1. ಸುದ್ದಿಗಳು

Education Loan: ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದಿರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..

KJ Staff
KJ Staff
education loan important aspects

ಗುಣಮಟ್ಟದ ಉತ್ತಮವಾದ ಶಿಕ್ಷಣವು ಗಟ್ಟಿಯಾದ ವೃತ್ತಿಗೆ ಬುನಾದಿ ಹಾಕುವಲ್ಲಿ ಸಹಾಯ ಮಾಡುತ್ತದೆ. ಆದ್ರೆ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸಲಾಗದೇ ಬಹಳಷ್ಟು ಮಂದಿ ತಮ್ಮ ಕನಸನ್ನು ಮಧ್ಯೆದಲ್ಲಿಯೃ ಕೈಬಿಟ್ಟು ಮುಂದೆ ಸಾಗುತ್ತಾರೆ. ಬೇರೆ ದಾರಿ ಕಾಣದೆ ಶಿಕ್ಷಣದ ಸಾಲಕ್ಕೆ ಮೊರೆ ಹೋಗುತ್ತಾರೆ.

ಇದನ್ನೂ ಓದಿ:7th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಿಗಲಿದೆಯಾ ಈ ಸಂತಸದ ಸುದ್ದಿ? ಇಲ್ಲಿದೆ ಪೂರ್ತಿ ಲೆಕ್ಕಾಚಾರ..

ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಉನ್ನತ ಶಿಕ್ಷಣಕ್ಕೆ ಧನಸಹಾಯ ನೀಡುವ ಪ್ರಮುಖ ಮೂಲವಾಗಿವೆ. ಆದಾಗ್ಯೂ, ಶೈಕ್ಷಣಿಕ ಸಾಲದ ಮಹತ್ವ ಹಾಗೂ ಅದರ ಮರುಪಾವತಿ (Repayment) ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲದಿದ್ರೆ ಹಲವಾರು ವರ್ಷಗಳವರೆಗೆ ಸಾಲದಲ್ಲಿ ಉಳಿಯುವ ಸಾಧ್ಯತೆಯಿದೆ.ಯಾಕಂದರೆ ನೀವು ಉನ್ನತ ಶಿಕ್ಷಣಕ್ಕಾಗಿ ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸಿದರೆ ದುಬಾರಿ ಶುಲ್ಕವೇ ದೊಡ್ಡ ತಲೆನೋವಾಗಿರುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ಅತ್ಯುತ್ತಮ ಕಾಲೇಜಿಗೆ ಸೇರಬೇಕಾದರೆ ವಿದ್ಯಾರ್ಥಿಗಳಿಗೆ ಹಣದ ಕೊರತೆ ಕಾಡುತ್ತದೆ.

ಹೀಗಾಗಿ ನೀವು ಯಾವುದೇ ಬ್ಯಾಂಕ್‌ನಿಂದ ಶಿಕ್ಷಣ ಸಾಲವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕು. ಆದರೆ ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನಹರಿಸುವುದು ಮುಖ್ಯ.

ಇದನ್ನೂ ಓದಿ:ಭಾರತದ ಮೊದಲ Steel Roadಗೆ ಚಾಲನೆ! ಯಾವ ರಾಜ್ಯದಲ್ಲಿ ನಿರ್ಮಾಣವಾಗಲಿದೆ ಗೊತ್ತೆ?

ಶಿಕ್ಷಣ ಸಾಲದ ಬಡ್ಡಿ ದರವು ಸಾಮಾನ್ಯವಾಗಿ ಕೋರ್ಸ್‌ನ ಪ್ರಕಾರ, ಸಂಸ್ಥೆ, ಹಿಂದಿನ ಶೈಕ್ಷಣಿಕ ಕಾರ್ಯಕ್ಷಮತೆ, ವಿದ್ಯಾರ್ಥಿ/ಸಹ-ಅರ್ಜಿದಾರರ ಕ್ರೆಡಿಟ್ ಸ್ಕೋರ್ ಮತ್ತು ಒದಗಿಸಿದ ಭದ್ರತೆಯನ್ನು ಅವಲಂಬಿಸಿ ಸುಮಾರು 6.75% p.a. ನಿಂದ ಪ್ರಾರಂಭವಾಗುತ್ತದೆ. ಬ್ಯಾಂಕುಗಳು ಮೊರಟೋರಿಯಂ ಅವಧಿಯಲ್ಲಿ ಸರಳ ಬಡ್ಡಿದರಗಳನ್ನು ವಿಧಿಸುತ್ತವೆ.‌

