1. ಪಶುಸಂಗೋಪನೆ

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ

Kalmesh T
Kalmesh T
ಯುವ ರೈತ ಪ್ರಶಾಂತ ದೇವರ

ಮಿಶ್ರ ತಳಿ ಆಕಳುಗಳಾದ (ಎಚ್. ಎಫ್ ಮತ್ತು ಜೆರ್ಸಿ) ತಂಪಾದ ಹವಮಾನಕ್ಕೆ ಸೂಕ್ತ. ಆದರೆ, ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಬಿಸಿಲಿನ ಪ್ರದೇಶದಲ್ಲಿ ಸಹ ಮಿಶ್ರ ತಳಿ ಆಕಳುಗಳನ್ನು ಸಾಕಿ ಯಶಸ್ಸು ಗಳಿಸಲು ಸಾಧ್ಯ ಎಂಬುದಕ್ಕೆ ಯುವ ರೈತ ಪ್ರಶಾಂತ ದೇವರ ಉದಾಹರಣೆಯಾಗಿದ್ದಾರೆ. ಅವರ ಯಶೋಗಾಥೆ ಇತರೆ ರೈತರಿಗೂ ಸ್ಪೂರ್ತಿಯಾಗಲಿ ಎಂಬದು ಈ ಲೇಖನದ ಆಶಯವಾಗಿದೆ.

ಇದನ್ನೂ ಓದಿರಿ: ₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌..

ಹೈನುಗಾರಿಕೆ ಒಂದು ಪ್ರಮುಖ ಉಪಕಸುಬಾಗಿದ್ದು, ಇದರಿಂದ ದಿನನಿತ್ಯ ಆದಾಯಗಳಿಸಲು ಸಾಧ್ಯವಾಗುತ್ತದೆ. ಇತ್ತಿಚೀನ ದಿನಗಳಲ್ಲಿ ಹಲವಾರು ಯುವಕರು ಹೈನುಗಾರಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಜೊತೆಯಲ್ಲಿ ಹೈನುಗಾರಿಕೆಯಲ್ಲಿ ಯಶಸ್ಸು ಪಡೆಯಬೇಕಾದರೆ, ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಬಹುಮುಖ್ಯವಾಗುತ್ತದೆ.

ಸತತವಾಗಿ 3 ರಿಂದ 4 ವರ್ಷದಿಂದ ತೀವ್ರವಾದ ಬರಗಾಲ ವಿಜಯಪುರ ಜಿಲ್ಲೆ ಅದರಲ್ಲೂ ಇಂಡಿ ತಾಲ್ಲೂಕಿನ ರೈತರನ್ನು ಕಾಡುತ್ತಲಿದೆ. ಬರಗಾಲದಿಂದ ಬೆಳೆ ಹಾನಿ, ಕುಂಠಿತ ಬೆಳವಣಿಗೆ ಇನ್ನಿತರೆ ಸಮಸ್ಯೆಗಳಿಗೆ ತುತ್ತಾಗಿ ಬಹಳಷ್ಟು ರೈತರು ಕಂಗಾಲಾಗಿದ್ದನ್ನು ಕಾಣಲಾಗಿದೆ. ಮುಂದುವರೆದು, ಪಶುಸಂಗೋಪನೆಯಲ್ಲಿ ತೊಡಗಿದ ರೈತರಿಗೆ ಈ ಸಮಯದಲ್ಲಿ ಮೇವಿನ ಕೊರತೆಯಿಂದ ತಮ್ಮ ಜಾನುವಾರುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿತ್ತು.

ಈ ಎಲ್ಲಾ ಪರಿಸ್ಥಿತಿಗಳನ್ನು ಮನಗಂಡು ವೈಜ್ಞಾನಿಕವಾಗಿ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳುವ ಗುರಿ ಇಟ್ಟ್ಟುಕೊಂಡು ಪ್ರಶಾಂತ ದೇವರ ಅವರು ಕೃಷಿ ಜೊತೆ ಉಪಕಸುಬಾಗಿ ಹೈನುಗಾರಿಕೆಯನ್ನು ಆರಂಭಿಸಿದರು.

