1. ಸುದ್ದಿಗಳು

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಕೃಷಿ ಕ್ಷೇತ್ರದಲ್ಲಿ ಮೂವರು ಸೇರಿದಂತೆ 65 ಸಾಧಕರಿಗೆ ಪ್ರಶಸ್ತಿ

ಸಾಂದರ್ಭಿಕ ಚಿತ್ರ

65ನೇ ಕನ್ನಡ ರಾಜ್ಯೋತ್ಸವಕ್ಕೆ ಸಜ್ಜಾಗಿರುವ ರಾಜ್ಯ ಸರ್ಕಾರ, ಈ ಬಾರಿ 26 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ಪ್ರಶಸ್ತಿ ಮೊತ್ತ 1 ಲಕ್ಷ ಮತ್ತು 25 ಗ್ರಾಂ ಚಿನ್ನದ ಪದಕ ಒಳಗೊಂಡಿರುತ್ತದೆ. ನ.7ರಂದು ರವೀಮ್ದ್ರಕಲಾ ಕ್ಷೇತ್ರದಲ್ಲಿ ರಾಜ್ಯೋತ್ಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸರಳವಾಗಿ ನಡೆಯಲಿದೆ.

ಜೀತಪದ್ಧತಿಯಲ್ಲಿ ಸಿಲುಕಿದವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಡಾ. ಪುಟ್ಟಸಿದ್ದಯ್ಯ, ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಲ್ಲಿ ರಾಮನ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಎನ್. ಭಟ್,  ಕೃಷಿ ಕ್ಷೇತ್ರದಲ್ಲಿ  ಮೂವರು ಸೇರಿದಂತೆ 60 ಜನರು ಹಾಗೂ 5 ಸಂಸ್ಥೆಗಳಿಗೆ  ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ.

 ವಿವಿಧ ಕ್ಷೇತ್ರಗಳಿಂದ 1,788 ಅರ್ಜಿಗಳು ಬಂದಿದ್ದವು. 25 ಕ್ಷೇತ್ರಗಳ ತಜ್ಞರನ್ನೊಳಗೊಂಡ ರಾಜ್ಯೋತ್ಸವ ಸಲಹಾ ಸಮಿತಿ 130 ಸಾಧಕರ ಪಟ್ಟಿ ಸಿದ್ಧಪಡಿಸಿತ್ತು. ಯಾವುದೇ ಒತ್ತಡ, ಶಿಫಾರಸು ಇಲ್ಲದೆ, ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದವರನ್ನು, ಅರ್ಜಿಯನ್ನೇ ಸಲ್ಲಿಸದ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಅರ್ಹತೆ ಜತೆ ಸಾಮಾಜಿಕ, ಪ್ರಾದೇಶಿಕ ನ್ಯಾಯದಡಿ, ವೈವಿಧ್ಯತೆಗೂ ನ್ಯಾಯ ಒದಗಿಸಿ ಎಲ್ಲ ಸಮುದಾಯದ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಪ್ರಶಸ್ತಿಗೆ ಪರಿಗಣಿಸಲಾಗಿದೆ’ ಎಂದರು.

ಕೃಷಿ ವಿಭಾಗದಲ್ಲಿ ಬೀದರ್ ನ ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ಕಲಬುರಗಿಯ ಡಾ. ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ :


ಸಾಹಿತ್ಯ ಕ್ಷೇತ್ರದಲ್ಲಿ ಧಾರವಾಡದ ಪ್ರೊ. ಸಿ.ಪಿ. ಸಿದ್ಧಾಶ್ರಮ, ಕೋಲಾರದ ವಿ. ಮುನಿ ವೆಂಕಟಪ್ಪ, ಗದಗದ ವಿಶೇಷ ಚೇತನ ವರ್ಗದ ರಾಮಣ್ಣ ಬ್ಯಾಟಿ, ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜಾ, ಯಾದಗಿರಿಯ ಡಿ.ಎನ್. ಅಕ್ಕಿ,

