ನು ವರ್ಗಾಯಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿರಿ: ರೈತರ ಆದಾಯ ಹೆಚ್ಚಿಸಲು ಕೃಷಿ ತಜ್ಞರ ಸಲಹೆಗಳು; ರೈತರೆಲ್ಲ ಓದಲೆಬೇಕಾದ ವಿಷಯ..

ಕೇಂದ್ರ ಸರ್ಕಾರ ಶೀಘ್ರದಲ್ಲೇ ಕೇಂದ್ರ ನೌಕರರ ಪಿಎಫ್ ಖಾತೆಗೆ ಬಡ್ಡಿ ಮೊತ್ತವನ್ನು ವರ್ಗಾಯಿಸಲಿದೆ ಎಂದು ವರದಿಯಾಗಿದೆ. ಈ ತಿಂಗಳ ಕೊನೆಯೊಳಗೆ ಬಡ್ಡಿ ಹಣ ನಿಮ್ಮ ಖಾತೆಗೆ ಜಮೆ ಆಗಬಹುದು.

ಆದರೆ ಈ ಬಗ್ಗೆ ಅಧಿಕೃತವ ಮಾಹಿತಿ ಬಂದಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಬಡ್ಡಿ ಹಣ ವರ್ಗಾಯಿಸಿತ್ತು

ಕೇಂದ್ರ ಸರ್ಕಾರ ಪಿಎಫ್ ಮೇಲೆ ಶೇ.8.1ರಷ್ಟು ಬಡ್ಡಿ ನೀಡಲಾಗುವುದು ಎಂದು ಘೋಷಿಸಿದೆ. ಕಳೆದ 40 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಬಡ್ಡಿದರವಾಗಿದೆ.

ಕಳೆದ ವರ್ಷ ಶೇ.8.5ರಷ್ಟು ಬಡ್ಡಿ ಪಡೆಯಲಿದ್ದಾರೆ. 1977-78ರ ಬಳಿಕ ಮೊದಲ ಬಾರಿಗೆ ಶೇ.8.1 ಬಡ್ಡಿ ಪಡೆಯಲಿದ್ದಾರೆ.

Beekeeping: ಜೇನು ಉತ್ಪಾದನೆ ಉತ್ತೇಜಿಸಲು ಸರ್ಕಾರದಿಂದ ₹500 ಕೋಟಿ ಅನುಮೋದನೆ!

ಉದಾಹರಣೆಗೆ ನಿಮ್ಮ ಖಾತೆಯಲ್ಲಿ 10 ಲಕ್ಷ ರೂಪಾಯಿ ಇದ್ದರೆ, ನಿಮಗೆ 81,000 ರೂಪಾಯಿ ಬಡ್ಡಿ ಸಿಗುತ್ತದೆ. ನಿಮ್ಮ ಪಿಎಫ್ ಖಾತೆಯಲ್ಲಿ 7 ಲಕ್ಷ ರೂ.ಗಳಿದ್ರೆ 59,700 ರೂ ಬಡ್ಡಿ ನಿಮಗೆ ಸಿಗಲಿದೆ. 5 ಲಕ್ಷಕ್ಕೆ 40,500 ರೂ, 1 ಲಕ್ಷಕ್ಕೆ 8,100 ರೂ ಬಡ್ಡಿ ಸಿಗಲಿದೆ.

ಪಿಎಫ್ ಬ್ಯಾಲೆನ್ಸ್ನ್ನು SMS, Missed Call ನೀಡುವ ಮೂಲಕ ತಿಳಿದುಕೊಳ್ಳಬಹುದು. EPFO ವೆಬ್ಸೈಟ್ ಗೆ ಭೇಟಿ ನೀಡಿ ಬ್ಯಾಲೆನ್ಸ್ ನೋಡಬಹುದು. UMANG ಅಪ್ಲಿಕೇಶನ್ ಮೂಲಕವೂ ಬ್ಯಾಲೆನ್ಸ್ ಪರಿಶೀಲಿಸಬಹುದು

ಆನ್‌ಲೈನ್‌ನಲ್ಲಿ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು, ನೀವು ಇಪಿಎಫ್ ಪಾಸ್‌ಬುಕ್ ಪೋರ್ಟಲ್‌ಗೆ ಭೇಟಿ ನೀಡಿ. ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ಈ ಪೋರ್ಟಲ್‌ಗೆ ಲಾಗಿನ್ ಮಾಡಿ.

ಇದರಲ್ಲಿ, ಡೌನ್‌ಲೋಡ್ / ವೀಕ್ಷಿಸಿ ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿ. ನಂತರ ಪಾಸ್‌ಬುಕ್ ನಿಮ್ಮ ಮುಂದೆ ತೆರೆಯುತ್ತದೆ. ಇಲ್ಲಿ ನೀವು ಬ್ಯಾಲೆನ್ಸ್ ನೋಡಬಹುದು.

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ

SMS ಮೂಲಕ ಬ್ಯಾಲೆನ್ಸ್ ತಿಳಿದುಕೊಳ್ಳಲು ನೊಂದಾಯಿತ ಮೊಬೈಲ್ ಸಂಖ್ಯೆಯಿಂದ EPFO UAN LAN (ಭಾಷೆ) ಸಂದೇಶವನ್ನು 7738299899 ಗೆ ಕಳುಹಿಸಬೇಕು.

LAN ಎಂದರೆ ನಿಮ್ಮ ಭಾಷೆ ಎಂದರ್ಥ. ನಿಮಗೆ ಇಂಗ್ಲಿಷ್‌ನಲ್ಲಿ ಮಾಹಿತಿ ಬೇಕಾದರೆ ನೀವು LAN ಬದಲಿಗೆ ENG ಎಂದು ಬರೆಯಬೇಕು

ಮಿಸ್ಡ್ ಕಾಲ್ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ತಿಳಿಯಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ನಂಬರ್ಗೆ ಮಿಸ್ಡ್ ಕಾಲ್ ನೀಡಿ.

ಉಮಾಂಗ್ ಅಪ್ಲಿಕೇಶನ್ ತೆರೆದು EPFO ಮೇಲೆ ಒತ್ತಿ. ನಂತರ Employee Centric Services ಮೇಲೆ ಕ್ಲಿಕ್ ಮಾಡಿ. ನಂತರ View Passbook ಮೇಲೆ ಕ್ಲಿಕ್ ಮಾಡಿದಾಗ UAN ಮತ್ತು ಪಾಸ್‌ವರ್ಡ್ ನಮೂದಿಸಿ.

ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿದ ನಂತರ, ನೀವು EPF ಬ್ಯಾಲೆನ್ಸ್ ಅನ್ನು ನೋಡಬಹುದು.

Published On: 14 August 2022, 11:57 AM English Summary: EPFO Good News: PF interest money will come to your account soon!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.