29 ವಯಸ್ಸಿನ ಯುವ ಕೃಷಿಕ ಪ್ರಶಾಂತ ದೇವರ ಐ.ಟಿ.ಐ. ಪದವಿಯನ್ನು ಮುಗಿಸಿ ಬೆಂಗಳೂರಿನ ಹಲವಾರು ಖಾಸಗಿ ಕಂಪನಿಗಳಲ್ಲಿ ಸುಮಾರು 3 ವರ್ಷಗಳವರೆಗೆ ಸೇವೆಯನ್ನು ಸಲ್ಲಿಸಿದ್ದರು. ಆದರೆ, ಕೆಲಸದ ಒತ್ತಡ, ಕೆಲಸದಲಿ ಸಂತ್ರೃಪ್ತಿ ಇರದೆ ಇರುವುದು ಹಾಗೂ ಇನ್ನಿತರೆ ಕುಟುಂಬದ ಸಮಸ್ಯೆಗಳನ್ನು ಮನಗಂಡು ಅವರು ಕುಟುಂಬದ ಜೊತೆ ಸೇರಿ ಹೈನುಗಾರಿಕೆ ಅಥವಾ ಆಡು ಸಾಕಾಣಿಕೆ ಮಾಡಲು ನಿರ್ಧರಿಸಿದ್ದರು.

ಕೃಷಿಯಲ್ಲಿ ಮೊದಲು ಇವರು ತೊಗರಿ, ಜೋಳ, ಕಡಲೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು ಇದರಲ್ಲಿ ಇವರಿಗೆ ಅಷ್ಟಾಗಿ ಲಾಭ ಬರುತ್ತಿರಲಿಲ. ಇವರು ಮೊದಲಿಗೆ ಪಕ್ಕದ ಮಹಾರಾಷ್ಟ್ರದ ಮತ್ತು ಇನ್ನಿತರೆ ರಾಜ್ಯಗಳಲ್ಲಿನ ಸುಮಾರು 30 ಡೈರಿ ಹಾಗೂ ಆಡು ಸಾಕಾಣಿಕೆ ಫಾರ್ಮಗಳನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದು ಸ್ವಯಂ ಪ್ರೇರಿತರಾಗಿ ಕೊನೆಯಲ್ಲಿ ಸ್ವತಃ ಹೈನುಗಾರಿಕೆ ಉದ್ಯಮವನ್ನಾಗಿ ಆರಂಭಿಸಲು ಮುಂದಾದರು.

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!

ಇವರು 2020 ರಲ್ಲಿ 02 ಮಿಶ್ರ ತಳಿಯ (ಎಚ್. ಎಫ್.) ಆಕಳುಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಮುಂದೆ ಇವರು ಹೈನುಗಾರಿಕೆ ಕುರಿತು ವಿವಿಧ ಸಂಸ್ಥೆಗಳಲ್ಲಿ ತರಬೇತಿ ಪಡೆದು ಮತ್ತು ಕೃಷಿ ಹಾಗೂ ಪಶುಸಂಗೋಪನೆಯ ನವೀನ ತಂತ್ರಜ್ಞಾನಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ, ಕೃಷಿ/ಪಶುಸಂಗೋಪನೆ ಅಧಿಕಾರಿಗಳಿಂದ ಮತ್ತು ಇನ್ನಿತರೆ ರೈತರಿಂದ ಮಾಹಿತಿ ಪಡೆದು, ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ತಳಿಗಳನ್ನು (ಎಚ್. ಎಫ್.) ಸಾಕಲು ನಿರ್ಧರಿಸಿದರು.

ಪ್ರಶಾಂತ ದೇವರ ಕೊಟ್ಟಿಗೆ ನಿರ್ಮಾಣ, ಆಕಗಳುಗಳ ಖರೀದಿ ಮತ್ತು ಇನ್ನಿತರೆ ಕೆಲಸಕ್ಕಾಗಿ ಒಟ್ಟಾರೆ ವೆಚ್ಚ 2,00,000/- ಲಕ್ಷದವರಗೆ ಖರ್ಚು ಬಂದಿದೆ ಎನ್ನುತ್ತಾರೆ. ಮೊದಲಿಗೆ ಎರಡು (2) ಮಿಶ್ರತಳಿಗಳನ್ನು ಖರೀದಿಸಿ ಒಂದು ದಿನಕ್ಕೆ ಸುಮಾರು 20 ರಿಂದ 25 ಲೀಟರ ಹಾಲಿನ ಇಳುವರಿ ಪಡೆದು ಆದಾಯವನ್ನು ಗಳಿಸುತ್ತಿದ್ದರು.

