1. ಸುದ್ದಿಗಳು

Today Gold Rate| ವಾರಾಂತ್ಯದಲ್ಲಿ ಚಿನ್ನದ ಬೆಲೆ ತುಸು ಇಳಿಕೆ, ಎಷ್ಟಿದೆ ಇಂದಿನ ಚಿನ್ನದ ದರ!

Hitesh
Hitesh
The price of gold decreased slightly during the weekend, what is the price of gold today!

ಕಳೆದ ಒಂದು ವಾರದಿಂದ ಏರುತ್ತಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ ಇಳಿಕೆ ಕಂಡಿದೆ.

ಆಧಾರ್ ಕಾರ್ಡ್‌ ಇ-ಕೆವೈಸಿ ವಹಿವಾಟು ಪ್ರಮಾಣ 84.8 ಕೋಟಿಗೆ ಏರಿಕೆ!

ಶುಕ್ರವಾರಕ್ಕೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ  ಶನಿವಾರ 60 ರೂಪಾಯಿಗಳ ಕುಸಿತ ಕಂಡಿರುವುದು ವರದಿಯಾಗಿದೆ. ಕಳೆದ ಎರಡು ವಾರಗಳ ಹಿಂದಿದ್ದ ಚಿನ್ನದ ಬೆಲೆಗೆ ಹೋಲಿಕೆ ಮಾಡಿದರೆ, ಇದೀಗ ಚಿನ್ನದ ದರ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಂತಾಗಿದೆ.  

ಶುಕ್ರವಾರ ಪ್ರತಿ ಗ್ರಾಂ ಚಿನ್ನಕ್ಕೆ 5,315 ರೂಪಾಯಿ ತಲುಪಿತ್ತು. ಇದೀಗ ಚಿನ್ನದ ಬೆಲೆ 5,255 ರೂಪಾಯಿಗೆ ಇಳಿಕೆ ಕಂಡಿದೆ. ಉಳಿದಂತೆ ದೇಶದ ಇತರೆ ನಗರಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿರುವುದನ್ನು ಗಮನಿಸಬಹುದು.

ವಿಶ್ವದಾದ್ಯಂತ ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಆಗಿರುವುದರಿಂದ ನಿತ್ಯ ಚಿನ್ನದ ವಹಿವಾಟು ನಡೆಯುತ್ತಿರುತ್ತದೆ.

EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಆಪ್ಕೆ ನಿಕಟ್‌ 2.0 ವಿಸ್ತರಣೆ!

ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ ಯಲ್ಲಿ ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ದರ  52,550 ರೂಪಾಯಿ ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ 53,550 ರೂಪಾಯಿ ಹಾಗೂ 52,650 ರೂಪಾಯಿ, 52,650 ರೂಪಾಯಿ ತಲುಪಿದೆ. ದೇಶದ ರಾಜಧಾನಿ ದೆಹಲಿಯಲ್ಲಿ  ಶನಿವಾರ ಚಿನ್ನದ ಬೆಲೆ 52,800 ರೂಪಾಯಿ ಆಗಿದೆ.

ಮಾರುಕಟ್ಟೆಯಲ್ಲಿ  ಬಂಗಾರದ ದರ ಒಂದು ಗ್ರಾಂ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ -  5,255 ರೂಪಾಯಿ ಆಗಿದ್ದು, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 5,732 ರೂಪಾಯಿ ಮುಟ್ಟಿದೆ. ಎಂಟು ಗ್ರಾಂ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ -  42,040 ರೂಪಾಯಿ ಆಗಿದ್ದು, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 45,856 ರೂಪಾಯಿ ತಲುಪಿದೆ.  ಹತ್ತು ಗ್ರಾಂ (10GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ -   52,550 ರೂಪಾಯಿ ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) -   57,320 ರೂಪಾಯಿ ಆಗಿದೆ. ಅಲ್ಲದೇ ನೂರು ಗ್ರಾಂ (100GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ -  5,25,500 ರೂಪಾಯಿ ಆಗಿದ್ದು, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) -  5,73,200 ರೂಪಾಯಿ ಆಗಿದೆ.

