1. ಸುದ್ದಿಗಳು

Breaking : ಅನ್ನ ಭಾಗ್ಯ ಯೋಜನೆ ಅಕ್ಕಿ ಬದಲಿಗೆ ಪಡಿತರದಾರರ ಖಾತೆಗೆ ಹಣ ಹಾಕಲು ನಿರ್ಧಾರ!

Kalmesh T
Kalmesh T
Breaking News: Decision to transfer money in the account instead of rice of Anna Bhagya Yojana!

ರಾಜ್ಯ ಸರ್ಕಾರದ 5 ಗ್ಯಾರಂಟಿ (Congress 5 guarantee) ಯೋಜನೆಗಳಲ್ಲಿ ಒಂದಾಗಿದ್ದ, ಅನ್ನಭಾಗ್ಯ ಯೋಜನೆ (Anna Bhagya Scheme) ಸದ್ಯದಲ್ಲಿ ಅಕ್ಕಿ ಸಮಸ್ಯೆ ಅನುಭವಿಸುತ್ತಿದ್ದು, ಈ ಕಾರಣದಿಂದಾಗಿ ಸದ್ಯಕ್ಕೆ ರಾಜ್ಯದ ಜನತೆಗೆ ಅಕ್ಕಿಯ ಬದಲಿಗೆ ಪಡಿತರದಾರರ ಖಾತೆಗೆ ಹಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಕಾಂಗ್ರೆಸ್ ಪಕ್ಷವೂ ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ (Anna Bhagya) ಉಚಿತ ಅಕ್ಕಿ ವಿತರಣೆಗೆ ತೊಡಕಾಗಿರುವ ಕಾರಣದಿಂದ ಇದೀಗ ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಕರ್ನಾಟಕ ಸಚಿವ ಸಂಪುಟ (Karnataka Cabinet Meeting) ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ನೇತೃತ್ವದಲ್ಲಿ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್‌.ಕೆ. ಪಾಟೀಲ್ ಹಾಗೂ ಕೆ.ಎಚ್. ಮುನಿಯಪ್ಪ ಅವರು ಸಂಪುಟ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಅಲ್ಲದೇ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ (BPL) ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಹಾಗೂ ಇನ್ನುಳಿದಂತೆ 5ಕೆಜಿ ಅಕ್ಕಿ ಬದಲು ಹಣವನ್ನ ಅವರ ಖಾತೆಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಕೆ.ಜಿ ಅಕ್ಕಿಗೆ 34 ರೂಪಾಯಿ!

ಹೌದು, 1 ಕೆ.ಜಿ ಅಕ್ಕಿಗೆ 34 ರೂಪಾಯಿಯನ್ನ ನಿಗದಿಪಡಿಸಲಾಗಿದ್ದು, ಆ ಪ್ರಕಾರವಾಗಿ ಹಣವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ನೀಡಲಾಗುತ್ತಿರುವ 5 ಕೆ.ಜಿ ಅಕ್ಕಿಯ ಜೊತೆಗೆ ಕಾಂಗ್ರೆಸ್‌ ಭರವಸೆ ನೀಡಿದ್ದ 5 ಕೆ.ಜಿ ಅಕ್ಕಿಯ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ಹಣ ಹಾಕಲಾಗುವುದು ಎಂದಿದ್ದಾರೆ.

ಅಕ್ಕಿ ಟೆಂಡರ್ ಫೈನಲ್ ಆದ ನಂತರ ಅಕ್ಕಿ ನೀಡುತ್ತೇವೆ: ಸಚಿವ ಕೆ.ಹೆಚ್.ಮುನಿಯಪ್ಪ

ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಅನುಷ್ಠಾನ ಮಾಡುವುದಕ್ಕೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗದೆ ಇರುವುದರಿಂದ ಪಡಿತರಚೀಟಿದಾರರಿಗೆ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 

ಕಾಂಗ್ರೆಸ್‌ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಪ್ರಮುಖ ಗ್ಯಾರಂಟಿ ಅನ್ನಭಾಗ್ಯ ಯೋಜನೆಯೂ ಪ್ರಮುಖವಾಗಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರಚೀಟಿದಾರರ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆ.ಜಿ ಅಕ್ಕಿ ನೀಡುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಟೊಮೆಟೊ ದರದಲ್ಲಿ ಭಾರೀ ಹೆಚ್ಚಳ: ದೇಶಾದ್ಯಂತ ₹120ರ ಗಡಿ ದಾಟಿ ದಾಖಲೆ

ಇದೀಗ ಕೇಂದ್ರ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯನ್ನು ವಿತರಿಸುವುದಕ್ಕೆ (ಅಕ್ಕಿ ಪೂರೈಸದೆ ಇರುವುದರಿಂದ) ರಾಜ್ಯ ಸರ್ಕಾರಕ್ಕೆ ಸಮ್ಮತಿ ನೀಡದೆ ಇರುವುದರಿಂದಾಗಿ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜುಲೈ 1ರಿಂದ ಅಕ್ಕಿ ಬದಲು 34 ರೂ. ಪ್ರತಿ kgಗೆ ನೀಡಲು ಸರ್ಕಾರದ ನಿರ್ಧಾರ ಮಾಡಿದೆ. ಪಡಿತರ ಚೀಟಿ ಹೊಂದಿರುವವರ ಖಾತೆಗೆ ಹಣ

ಅಕ್ಕಿ ಟೆಂಡರ್ ಫೈನಲ್ ಆದ ನಂತರ ಅಕ್ಕಿ ನೀಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

PM ಕಿಸಾನ್ ಯೋಜನೆ: ಇ-ಕೆವೈಸಿ ದಾಖಲಿಸಲು ಜೂನ್ 30 ಕಡೇ ದಿನ!

Anna Bhagya Scheme big update  | Anna Bhagya Scheme | Karnataka Cabinet Meeting | Congress 5 guarantees

Published On: 28 June 2023, 03:42 PM English Summary: Breaking News: Decision to transfer money in the account instead of rice of Anna Bhagya Yojana!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.