1. ಸುದ್ದಿಗಳು

ಬಿಗ್‌ನ್ಯೂಸ್‌: ಸರ್ಕಾರದಿಂದ 116 ಕೋಟಿ ರೂ ರಿಲೀಸ್‌..ಇನ್ನೆರಡು ದಿನಗಳಲ್ಲಿ ರೈತರ ಖಾತೆ ಸೇರುತ್ತೆ ಬೆಳೆ ಪರಿಹಾರ

Maltesh
Maltesh
Crop compensation will be credited to farmer's account in next two days

ರಾಜ್ಯದಲ್ಲಿ ಈ ವರ್ಷ ಭಾರೀ ಮಳೆಯಾಗಿದೆ. ಪರಿಣಾಮ ಜನಜೀವನ ತೀವ್ರವಾದ ಸಂಕಷ್ಟವನ್ನು ಅನುಭವಿಸದರೆ ಇತ್ತ ರೈತಾಪಿ ವರ್ಗದ ಸಂಕಷ್ಟ ಹೇಳತೀರದು. ವರುಣನ ಆರ್ಭಟಕ್ಕೆ ಬಂಗಾರದಂತ ಬೆಲೆ ನೀರು ಪಾಲಾಗಿ ಹಾಳಾಗಿ ಹೋಗಿದೆ. ಇದರಿಂದ ಕಂಗೆಟ್ಟ ರೈತಾಪಿ ವರ್ಗ ಸದ್ಯ ಬೆಳೆವಿಮೆಯ ನಿರೀಕ್ಷೆಯಲ್ಲಿ ಸರ್ಕಾರದತ್ತ ಮುಖ ಮಾಡಿ ಕುಳಿತಿದ್ದಾರೆ. ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ರೈತರಿಗೆ ಗುಡ್‌ನ್ಯೂಸ್‌ ನೀಡಿದ್ದು ಇನ್ನೆರಡು ದಿನದಲ್ಲಿ  ಪರಿಹಾರ ಧನ ವಿತರಿಸುವುದಾಗಿ ತಿಳಿಸಿದ್ದಾರೆ.

ಪೋಸ್ಟ್‌ ಆಫೀಸ್‌ ಸ್ಕೀಂ: ಮಕ್ಕಳ ಹೆಸರಲ್ಲಿ ಈ ಖಾತೆ ಓಪನ್‌ ಮಾಡಿದ್ರೆ ತಿಂಗಳಿಗೆ ₹2500  ಆದಾಯ

ವಿಧಾನಮಂಡಲ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಆರ್‌. ಅಶೊಕ್‌ ಅವರು  ಈಗಾಗಲೇ ಮಳೆಯಿಂದ ಬೆಳ ಹಾನಿಗೊಳಗಾದ ರೈತರಿಗೆ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಆದರೆ ಇನ್ನು ಈ ಹಣ ರೈತರ ಖಾತೆಗೆ ತಲುಪುವಲ್ಲಿ ವಿಳಂಬವಾಗುತ್ತಿದೆ. ರಾಜ್ಯದ ಕೆಲವೊಂದು ಭಾಗಗಳಲ್ಲಲಿ ಇನ್ನು ಮಳೆ ಆರ್ಭಟ ಮುಂದುವರೆದಿದೆ ಈ ಕಾರಣದಿಂದ ಸೂಕ್ತವಾಗಿ ಸರ್ವೆ ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಎಲ್ಲ ರಾಜ್ಯಗಳಿಗಿಂತಲೂ ಮೊದಲು ನಮ್ಮ ರಾಜ್ಯದಲ್ಲಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದರು.

ಪಿಎಂ ಕಿಸಾನ್‌ ಬಿಗ್‌ ಅಪ್‌ಡೇಟ್‌: 12ನೇ ಕಂತು ಯಾವಾಗ ರಿಲೀಸ್‌ ಆಗುತ್ತೆ..?

ಇನ್ನು ಮಳೆ ಹಾನಿಯ ಪರಿಹಾರಕ್ಕಾಗಿ ಸರ್ಕಾರದ ಬೊಕ್ಕಸದಿಂದ 116 ಕೋಟಿ ರೂಪಾಯಿಯನ್ನು ರಿಲೀಸ್‌ ಮಾಡಲಾಗಿದೆ. ಈ ಹಣ ಕೂಡ ಇನ್ನೆರಡು ದಿನಗಳಲ್ಲಿ ರೈತರ ಖಾತೆ ಸೇರಲಿದೆ ಈ ಮೂಲಕ ಮಳೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿರುವ ರೈತರ ಜೊತೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ ಎಂದು ಸಚಿವ ಆರ್. ಅಶೋಕ್‌ ಸದನಕ್ಕೆ ಮಾಹಿತಿ ನೀಡಿದರು.

ಉಚಿತ ಹೊಲಿಗೆ ಯಂತ್ರ ಯೋಜನೆ: ಅರ್ಜಿ ಸಲ್ಲಿಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ

Published On: 14 September 2022, 11:12 AM English Summary: Crop compensation will be credited to farmer's account in next two days

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.