ಇದರಿಂದ ಸುಮಾರು ಒಂದು ವರ್ಷದಲ್ಲಿ ಬಂದಿರುವ ಆದಾಯದಲ್ಲಿ ಮಿಶ್ರತಳಿ ಆಕಳುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿ ಸದ್ಯಕ್ಕೆ ಹತ್ತು (10) ಹಾಲು ಹಿಂಡುವ ಆಕಳು ಮತ್ತು 8 ಕರುಗಳು ಸಾಕುತ್ತಿದ್ದಾರೆ. ಇವರು 04 ಎಕರೆ ಜಮೀನನ್ನು ಹೊಂದಿದ್ದು, 2 ಎಕರೆಯಲ್ಲಿ ‘ಮೇವಿನ ಕೆಫಿಟೇರಿಯಾ’ ಸ್ಥಾಪನೆ ಮಾಡಿ ಹೈಬ್ರಿಡ್ ನೇಪಿಯರ್ ಹುಲ್ಲು (ಕೋ-5), ಮೆಕ್ಕೆಜೋಳ ಹಾಗೂ ಕುದುರೆ ಮೆಂತೆಯನ್ನು ಬೆಳೆದು ಹೈನುಗಾರಿಕೆ ಮಾಡುತ್ತಿದ್ದಾರೆ.

ಹಾಲುಮಾರಾಟ:

ಪ್ರಶಾಂತ ದೇವರ ಇವರು ಹೈನುಗರಿಕೆಯನ್ನು ಪ್ರಾರಂಭಿಸಿದ ದಿನದಿಂದ ಕೆ.ಎಮ್.ಎಫ್ ಸೊಸೈಟಿಗೆ ಹಾಲು ಕಳುಹಿಸುತ್ತಿದ್ದರು. ಆದರೆ, ಕೆ.ಎಮ್.ಎಫ್ ಸೊಸೈಟಿಯ ಸೆಕ್ರೇಟರಿಯ ಸಮಸ್ಯೆಯಿಂದ ಮತ್ತು ಹಣವನ್ನು ಸರಿಯಾದ ಸಮಯದಲ್ಲಿ ಪಾವತಿಸದೆ ಇರುವುದರಿಂದ ಇವರು ನಿರಾಶೆಗೊಂಡು ಇಂಡಿ ತಾಲೂಕಿನ ಗೋಳಸಾರ ಗ್ರಾಮದ “ಕಾಯಕ ಸಿರಿ” ಎಂಬ ಹಾಲು ಒಕ್ಕೂಟಕ್ಕೆ ಹಾಲನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

“ಕಾಯಕ ಸಿರಿ” ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆಯನ್ನು ಮಾಡುತ್ತಿರುವ ರೈತರಾದ ರಾಜು ತೆಗ್ಗಿಹಳ್ಳಿ ಅವರು ಸುತ್ತಮುತ್ತ ಗ್ರಾಮದಿಂದ ಹಾಲನ್ನು ಸಂಗ್ರಹಿಸಿ, ಪ್ಯಾಕೆಟ್ ರೂಪದಲ್ಲಿ ಪ್ಯಾಕ್ ಮಾಡಿ ಕಾಯಕ ಸಿರಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಾಯಕ ಸಿರಿ ಸಹಾಯದಿಂದ ಪ್ರಶಾಂತ ದೇವರ ಅವರು ತಮ್ಮ ಮನೆಯ ಪಕ್ಕದಲ್ಲಿ ಹಾಲು ಒಕ್ಕ್ಕೂಟವನ್ನು ಪ್ರಾರಂಭಿಸಿದ್ದಾರೆ.