ಶಿಕ್ಷಣಕ್ಕೆ ಅಗತ್ಯದಷ್ಟು ಹಣ ಇರದಿದ್ದಾಗ ನಾವು ಸಾಲದ ಮೊರೆ ಹೋಗಬೇಕಾಗುತ್ತದೆ. ದೇಶದಲ್ಲಿ ಅಧ್ಯಯನ ಮಾಡುವವರಿಗೆ ಗರಿಷ್ಠ 10 ಲಕ್ಷ ರೂ. ಮತ್ತು ವಿದೇಶದಲ್ಲಿ ಅಧ್ಯಯನ ಮಾಡುವವರಿಗೆ 20 ಲಕ್ಷ ರೂ.ವರೆಗೆ ಸಾಲ ಲಭ್ಯವಿರುತ್ತದೆ. ಆದರೆ ಐಐಟಿಗಳು, ಐಐಎಂಗಳು ಮತ್ತು ಐಎಸ್‌ಬಿಗಳಂತಹ ದೊಡ್ಡ ಸಂಸ್ಥೆಗಳಲ್ಲಿ ನೀವು ಅಧ್ಯಯನಕ್ಕಾಗಿ ಹೆಚ್ಚಿನ ಸಾಲವನ್ನು ಪಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೋರ್ಸ್‌ಗಾಗಿ ಅನೇಕ ಹಣಕಾಸು ಸಂಸ್ಥೆಗಳು ನೀಡುವ ಶಿಕ್ಷಣ ಸಾಲಗಳನ್ನು ಹೋಲಿಸಿ ನೋಡಬೇಕು.

ಇದನ್ನೂ ಓದಿ:ದ್ವಿದಳ ಧಾನ್ಯಗಳಿಗೆ ಭಾರೀ ಬೇಡಿಕೆ..2030ರಲ್ಲಿ 32 ಮೆಟ್ರಿಕ್‌ ಟನ್‌ಗಳಿಗೆ ಹೆಚ್ಚಳ: ನೀತಿ ಆಯೋಗ

ಶಿಕ್ಷಣ ಸಾಲದ ಏಕ ಗವಾಕ್ಷಿ ಪ್ಲಾಟ್‌ಫಾರ್ಮ್‌ಗೆ ಹೋಗಲು ನೀವು ಯಾವುದೇ ಒಂದು ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಿದರೆ ಮತ್ತು ಅನುಮೋದನೆಗಾಗಿ ಕಾಯುವುದು ಉತ್ತಮ. ‘ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮಿ ಕಾರ್ಯಕ್ರಮ’ (PMVLK) ನಿಮಗೆ ಸಹಕಾರಿಯಾಗಿದೆ. ಇಲ್ಲಿ ನೀವು ಒಂದು ಅಪ್ಲಿಕೇಶನ್‌ನಲ್ಲಿ ಏಕಕಾಲದಲ್ಲಿ 3 ಬ್ಯಾಂಕ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲಿ 40 ಬ್ಯಾಂಕ್‌ಗಳು ನೋಂದಣಿಯಾಗಿವೆ.

ಇದನ್ನೂ ಓದಿ:IIT Recruitment: ಪ್ರಾಜೆಕ್ಟ್ ಅಸೋಸಿಯೇಟ್ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ – ₹1 ಲಕ್ಷದ ವರೆಗೆ ಸಂಬಳ

ಮರುಪಾವತಿ ಯಾವಾಗ..?

ಅಧ್ಯಯನವನ್ನು ಪೂರ್ಣಗೊಳಿಸಿದ 1 ವರ್ಷದ ನಂತರ ಸಾಲವನ್ನು ಮರುಪಾವತಿಸಲು ಪ್ರಾರಂಭಿಸಬೇಕು. ನೀವು ಅದನ್ನು ಗರಿಷ್ಠ 2 ವರ್ಷಗಳವರೆಗೆ ವಿಸ್ತರಿಸಬಹುದು. ಅದೇ ರೀತಿ ಶಿಕ್ಷಣ ಸಾಲದ ಮೇಲಿನ ಬಡ್ಡಿಯು ಸಾಲವನ್ನು ತೆಗೆದುಕೊಂಡ ಸಮಯದಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ ಶಿಕ್ಷಣ ಮುಗಿದ ನಂತರ ಶಿಕ್ಷಣ ಸಾಲವನ್ನು ಮರುಪಾವತಿಸಲು 15 ವರ್ಷಗಳ ಸಮಯವಿರುತ್ತದೆ.. ಶಿಕ್ಷಣ ಸಾಲದ ಮೇಲಿನ ತೆರಿಗೆ ವಿನಾಯಿತಿಯನ್ನು ವಿಭಾಗ 80E (80E) ಅಡಿಯಲ್ಲಿ ಪಡೆಯಬಹುದು. 8 ವರ್ಷಗಳ ಅವಧಿಗೆ ಮಾತ್ರ ಶಿಕ್ಷಣ ಸಾಲದ ಮೇಲೆ ತೆರಿಗೆ ಕಡಿತವನ್ನು ನೀಡಲಾಗುತ್ತದೆ.

ಇದನ್ನೂ ಓದಿ:ಇದೇ ಮೊದಲ ಬಾರಿಗೆ ಮಾನವನ ರಕ್ತದಲ್ಲೂ ಪತ್ತೆಯಾದ ಪ್ಲಾಸ್ಟಿಕ್‌..!

Published On: 27 March 2022, 11:32 AM English Summary: education loan important aspects

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.