1. ಸುದ್ದಿಗಳು

ಜನ್ ಧನ್ ಖಾತೆದಾರರಿಗೆ ದೀಪಾವಳಿ ಗಿಫ್ಟ್ ನೀಡಲಿದೆ ಕೇಂದ್ರ ಸರ್ಕಾರ?

ಪ್ರಧಾನ್ ಮಂತ್ರಿ ಜನ್-ಧನ್ ಖಾತೆ ತೆರೆದಿರುವವರಿಗೆ ಸಂತಸದ ಸುದ್ದಿ. ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ  ಮಹಿಳೆಯರ ಜನ್ ಧನ್ ಖಾತೆಗಳಿಗೆ ಹಿಂದೆ 500 ರೂಪಾಯಿ ಜಮೆ ಮಾಡಿದಂತೆ ದೀಪಾವಳಿ ಹಬ್ಬಕ್ಕೂ 1500 ರೂಪಾಯಿ ಜಮೆ ಮಾಡಲಾಗುವುದು ಎಂಬ ಮಾತು ಕೇಳಿ ಬರುತ್ತಿದೆ.. ಇದೇ ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರವು  1500 ರೂಪಾಯಿ ಆರ್ಥಿಕ ನೆರವು ನೀಡಲಿದೆ ಎನ್ನಲಾಗುತ್ತಿದೆ.

ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಬಡಜನತೆಗೆ ಈಗಾಗಲೇ ಕೇಂದ್ರ ಸರ್ಕಾರು 500 ರೂಪಾಯಿಯಂತೆ ಹಿಂದೆ ಮೂರು ಕಂತುಗಳಲ್ಲಿ ಜನ್ ಧನ್ ಖಾತೆಗೆ ಹಣ ಜಮೆ ಮಾಡಿದೆ. ದೇಶದ ಸುಮಾರು 20 ಕೋಟಿ ಮಹಿಳೆಯರ ಈ ಯೋಜನೆಯಲ್ಲಿ ಲಾಭಪಡೆದಿದ್ದಾರೆ.

 ಕೊರೋನನಾ ವೈರಸ್ʼನಿಂದಾಗಿ ಭಾರತದ ಎಲ್ಲಾ ವಲಯಗಳಲ್ಲಿ ಹೊಡೆತ ಬಿದ್ದಿದೆ. ಇಡೀ ಅರ್ಥ ವ್ಯವಸ್ಥೆ ಕುಸಿದಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೂ ತೊಂದರೆಯಾಗಿದ್ದದಿಂದ ಈ ಹಿಂದೆ ಕೇಂದ್ರ ಸರ್ಕಾರ ಜನ್ ಧನ್  ಮಹಿಳೆಯರ ಖಾತೆಗೆ ಮೂರು ಕಂತುಗಳನ್ನು ಪ್ರತಿ ತಿಂಗಳಿಗೆ 500 ರುಪಾಯಿಯಂತೆ 1500 ರೂಪಾಯಿ ಜಮೆ ಮಾಡಿತ್ತು. ಇನ್ನು ಬಡ ಕುಟುಂಬ ಸಂಭ್ರಮದಿಂದ ಹಬ್ಬವನ್ನು ಆಚರಿಸಲಿ ಎನ್ನುವುದೇ ಇದರ ಉದ್ದೇಶವಾಗಿದೆ ಅಂತಲೂ ಹೇಳಲಾಗುತ್ತಿದೆ.

ದೀಪಾವಳಿಗೆ ಇನ್ನೂ 15 ದಿನ ಉಳಿದಿದೆ. ಇನ್ನೊಂದು ವಾರದಲ್ಲಿಯೇ ಜನ್ ಧನ್ ಖಾತೆಗೆ ಹಣ ಜಮೆಯಾಗಲಿದೆಯೋ ಇಲ್ಲವೋ ಎಂಬ ವಿಷಯವೂ ಗೊತ್ತಾಗಲಿದೆ. ಒಂದು ವೇಳೆ ಸರ್ಕಾರವು ಜನ್ ಧನ್ ಖಾತೆಗೆ ಹಿಂದೆ ನೀಡಿದ್ದ 500 ರೂಪಾಯಿ ಜಮೆ ಮಾಡಿದಂತೆ ಈಗ 1500 ರೂಪಾಯಿ ಜಮೆ ಮಾಡಿದರೆ ನಿಜವಾಗಲು ಜನ್ ಧನ್ ಖಾತೆದಾರರಿಗೆ ಇದೊಂದು ದೊಡ್ಡ ಗಿಫ್ಟ್ ಸಿಕ್ಕಂತಾಗುತ್ತದೆ.

Published On: 29 October 2020, 12:17 AM English Summary: Happy news for pradhan mantra jan Dhan account holder

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.