ಈ ಒಕ್ಕೂಟ್ಟಕ್ಕೆ ಇಂಡಿ ತಾಲುಕಿನ ಸುತ್ತಮುತ್ತ ಗ್ರಾಮದ ರೈತರು ಹಾಲನ್ನು ಮಾರಾಟ ಮಾಡುತ್ತಾರೆ, ಒಂದು ದಿನಕ್ಕೆ ಸುಮಾರು 250 ಲೀ. ಹಾಲು ಸಂಗ್ರಹಣೆ ಮಾಡಿ ಸಂಸ್ಕರಣೆ ಮಾಡಲು ಗೋಳಸಾರ ಗ್ರಾಮಕ್ಕೆ ಕಳಹಿಸುತ್ತಾರೆ. ಅವರ ಪ್ರಕಾರ ಈ ಒಂದು ವ್ಯವಸ್ಥೆಯಿಂದ ಅವರಿಗೆ ಸರಿಯಾದ ಸಮಯದಲ್ಲಿ ಹಣ ಸಿಗುತ್ತಿದೆ ಜೊತೆಯಲ್ಲಿ ಹಲವಾರು ಯುವ ರೈತರು ಹೈನುಗಾರಿಕೆ ಮಾಡಲು ಮುಂದಾಗಿದ್ದಾರೆ ಎನ್ನುತ್ತಾರೆ.

ಹೆಚ್ಚು ನಿವ್ವಳ ಆದಾಯ ಬರುವುದಕ್ಕೆ ಯಶಸ್ಸಿನ ಗುಟ್ಟುಗಳು

• ಇವರ ಮನೆ ಹೊಲದಲ್ಲಿ ಇರುವುದರಿಂದ ಇವರು ತಾವೇ ಸ್ವಂತಃ ಜಮೀನಿನಲ್ಲಿ ಇದ್ದು ತಮ್ಮ ಕುಟುಂಬದವರೊಂದಿಗೆ ಹಾಗೂ ಕೂಲಿ ಆಳುಗಳೊಂದಿಗೆ ಕೂಡಿ ಕೆಲಸ ಮಾಡುತ್ತಾರೆ.
• ಹಾಲನ್ನು “ಕಾಯಕ ಸಿರಿ” ಹಾಲು ಒಕ್ಕೂಟ್ಟಕೆ ಮಾರುವದರಿಂದ ಕಡಿಮೆ ಖರ್ಚಿನಲ್ಲಿ ಆಕಳುಗಳಿಗೆ ಬೇಕಾಗುವ ಹಿಂಡಿ, ಲವಣ ಮಿಶ್ರಣ ದೊರೆಯುತ್ತಿದೆ. ಜೊತೆಯಲ್ಲಿ ತಮ್ಮ ಜಮೀನಿನ ಕೃಷಿಯ ತ್ಯಾಜ್ಯಗಳಾದ, ಗೋವಿನ ಜೋಳದ ನುಚ್ಚು, ತೊಗರಿ ನುಚ್ಚು, ಕಡಲೆ ನುಚ್ಚು, ಗೋದಿ ತವಡು ಉಪಯೋಗಿಸಿ, ದಾಣಿ ಮಿಶ್ರಣವನ್ನು ಮನೆಯಲ್ಲಿಯೇ ತಯಾರು ಮಾಡುತ್ತಾರೆ.
• ಹಸಿರು ಮೇವಿನ ಕೊರತೆಯಾಗದಂತೆ, ಮೇವಿನ ಹೊಲದಲ್ಲಿ ಹನಿ ನೀರಾವರಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ.

ಸುಬಾಬುಲ್ ಕೃಷಿ ಮಾಡಿದರೆ ರೈತರ ಭವಿಷ್ಯ ಭದ್ರ!