ಸಂಗೀತ ಕ್ಷೇತ್ರದಲ್ಲಿ ರಾಯಚೂರಿನ ಅಂಬಯ್ಯನೂಲಿ, ಬೆಳಗಾವಿಯ ಅನಂತ ತೇರದಾಳ, ಬೆಂಗಳೂರಿನವರಾದ ಬಿ.ವಿ. ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ್, ದಕ್ಷಿಣ ಕನ್ನಡದ ಕೆ. ಲಿಂಗಪ್ಪ ಶೇರಿಗಾರ ಕಟೀಲು,

ಶಿಕ್ಷಣ ಕ್ಷೇತ್ರದಲ್ಲಿ ಚಿಕ್ಕಮಗಳೂರಿನ ಎಂ.ಎನ್. ಷಡಕ್ಷರಿ, ಚಾಮರಾಜನಗರದ ಡಾ. ಆರ್. ರಾಮಕೃಷ್ಣ, ದಾವಣಗೆರೆಯ ಡಾ. ಎಂ.ಜಿ. ಈಶ್ವರಪ್ಪ, ಮೈಸೂರಿನ ಡಾ. ಪುಟ್ಟಸಿದ್ದಯ್ಯ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗದ ಡಿ.ಎಸ್. ದಂಡಿನ್, ಹೊರನಾಡು ಕನ್ನಡಿಗ ವಿಭಾಗದಲ್ಲಿ ದಕ್ಷಿಣ ಕನ್ನಡದ ಕುಸುಮೋದರ ದೇರಣ್ಣ ಶೆಟ್ಟಿ ಕೇಲ್ತಡ್ಕಾ, ಮುಂಬೈನ ವಿದ್ಯಾ ಸಿಂಹಾಚಾರ್ಯ ಮಾಹುಲಿ,

ಕ್ರೀಡಾ ವಿಭಾಗದಲ್ಲಿ ತುಮಕೂರಿನ ಎಚ್.ಬಿ. ನಂಜೇಗೌಡ, ಬೆಂಗಳೂರು ನಗರದ ಉಷಾರಾಣಿ, ಸಂಕೀರ್ಣ ವಿಭಾಗದಲ್ಲಿ ಕೋಲಾರದ ಡಾ.ಕೆ.ವಿ. ರಾಜು, ಹಾಸನದ ನಂ. ವೆಂಕೋಬರಾವ್, ವಿಶೇಷ ಚೇತನರಾದ ಮಂಡ್ಯದ ಡಾ. ಕೆ.ಎಸ್. ರಾಜಣ್ಣ, ಮಂಡ್ಯದ ವಿ. ಲಕ್ಷ್ಮಿ ನಾರಾಯಣ್.

ನ್ಯಾಯಾಂಗ ಕ್ಷೇತ್ರದಲ್ಲಿ ಬೆಂಗಳೂರಿನ ಎನ್.ಕೆ. ಭಟ್, ಉಡುಪಿಯ ಕೆ.ಎನ್. ವಿಜಯಕುಮಾರ,

ಮಾದ್ಯಮ ಕ್ಷೇತ್ರದಲ್ಲಿ ಮೈಸೂರಿನ ಸಿ. ಮಹೇಶ್ವರನ್, ಬೆಂಗಳೂರಿನ ಟಿ. ವೆಂಕಟೇಶ್,

ಯೋಗ ಕ್ಷೇತ್ರದಲ್ಲಿ ಮೈಸೂರಿನ ಡಾ. ಎ.ಎಸ್. ಚಂದ್ರಶೇಖರ,

ಸಂಘ-ಸಂಸ್ಥೆ ವಿಭಾಗದಲ್ಲಿ ಬೆಂಗಳೂರು ನಗರದ ಯೂತ್ ಫಾರ್ ಸೇವಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನಾ ಕೇಂದ್ರ, ಬೆಂಗಳೂರಿನ ಬೆಟರ್ ಇಂಡಿಯಾ, ಬೆಂಗಳೂರು ಗ್ರಾಮಾಂತರದ ಯುವ ಬ್ರಿಗೇಡ್, ದಕ್ಷಿಣ ಕನ್ನಡದ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್,

ಸಮಾಜ ಸೇವೆ ವಿಭಾಗದಲ್ಲಿ ಉತ್ತರ ಕನ್ನಡದ ಎನ್.ಎಸ್. ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್, ಚಿಕ್ಕಮಗಳೂರಿನ ಮೋಹಿನಿ ಸಿದ್ದೇಗೌಡ,

