1. ಸುದ್ದಿಗಳು

ಅಟಲ್‌ ಪೆನ್ಷನ್‌ ಯೋಜನೆ: ಅರ್ಜಿದಾರರು 60 ವರ್ಷಕ್ಕಿಂತ ಮೊದಲು ಸಾವನ್ನಪಿದರೆ ಪಿಂಚಣಿ ಪ್ರಯೋಜನ ಯಾರಿಗೆ?

Maltesh
Maltesh
Atal Pension Yojana: After Death of Applicant who gets the pension benefit?

ಅಟಲ್‌ ಪಿಂಚಣಿ ಯೋಜನೆ.ಈ ಯೋಜನೆಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 2015ರಲ್ಲಿ ಆರಂಭವಾದ ಈ ಯೋಜನೆ ಇವತ್ತು ಭಾರೀ ಜನಪ್ರಿಯತೆಯನ್ನು ಪಡೆದುಕೊಂಡ ಒಂದು ಯೋಜನೆಯಾಗಿ ಹೊರಹೊಮ್ಮಿದೆ. ದೇಶದ ಪ್ರತಿಯೊಬ್ಬ ನಾಗರೀಕರು ತಮ್ಮ 60 ವರ್ಷದ ನಂತರ ಪಿಂಚಣಿ ಲಾಭ ಪಡೆಯಲು ಸರ್ಕಾರ ಅಟಲ್ ಪಿಂಚಣಿ ಯೋಜನೆ ನಡೆಸುತ್ತಿದೆ.

ಚಿನ್ನ ಖರೀದಿದಾರರಿಗೆ ಸುವರ್ಣಾವಕಾಶ..ಬಂಗಾರದ ಬೆಲೆಯಲ್ಲಿ ಇಳಿಕೆ

ನಿಮ್ಮ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇದ್ದರೆ, ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. APY ಅಡಿಯಲ್ಲಿ, ನೀವು ಕನಿಷ್ಟ 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು. 60 ವರ್ಷ ವಯಸ್ಸನ್ನು ತಲುಪಿದ ನಂತರ, ನಿಮ್ಮ ಹೂಡಿಕೆಯ ಮೇಲೆ ನೀವು 1000 ರಿಂದ 5000 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯುತ್ತೀರಿ.  ಆದರೆ ಸದ್ಯ ಈ ಯೋಜನೆಗೆ ನೋಂದಾಯ=ಯಿಸಿಕೊಂಡವರು ಆಕಸ್ಮಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಕುಟುಂಬದ ಸದ್ಯಸರು ಈ ಪಿಂಚನೀಯ ಪ್ರಯೋಜನೆಗೆ ಅರ್ಹರಾಗುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಅಂತಹ ಪ್ರಶ್ನೆಗೆ ಉತ್ತರವನ್ನು ಈ ಲೇಖನದಲಿ ಕಂಡುಕೊಳ್ಳೊಣ.

ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವ ವ್ಯಕ್ತಿಯು 60 ವರ್ಷಕ್ಕಿಂತ ಮುಂಚೆಯೇ ಮರಣ ಹೊಂದಿದರೆ, ಅವನು ಹೂಡಿಕೆ ಮಾಡಿದ ಮೊತ್ತ ಏನಾಗುತ್ತದೆ ಎಂಬ ಪ್ರಶ್ನೆ ಅನೇಕ ಬಾರಿ ಮನಸ್ಸಿನಲ್ಲಿ ಬರುತ್ತದೆ? ಅವರ ಸಾವಿನ ನಂತರವೂ ಕುಟುಂಬ ಸದಸ್ಯರಿಗೆ ಈ ಮೊತ್ತ ಪಿಂಚಣಿ ರೂಪದಲ್ಲಿ ಸಿಗುತ್ತಿದೆಯೇ?

ಪೋಸ್ಟ್‌ ಆಫೀಸ್‌ ಸ್ಕೀಂ: ಮಕ್ಕಳ ಹೆಸರಲ್ಲಿ ಈ ಖಾತೆ ಓಪನ್‌ ಮಾಡಿದ್ರೆ ತಿಂಗಳಿಗೆ ₹2500  ಆದಾಯ

ಯಾರಿಗೆ ದೊರೆಯುತ್ತದೆ..?

ಅಟಲ್ ಪಿಂಚಣಿ ಯೋಜನೆಯ ಪ್ರಕಾರ, ಅದರಲ್ಲಿ ಹೂಡಿಕೆ ಮಾಡುವ ಅರ್ಜಿದಾರರು ಯಾವುದೇ ಅನಾರೋಗ್ಯ ಅಥವಾ ಅಪಘಾತದಿಂದ 60 ವರ್ಷಕ್ಕಿಂತ ಮುಂಚೆಯೇ ಮರಣಹೊಂದಿದರೆ, ಅವರು ಹೂಡಿಕೆ ಮಾಡಿದ ಮೊತ್ತವು ವ್ಯರ್ಥವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವನ ಸಂಗಾತಿಗೆ ಇಡೀ ಜೀವನಕ್ಕೆ ಪಿಂಚಣಿ ಪ್ರಯೋಜನವನ್ನು ನೀಡಲಾಗುತ್ತದೆ. ಅರ್ಜಿದಾರರ ಸಂಗಾತಿಯು ಸಹ ಜೀವಂತವಾಗಿಲ್ಲದಿದ್ದರೆ, ಅವರ ನಾಮಿನಿಗೆ ಸುಮಾರು 1.70 ಲಕ್ಷದಿಂದ 8 ಲಕ್ಷದವರೆಗೆ ಒಟ್ಟು ಮೊತ್ತದ ಕಂತು ನೀಡಲಾಗುತ್ತದೆ.

ಪಿಎಂ ಕಿಸಾನ್‌ ಬಿಗ್‌ ಅಪ್‌ಡೇಟ್‌: 12ನೇ ಕಂತು ಯಾವಾಗ ರಿಲೀಸ್‌ ಆಗುತ್ತೆ..?

ಮಧ್ಯದಲ್ಲಿ ಹಣ ಹಿಂಪಡೆಯಬಹುದೇ..?

ಸಾಮಾನ್ಯವಾಗಿ, ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ, ಅರ್ಜಿದಾರರಿಗೆ 60 ವರ್ಷಕ್ಕಿಂತ ಮೊದಲು ಹಿಂಪಡೆಯಲು ಅನುಮತಿಸಲಾಗುವುದಿಲ್ಲ. ಆದರೆ ಅರ್ಜಿದಾರರು ಯಾವುದೇ ಗಂಭೀರ ಅಥವಾ ದೀರ್ಘಕಾಲದ ಅನಾರೋಗ್ಯದ ಚಿಕಿತ್ಸೆಗಾಗಿ ಯೋಜನೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಹಿಂಪಡೆಯಲು ಬಯಸಿದರೆ ಅಥವಾ ಯಾವುದೇ ಕಾರಣದಿಂದ ಯೋಜನೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ಈ ಸಂದರ್ಭದಲ್ಲಿ ಅವರು ಠೇವಣಿ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು. ಆದರೆ ಇದಕ್ಕಾಗಿ ಅವರು ಠೇವಣಿ ಮೊತ್ತದ ಬಡ್ಡಿಯನ್ನು ಪಡೆಯುವುದಿಲ್ಲ. 

Published On: 14 September 2022, 02:13 PM English Summary: Atal Pension Yojana: After Death of Applicant who gets the pension benefit?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.