"ಸುಧಾರಿತ ತಳಿಯ ಬೀಜಗಳನ್ನು ರೈತರಿಗೆ ತಲುಪಿಸಲು ಕೃಷಿ ವಿಶ್ವವಿದ್ಯಾಲಯ ನಿರಂತರವಾಗಿ ಶ್ರಮಿಸುತ್ತಿದೆ"

• ಒಣ ಮೇವನ್ನು ಪೌಷ್ಠಿಕರಣ ಮಾಡಿ ರಾಸುಗಳಿಗೆ ನೀಡುತ್ತಿದ್ದಾರೆ.
• ಆಕಳು ಮನೆ (ಕೊಟ್ಟಿಗೆ)ಯನ್ನು ಅತಿ ಕಡಿಮೆ ಖರ್ಚಿನಲ್ಲಿ ಲಭ್ಯವಿರುವ ಸ್ಥಳೀಯ ಪರಿಕರಗಳನ್ನು ಉಪಯೋಗಿಸಿ ನಿರ್ಮಿಸಿದ್ದಾರೆ. ಜೊತೆಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚಿನ ಆಕಳುಗಳನ್ನು ಸಾಕುತ್ತಿದ್ದಾರೆ.
• ಕಾಲ ಕಾಲಕ್ಕೆ ಜಂತುನಾಶಕ ಔಷಧಿ ಹಾಗೂ ಲಸಿಕೆಗಳನ್ನು ಹಾಕಿಸುತ್ತಾರೆ. ಪಶು ವೈದ್ಯರ ಸಲಹೆಯಿಂದ ತಮ್ಮ ಜಾನುವಾರುಗಳು ಆರಾಮ ತಪ್ಪಿದ ಸಮಯದಲ್ಲಿ ತಾವೇ ಔಷಧಿ ನೀಡುತ್ತಿದ್ದಾರೆ.

ಮಾರುಕಟ್ಟೆ ಮತ್ತು ಲಾಭ

ಸದ್ಯದ ಸಮಯದಲ್ಲಿ ಒಟ್ಟಾರೆ ಒಂದು ದಿನಕ್ಕೆ ಸುಮಾರು 110 ಲೀಟರ ಹಾಲಿನ ಉತ್ಪಾದನೆಯಾಗುತ್ತಿದ್ದು, ಇವರು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ “ಕಾಯಕ ಸಿರಿ” ಹಾಲು ಒಕ್ಕೂಟಕ್ಕೆ ಹಾಲು ಮಾರಾಟ ಮಾಡುತ್ತಿದ್ದಾರೆ. 

ಜೊತೆಯಲ್ಲಿ ಸ್ಥಳೀಯವಾಗಿ ಸ್ವಲ್ಪ ಪ್ರಮಾಣದಲ್ಲಿ ಹಾಲನ್ನು ಸಹ ಮಾರಾಟ ಮಾಡುತ್ತಿದ್ದಾರೆ. ಸರಾಸರಿ ಪ್ರತಿ ಲೀಟರ ಹಾಲಿಗೆ ರೂ. 25-30 ದರದಲ್ಲಿ ಮಾರಾಟ ಮಾಡುತ್ತಿದ್ದು, ಒಂದು ದಿನಕ್ಕೆ ರೂ. 3000 ರಿಂದ 3500 ರವರೆಗೆ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ಪಶು ಆಹಾರದ ಖರ್ಚು ಮತ್ತು ಔಷಧಿಯ ಖರ್ಚು ಸುಮಾರ ಶೇ. 50 ರಷ್ಟು ಬಂದಿರುತ್ತದೆ ಎನ್ನುತ್ತಾರೆ ಅವರು.

ಶೇ. 50 ರಷ್ಟು ಲಾಭದಂತೆ ಒಂದು ದಿನಕ್ಕೆ ರೂ. 2000 ವರೆಗೂ ನಿವ್ವಳ ಲಾಭವನ್ನು ಪಡೆಯುತ್ತಿದ್ದಾರೆ.• ಸುಮಾರು 10 ಸದಸ್ಯರ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವ ಇವರು, ಕುಟುಂಬದವರ ಜೊತೆ ಸೇರಿ ಯಶಸ್ವಿ ಹೈನುಗಾರಿಕೆ ಯುವ ರೈತನಾಗಿ ಹೊರಹೊಮ್ಮಿದ್ದಾರೆ. ಜೊತೆಯಲ್ಲಿ ಇತರೆ ಯುವ ರೈತರಿಗೆ ಮಾದರಿಯಾಗಿದ್ದಾರೆ.