ವೈದ್ಯಕೀಯ ವಿಭಾಗದಲ್ಲಿ ಬಾಗಲಕೋಟೆಯ ಡಾ. ಅಶೋಕ್ ಸೊನ್ನದ್, ಶಿವಮೊಗ್ಗದ ಡಾ. ಬಿ.ಎಸ್. ಶ್ರೀನಾಥ, ಬಳ್ಳಾರಿಯ ಡಾ. ಎ. ನಾಗರತ್ನ, ರಾಮನಗರದ ಡಾ. ವೆಂಕಟಪ್ಪ,

ಕೃಷಿ ವಿಭಾಗದಲ್ಲಿ ಬೀದರ್ ನ ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ಕಲಬುರಗಿಯ ಡಾ. ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್.

ಪರಿಸರ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ಅಮರ ನಾರಾಯಣ, ವಿಜಯಪುರದ ಎನ್.ಡಿ. ಪಾಟೀಲ್.

ವಿಜ್ಞಾನ-ತಂತ್ರಜ್ಞಾನ ವಿಭಾಗದಲ್ಲಿ ಉಡುಪಿಯ ಪ್ರೊ. ಉಡುಪಿ ಶ್ರೀನಿವಾಸ, ಶಿವಮೊಗ್ಗದ ಡಾ. ಚಿಂದಿ ವಾಸುದೇವಪ್ಪ,

ಸಹಕಾರ ಕ್ಷೇತ್ರದಲ್ಲಿ ಬೆಂಗಳೂರಿನ ಡಾ. ಸಿ.ಎನ್. ಮಂಜೇಗೌಡ.ಬಯಲಾಟದಲ್ಲಿ ಬೆಳಗಾವಿಯ ಕೆಂಪವ್ವ ಹರಿಜನ, ಹಾವೇರಿಯ ಚೆನ್ನಬಸಪ್ಪ ಬೆಂಡಿಗೇರಿ,

ಯಕ್ಷಗಾನ ವಿಭಾಗದಲ್ಲಿ ಚಾಮರಾಜನಗರದ ಬಂಗಾರ್ ಆಚಾರಿ, ಶಿವಮೊಗ್ಗದ ಡಾ.ಎಂ.ಕೆ. ರಮೇಶ್ ಆಚಾರ್ಯ,

ರಂಗಭೂಮಿಯಲ್ಲಿ ಹಾಸನದ ಅನುಸೂಯಮ್ಮ, ದಾವಣಗೆರೆಯ ಎಚ್. ಷಡಕ್ಷರಪ್ಪ, ಚಿತ್ರದುರ್ಗದ ತಿಪ್ಪೇಸ್ವಾಮಿ,

ಚಲನಚಿತ್ರ ವಿಭಾಗದಲ್ಲಿ ತುಮಕೂರಿನ ಬಿ.ಎಸ್. ಬಸವರಾಜು, ಕೊಡಗಿನ ಆಪಾಢಾಂಡ ತಿಮ್ಮಯ್ಯ ರಘು - ಎ.ಟಿ. ರಘು,

ಚಿತ್ರಕಲೆ- ಧಾರವಾಡದ ಎಂ.ಜೆ. ವಾಜೇದ್ ಮಠ, ಜಾನಪದ - ಬಾಗಲಕೋಟೆಯ ಗುರುರಾಜ ಹೊಸಕೋಟೆ, ಹಾಸನದ ಡಾ. ಹಂಪನಹಳ್ಳಿ ತಿಮ್ಮೇಗೌಡ,

ಶಿಲ್ಪಕಲೆ- ಮೈಸೂರಿನ ಎನ್.ಎಸ್. ಜನಾರ್ದನ ಮೂರ್ತಿ, ನೃತ್ಯ- ನಾಟ್ಯ ವಿದೂಷಿ ಜ್ಯೋತಿ ಪಟ್ಟಾಭಿರಾಮನ್,

ಜಾನಪದ-ತೊಗಲುಬೊಂಬೆ ವಿಭಾಗದಲ್ಲಿ ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

Published On: 29 October 2020, 09:00 AM English Summary: state government has announced rajyotsava awards 2020

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.