ಜಪಾನ್‌ನೊಂದಿಗೆ ಐಎಎಫ್‌ನ ಜಂಟಿ ವಾಯು ರಕ್ಷಣಾ ಸಮರಾಭ್ಯಾಸ, 'ವೀರ್ ಗಾರ್ಡಿಯನ್ 2023ರ ವಿಶೇಷತೆ ಗೊತ್ತೆ ?

ಸತತವಾಗಿ ಎರಡು ದಿನಗಳಿಂದ ಏರುತ್ತಿದ್ದ ಚಿನ್ನದ ಬೆಲೆ ನಿನ್ನೆಗೆ ತಟಸ್ಥವಾಗಿದ್ದರೆ ಇಂದು ಇಳಿಕೆಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲೂ ಅಲ್ಪ ಇಳಿಕೆ ಕಂಡುಬಂದಿದೆ.. ಒಟ್ಟಾರೆ ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ 72,200 ರೂಪಾಯಿ ಆಗಿದೆ.  

ಬೆಂಗಳೂರಿನಲ್ಲಿ ಶನಿವಾರ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ 748, ರೂ. 7,480 ಹಾಗೂ 74,800 ರೂ. ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 74,800 ರೂ.  ಆಗಿದ್ದರೆ, ದೆಹಲಿಯಲ್ಲಿ 72,200 ರೂ.  ಮುಂಬೈನಲ್ಲಿ 72,200 ರೂ.  ಹಾಗೂ ಕೊಲ್ಕತ್ತದಲ್ಲೂ 72,200 ರೂ. ಗಳಾಗಿದೆ.

ಬಜೆಟ್‌ನಲ್ಲಿ ಖಾದಿ ಉದ್ಯಮಕ್ಕೆ ಭರ್ಜರಿ ಕೊಡುಗೆ: ಬೊಮ್ಮಾಯಿ 

The price of gold decreased slightly during the weekend, what is the price of gold today!

ಚಿನ್ನದ ಶುದ್ಧತೆ ತಿಳಿಯುವುದು ಹೇಗೆ

ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಹಾಲ್ ಮಾರ್ಕ್‌ಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ 24 ಕ್ಯಾರಟ್ ಚಿನ್ನದ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750. ಹೆಚ್ಚಿನ ಚಿನ್ನವನ್ನು 22 ಕ್ಯಾರೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ, ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ. ಕ್ಯಾರೆಟ್ 24 ಕ್ಕಿಂತ ಹೆಚ್ಚಿಲ್ಲ, ಮತ್ತು ಹೆಚ್ಚಿನ ಕ್ಯಾರೆಟ್, ಚಿನ್ನವನ್ನು ಶುದ್ಧ ಎಂದು ಪರಿಗಣಿಸಲಾಗುತ್ತದೆ.  

Aadhaar Card ಒಂದು ಆಧಾರ್‌ ಕಾರ್ಡ್‌ ಹಲವು ಉಪಯೋಗ: ಆಧಾರ್‌ ಕಾರ್ಡ್‌ ಇನ್ಮುಂದೆ ಇದಕ್ಕೂ ಬಳಸಬಹುದು! 

The price of gold decreased slightly during the weekend, what is the price of gold today!

22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು  

24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಮತ್ತು 22 ಕ್ಯಾರೆಟ್ ಸರಿಸುಮಾರು 91 ಪ್ರತಿಶತ ಶುದ್ಧವಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನ ಅದ್ಭುತವಾಗಿದ್ದರೂ ಅದನ್ನು ಆಭರಣವನ್ನಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್ ಚಿನ್ನವನ್ನು ಮಾರಾಟ ಮಾಡುತ್ತಾರೆ. 

EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಆಪ್ಕೆ ನಿಕಟ್‌ 2.0 ವಿಸ್ತರಣೆ!

Published On: 28 January 2023, 02:29 PM English Summary: Today Gold Rate| The price of gold decreased slightly during the weekend, what is the price of gold today!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.