19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತೀಯ ಮಹಿಳಾ ತಂಡ ತನ್ನದಾಗಿಸಿಕೊಂಡಿದ್ದು, ಮಹಿಳಾ ತಂಡಕ್ಕೆ ಅಭಿನಂದನೆಯ ಮಹಾಪೂರವೇ ಹರಿದು ಬರಲು ಪ್ರಾರಂಭವಾಗಿದೆ.
ಬೆಂಗಳೂರಿನಲ್ಲಿ ಕೋಟಿ ವೃಕ್ಷ ಅಭಿಯಾನ, ಮತ್ತೆ ಗಾರ್ಡನ್ ಸಿಟಿಗೆ ಜೀವ
ಇದೇ ಮೊದಲ ಬಾರಿ ಆಯೋಜನೆ ಮಾಡಲಾಗಿದ್ದ ಟೂರ್ನಿಯಲ್ಲಿ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ಎಂದೇ ಖ್ಯಾತಿಯನ್ನು ಗಳಿಸಿರುವ ಬ್ಯಾಟರ್ ಶೆಫಾಲಿ ವರ್ಮಾ ಅವರು ಐಸಿಸಿ ಪ್ರಶಸ್ತಿ ಜಯಿಸಿದ ಭಾರತದ ಮೊದಲ ನಾಯಕಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಪೊಷೆಫ್‌ಸ್ಟ್ರೂಮ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 17.1 ಓವರ್‌ಗಳಲ್ಲಿ 68 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 69 ರನ್ ಕಲೆಹಾಕಿದೆ. 19 ವರ್ಷದೊಳಗಿನ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿ ಆಯೋಜನೆಗೊಂಡಿರುವ ಐಸಿಸಿ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಎತ್ತಿ ಹಿಡಿದಿದೆ.
weather update ರಾಜ್ಯದಲ್ಲಿ ಹವಾಮಾನ ಹೇಗಿದೆ, ಎಲ್ಲಿಲ್ಲಿ ಕನಿಷ್ಠ ತಾಪಮಾನ ಇಲ್ಲಿದೆ ವಿವರ
ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 17.1 ಓವರ್‌ಗಳಲ್ಲಿ 68 ರನ್ ಗಳಿಸಿ ಆಲೌಟ್ ಆಯಿತು. 69 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತ್ತು. ಭಾರತದ ಪರ ಗೊಂಗಡಿ ತ್ರಿಷಾ 24, ಸೌಮ್ಯ ತಿವಾರಿ ಔಟಾಗದೆ 24 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ಭಾರತ ತಂಡ 1983ರಲ್ಲಿ ಕಪಿಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಅದಾದ ನಂತರ ಧೋನಿ ನಾಯಕರಾಗಿ ಮೂರು ಬಾರಿ ಐಸಿಸಿ ಪ್ರಶಸ್ತಿ ಗೆದ್ದಿದ್ದಾರೆ. ಕೊಹ್ಲಿ 19 ವರ್ಷದೊಳಗಿನ ತಂಡದ ನಾಯಕರಾಗಿ ಏಕದಿನ ವಿಶ್ವಕಪ್ ಜಯಿಸಿ ದಾಖಲೆ ಸೃಷ್ಟಿಸಿದ್ದಾರೆ.
ರೈತರಿಗೆ ಬ್ಯಾಂಕ್ ಸಾಲದ ಮಿತಿ ಹೆಚ್ಚಿಸಲು ವೈಜ್ಞಾನಿಕ ವರದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇನ್ನು 19 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಅನ್ನು ಇದೇ ಮೊದಲ ಸಲ ಆಯೋಜಿಸಲಾಗಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಶಫಾಲಿ ಅವರ ನೇತೃತ್ವದ ತಂಡ ಇತಿಹಾಸ ಸೃಷ್ಟಿಸಿದೆ. ಶುಭಾಶಯಗಳ ಮಹಾಪೂರ ಭಾರತೀಯ ಮಹಿಳಾ ತಂಡವು ಗೆಲುವು ಸಾಧಿಸಿರುವುದಕ್ಕೆ ಭಾರತದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಐಸಿಸಿ ಅಂಡರ್-19 ಮಹಿಳಾ ತಂಡವು ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಯಶಸ್ಸು ಮುಂಬರುವ ಆಟಗಾರ್ತಿಯರಿಗೆ ಸ್ಫೂರ್ತಿ ನೀಡುತ್ತದೆ. ತಂಡದ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ.