ಇವರ ಯಶಸ್ಸನ್ನು ನೋಡಿ ಅಹಿರಸಂಗ, ಇಂಡಿ, ಅಂಜುಟಗಿ ಗ್ರಾಮದ ಸುಮಾರು 10 ರಿಂದ 15 ಯುವ ರೈತರು ಮಿಶ್ರ ತಳಿ ಆಕಳುಗಳನ್ನು ಖರೀದಿಸಿ ಇವರಂತೆ ಹೈನುಗಾರಿಕೆಯನ್ನು ಉಪಕಸಬನ್ನು ಮಾಡುತ್ತಿದ್ದಾರೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

Bitter Gourd :ಹೈಬ್ರೀಡ್‌ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್‌ ಟಿಪ್ಸ್‌

ಮುಂದಿರುವ ಯೋಜನೆಗಳು :

1. ಮಿಶ್ರತಳಿ ಎಚ್. ಎಫ್. ಆಕಳು ಜೊತೆ ಬೇರೆ ತಳಿಗಳಾದ ಜೆರ್ಸಿ ಹಾಗೂ ಗೀರ್ ಸಾಕಾಣಿಕೆ ಮಾಡುವ ಯೋಜನೆ ಹೊಂದಿದ್ದಾರೆ.
2. ಮುಂದಿನ ಎರಡು ವರ್ಷದಲ್ಲಿ ಆಕಗಳುಗಳ ಸಂಖ್ಯೆಯನ್ನು ಹೆಚ್ಚಿಸಿ 20 ರಿಂದ 25 ರವರೆಗೆ ಏರಿಸುವ ಗುರಿ ಹೊಂದಿದ್ದಾರೆ.
3. ವರ್ಷವಿಡೀ ಹಸಿರು ಮೇವಿನ ಕೊರತೆಯಾಗದಂತೆ ನಿರಂತರವಾಗಿ ಹೈಡ್ರೋಫೋನಿಕ್ಸ್ ಘಟಕಗಳನ್ನು
ನಡೆಸುವುದು ಜೊತೆಯಲ್ಲಿ ಇನ್ನಿತರೆ ಬಹುವಾರ್ಷಿಕ ಮೇವಿನ ಬೆಳೆಯನ್ನು ಬೆಳಸುವುದು.
4. ಕೇವಲ ಹೆಣ್ಣು ಕರುಗಳು ಹುಟ್ಟುವಂತೆ ವಿರ್ಯಾಣು (Sexed Semen) ಕೃತಕವಾಗಿ ಗರ್ಭಧಾರಣೆಯನ್ನು ಮಾಡುವ ಯೋಜನೆ ಹೊಂದಿದ್ದಾರೆ.
ಹೀಗೆ ಹೊಸ ಯೋಜನೆ ಹಾಗೂ ಪರಿಕಲ್ಪನೆಯೊಂದಿಗೆ ದಿನಾಲೂ ತಮ್ಮ ಜಮೀನಿನಲ್ಲಿ “ಕಾಯಕ ಯೋಗಿ”ಯಾಗಿ ಕೆಲಸ ಮಾಡುತ್ತಾ ಹೈನುಗಾರಿಕೆಯಲ್ಲಿ ಯಶಸ್ಸು ಕಂಡು ನಿರಂತರವಾಗಿ ಆದಾಯ ಗಳಿಸುತ್ತಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ ದೇವರ ಅವರ ಮೊಬೈಲ್ ಸಂಖ್ಯೆ: 96329 69555 ಸಂಪರ್ಕಿಸಬಹುದು.

ಲೇಖಕರು: ಸಂತೋಷ ಶಿಂದೆ , ಮಂಜು ಎಮ್. ಜೆ., ಸವಿತಾ ಬಿ.. ಕುಶಲ ಮತ್ತು ಮಜೀದ ಜಿ
ಐ.ಸಿ.ಎ.ಆರ್.- ಕೃಷಿ ವಿಜ್ಞಾನ ಕೇಂದ್ರ, ಇಂಡಿ (ವಿಜಯಪುರ-II)
ಮೊ.ಸಂ: 87911 07090
ಮಿಂಚಂಚೆ : sshinde639vet@gmail.com

Published On: 20 June 2022, 12:44 PM English Summary: A young farmer successful in dairy farming!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.