ತಂತ್ರಜ್ಞಾನ ಬೆಳೆದಂತೆ ಎಲ್ಲಾ ಮಾಹಿತಿ ಈಗ ಮೊಬೈಲ್ ನಲ್ಲಿಯೇ ಸಿಗುತ್ತಿದೆ. ಹಿಂದೆ ಅಕೌಂಟ್ನಲ್ಲಿ ಹಣವಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಬ್ಯಾಂಕಿಗೆ ಹೋಗಬೇಕಾಗುತ್ತಿತ್ತು. ಆದರೆ ಈಗ ಕ್ಷಣಾರ್ಧದಲ್ಲಿ ಮನೆಯಲ್ಲಿಯೇ ಎಲ್ಲಾ ಮಾಹಿತಿ ಸಿಗುತ್ತಿದೆ. ನಿಮ್ಮ ಖಾತೆಗೆ ಹಣ ಜಮೆಯಾಗಿದ್ದನ್ನು ಪರಿಶೀಲಿಸಲು ಈಗ ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಜನ್ ಧನ್ ಖಾತೆಯಲ್ಲಿ ಹಣ ಜಮೆಯಾಗಿದ್ದನ್ನು ಚೆಕ್ ಮಾಡಬಹುದು.
ನಿಮ್ಮ ಜನ ಧನ್ ಖಾತೆಯಲ್ಲಿ ಎಷ್ಟು ಹಣವಿದೆ. ಹಾಗೂ ಇತ್ತೀಚೆಗೆ ಸರ್ಕಾರದ ಯೋಜನೆಗಳ ಹಣ ನಿಮ್ಮ ಬ್ಯಾಂಕಿಗೆ ಬಂದಿಯೋ ಇಲ್ಲವೋ ಎಂಬುದರ ಕುರಿತು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಲೆನ್ಸ್ ನೋಡಲು ಮಿಸ್ ಕಾಲ್ ಕೊಟ್ಟರೆ ಸಾಕು ಬ್ಯಾಲೆನ್ಸ್ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತದೆ. ಎರಡನೇಯ ಮಾರ್ಗವೆಂದರೆ ಪಿಎಫ್‌ಎಂಎಸ್ ಪೋರ್ಟಲ್ ಮೂಲಕವೂ ಚೆಕ್ ಮಾಡಬಹುದು.
ಮಿಸ್ಡ್ ಕಾಲ್ ಮೂಲಕ ಚೆಕ್ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು ಜನ ಧನ್ ಖಾತೆ ಹೊಂದಿದ್ದರೆ ನೀವು ಎಲ್ಲಿರುತ್ತೀರೋ ಅಲ್ಲಿಂದಲೇ ಮಿಸ್ಡ್ ಕಾಲ್ ಮೂಲಕ ಬಾಕಿ ಉಳಿಸಿಕೊಳ್ಳಬಹುದು. ಇದಕ್ಕಾಗಿ ನೀವು 18004253800 ಅಥವಾ 1800112211 ಸಂಖ್ಯೆಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಕೊಟ್ಟರೆ ಸಾಕು. ಕ್ಷಣಾರ್ಧದಲ್ಲಿ ನಿಮ್ಮ ಬ್ಯಾಲೆನ್ಸ್ ಎಷ್ಟಿದೆ ಎಂಬುದರ ಕುರಿತು ಸಂದೇಶ ಬರಲಿದೆ.
ಪಿಎಫ್‌ಎಂಎಸ್ ಪೋರ್ಟಲ್ ಮೂಲಕವು ಬ್ಯಾಲೆನ್ಸ್ ಚೆಕ್ ಮಾಡಬಹುದು. ಈ ಲಿಂಕ್ ಕ್ಲಿಕ್ ಮಾಡಿದರೆ https://pfms.nic.in/NewDefaultHome.aspx# ಎಲ್ಲಾ ಮಾಹಿತಿಯೂ ನಿಮ್ಮ ಅಂಗೈಯಲ್ಲಿಯೇ ಸಿಗುತ್ತದೆ.
ಲಿಂಕ್ ಓಪನ್ ಆದಮೇಲೆ 'ನಿಮ್ಮ ಪಾವತಿಯನ್ನು ತಿಳಿದುಕೊಳ್ಳಲು (Know Your Payment) ಕ್ಲಿಕ್ ಮಾಡಬೇಕು. ಇದರ ನಂತರ ನೀವು ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇಲ್ಲಿ ನೀವು ಖಾತೆ ಸಂಖ್ಯೆಯನ್ನು ಎರಡು ಸಲ ನಮೂದಿಸಬೇಕು. ಇದರ ನಂತರ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು. ಆಗ ನಿಮ್ಮ ಖಾತೆಯ ವಿವರ, ಬ್ಯಾಲೆನ್ಸ್ ತಿಳಿಯಲಿದೆ.
ಜನ ಧನ್ ಖಾತೆಗಳಲ್ಲಿ ಲಭ್ಯವಿರುವ ಸೌಲಭ್ಯಗಳಿವು:
ಸರ್ಕಾರವು ತೆರೆದಿರುವ ಝೀರೋ ಬ್ಯಾಲೆನ್ಸ್ ಜನ ಧನ್ ಖಾತೆಗಳಲ್ಲಿ ಅನೇಕ ರೀತಿಯ ಸೌಲಭ್ಯಗಳನ್ನು ಪಡೆಯುತ್ತೀರಿ. ಇವುಗಳಲ್ಲಿ ನೀವು ಓವರ್‌ಡ್ರಾಫ್ಟ್ ಸೌಲಭ್ಯ ಮತ್ತು ರುಪೇ ಡೆಬಿಟ್ ಕಾರ್ಡ್ ಅನ್ನು ಪಡೆಯುತ್ತೀರಿ. ಈ ಕಾರ್ಡ್‌ನಲ್ಲಿ ನೀವು 1 ಲಕ್ಷ ರೂಪಾಯಿಗಳ ಅಪಘಾತ ವಿಮೆ ಉಚಿತವಾಗಿ ಪಡೆಯುತ್ತೀರಿ.
Share your comments