ಆಧಾರ್ ಕಾರ್ಡ್ ಇ-ಕೆವೈಸಿ ವಹಿವಾಟು ಪ್ರಮಾಣ 84.8 ಕೋಟಿಗೆ ಏರಿಕೆ!
ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 5 ಕೋಟಿ ರೂ ಬಹುಮಾನ
ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 5 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡಕ್ಕೆ 5 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶೆಫಾಲಿ ವರ್ಮಾ ನೇತೃತ್ವದ ಟಿ20 ತಂಡ 7 ವಿಕೆಟ್ ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಮಹಿಳೆಯರ ಅಂಡರ್ 19 ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸರಣಿ ಟ್ವೀಟ್ ಮಾಡಿದ್ದು, ಭಾರತದಲ್ಲಿ ಮಹಿಳಾ ಕ್ರಿಕೆಟ್ ಏರುಗತಿಯಲ್ಲಿದೆ. ವಿಶ್ವಕಪ್ ವಿಜಯೋತ್ಸವವು ಮಹಿಳಾ ಕ್ರಿಕೆಟ್‌ನ ಸ್ಥಾನಮಾನವನ್ನು ಹಲವಾರು ಹಂತಗಳಲ್ಲಿ ಮುಂದುವರಿಸಿದೆ. ಪ್ರಶಸ್ತಿ ಗೆದ್ದ ತಂಡಕ್ಕೆ ಬಹುಮಾನದ ಮೊತ್ತವಾಗಿ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿ ರೂಪಾಯಿಯನ್ನು ಘೋಷಿಸಲು ನನಗೆ ಸಂತಸವಾಗಿದೆ. ಇದು ಖಂಡಿತವಾಗಿಯೂ ಭಾರತ ಮಹಿಳಾ ಕ್ರಿಕೆಟ್ ನ ಮೈಲುಗಲ್ಲಿನ ವರ್ಷವಾಗಿದೆ ಎಂದು ಹೇಳಿದ್ದಾರೆ.
PMKisan| ರೈತರಿಗೆ ಸಿಹಿಸುದ್ದಿ: ಪಿ.ಎಂ ಕಿಸಾನ್ ಸಮ್ಮಾನ್ ನಿಧಿ 8 ಸಾವಿರಕ್ಕೆ ಹೆಚ್ಚಳ ಸಾಧ್ಯತೆ!
ಮತ್ತೊಂದು ಟ್ವೀಟ್‌ನಲ್ಲಿ ನಾನು ನಾಯಕಿ ಶೆಫಾಲಿ ವರ್ಮಾ ಮತ್ತು ಅವರ ವಿಜಯಶಾಲಿ ತಂಡವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೆಬ್ರವರಿ 1 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರನೇ T20I ಪಂದ್ಯವನ್ನು ವೀಕ್ಷಿಸಲು ಆಹ್ವಾನಿಸುತ್ತೇನೆ. ಈ ಬಹುದೊಡ್ಡ ಸಾಧನೆಯು ಖಂಡಿತವಾಗಿಯೂ ಸಂಭ್ರಮಾಚರಣೆಗೆ ಕರೆ ನೀಡುತ್ತದೆ. U19T20WorldCup ಗೆದ್ದ ಭಾರತ U19 ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ಯುವ ಕ್ರಿಕೆಟಿಗರು ದೇಶವನ್ನು ಹೆಮ್ಮೆ ಪಡುವಂತೆ ಮಾಡಿರುವ ಅದ್ಭುತ ಸಾಧನೆಯಾಗಿದೆ. ಯುವ ಆಟಗಾರರು ದೊಡ್ಡ ಸಂಕಷ್ಟದ ಸಂದರ್ಭದಿಂದ ವಿಚಲಿತರಾಗಲಿಲ್ಲ ಎಂಬುದು ಅವರ ಉಕ್ಕಿನ ಪಾತ್ರಗಳು ಮತ್ತು ಮನೋಧರ್ಮದ ಬಗ್ಗೆ ಪರಿಮಾಣವನ್ನು ಹೇಳುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Share your comments