1. ಸುದ್ದಿಗಳು

e-KYC ಪಿ.ಎಂ ಕಿಸಾನ್‌ ಯೋಜನೆಯ ಇ-ಕೆವೈಸಿ ರೈತರೇ ಮಾಡಬಹುದು!

Hitesh
Hitesh
e-KYC of PM Kisan scheme can be done by farmers!

ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಪಡೆಯಲು ರೈತರೇ ತಮ್ಮಲ್ಲಿರುವ ಮೊಬೈಲ್‌ಗಳಲ್ಲಿ ಇ-ಕೆವೈಸಿ ನೋಂದಾಯಿಸಬಹುದು.

ಮೊಬೈಲ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಪಿಎಂ ಕಿಸಾನ್‌ ಇಕೆವೈಸಿ ಎಂದು ಟೈಪ್ ಮಾಡಿ, ಇದರ ತಳ ಭಾಗದಲ್ಲಿ

ಕಾಣುವ ಟು ಓಟಿಪಿ ಬೇಸ್ ಇ-ಕೆವೈಸಿ ಕ್ಲಿಕ್ ಮಾಡಿದರೆ ಪೇಜ್ ಓಪನ್ ಆಗುತ್ತದೆ.

ಅಲ್ಲಿ ಕೇಳಿರುವ ಬಾಕ್ಸ್‌ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಎಂದು ತೋರಿಸುತ್ತೆ.

ಅಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಿದರೆ ಆಗ ಆಧಾರ್ ಸಂಖ್ಯೆಗೆ ನೀಡಿರುವ ಮೊಬೈಲ್‌ ಸಂಖ್ಯೆ ಕೇಳುತ್ತದೆ.

ಮೊಬೈಲ್ ಸಂಖ್ಯೆ ನಮೂದಿಸಿದ ಮೇಲೆ ಗೆಟ್ ಮೊಬೈಲ್ ಒಟಿಪಿ ಎಂದು ಕ್ಲಿಕ್ ಮಾಡಿದ ಮೇಲೆ ಮೊಬೈಲ್‌ಗೆ ನಾಲ್ಕು ಅಂಕೆಯ ಓಟಿಪಿ ಬರುತ್ತದೆ.

ಅದನ್ನು ನಮೂದಿಸಿ ಸಬ್ಬಿಟ್ ಓಟಿಪಿ ಎಂದು ಕ್ಲಿಕ್ ಮಾಡಿದರೆ ಆರು ಸಂಖ್ಯೆಯ ಓಟಿಪಿ ಬರುತ್ತದೆ.

ಅದನ್ನು ಅಲ್ಲಿರುವ ಬಾಕ್ಸ್‌ನಲ್ಲಿ ಟೈಪ್ ಮಾಡಿ ಸಬ್ಬಿಟ್ ಮಾಡಿದರೆ ಇ-ಕೆವೈಸಿ ಡನ್ ಸಕ್ಸಸ್ ಫುಲ್ ಬರುತ್ತದೆ.

Google Play Store 20 PM KISAN GOI app aadhar face Rd app ಡೌನ್‌ಲೋಡ್ ಮಾಡಿಕೊಂಡು ನಂತರ

login ಆಗಿ ಆಧಾರ್ ಸಂಖ್ಯೆಯನ್ನು ನಮೂದಿಸಿವುದು ನಂತರ ಆಧಾರ್ ಸಂಖ್ಯೆಯೊಂದಿಗೆ ನೊಂದಣಿಯಾಗಿರುವ ಮೊಬೈಲ್‌ಗೆ OTP ರವಾನೆಯಾಗುತ್ತದೆ.

ಹೀಗೆ ಸ್ವೀಕರಿಸಿದ OTP ಯನ್ನು ದಾಖಲಿಸುವುದು ನಂತರ Click here to complet e-KYC ಎಂಬ ಮಾಹಿತಿಯು ಗೋಚರಿಸುತ್ತದೆ.

ಮತ್ತೇ OTP ದಾಖಲಿಸಿ I am agri for face authentication ಎಂದು ನಮೂದಿಸುವುದು ನಂತರ ರೈತರ/ಫಲಾನುಭವಿಯ ಮುಕದ

ಛಾಯ ಚಿತ್ರವನ್ನು ಕ್ಲಿಕ್ ಮಾಡುವುದು ನಂತರ 4 image successfully processed ಎಂಬ ಮಾಹಿತಿಯು ಗೋಚರಿಸುತ್ತದೆ.

ನಂತರ e-KYC successful ಎಂಬ ಮಾಹಿತಿಯನ್ನು ಗೋಚರಿಸುತ್ತದೆ. ಹೀಗೆ face authentication ಮೂಲಕ e-KYC ಮಾಡಿಸಬಹುದು.

ಈ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್‌ನಲ್ಲಿಯೇ ಇ-ಕೆವೈಸಿ ದಾಖಲಿಸಬಹುದಾಗಿದ್ದು, ಇದನ್ನು ಹೊರತುಪಡಿಸಿ ಗ್ರಾಮ ಒನ್,

ಸಿಎಸ್ಸಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹ ಇ-ಕೆವೈಸಿ ಮಾಡಿಸಬಹುದಾಗಿದೆ

ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್‌ 30 ಕೊನೆಯ ದಿನ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತರ ಬ್ಯಾಂಕ್‌ ಖಾತೆಗೆ ಸೇರಲು ಅಗತ್ಯವಾಗಿರುವ ಇ-ಕೆವೈಸಿಯನ್ನು

ಜೂನ್ 30 ರೊಳಗೆ ನೋಂದಾಯಿಸಬೇಕು.

ಈ ಅವಧಿಯ ಒಳಗಾಗಿ ರೈತರು e- kyc ಯನ್ನು ಪೂರ್ಣಗೊಳಿಸದೆ ಇದ್ದರೆ, ರೈತರ ಖಾತೆಗೆ ಈ ಮೊತ್ತ ವರ್ಗಾವಣೆ ಆಗದೆ ಇರುವ ಸಾಧ್ಯತೆ ಇದೆ.

ಈ ಸಂಬಂಧ  ಕೋಲಾರದ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಫಲಾನುಭವಿ ರೈತರಿಗೆ ಮನವಿ ಮಾಡಿದ್ದಾರೆ.

ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರ  ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ

ಪ್ರತಿ ವರ್ಷ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂ.ಗಳನ್ನು ಪ್ರತಿ ನಾಲ್ಕು  ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.

ಈ ಯೋಜನೆ ಪ್ರಾರಂಭಗೊಂಡ ಮೇಲೆ ಇದುವರೆಗೂ 13 ಕಂತುಗಳು ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದ್ದು 14 ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

14ನೇ ಕಂತಿನ ಹಣ ಬರುವ ಸಮಯದಲ್ಲಿ ಕೇಂದ್ರ ಸರಕಾರ ಯೋಜನೆ ಪಡೆಯುತ್ತಿರುವ ಪ್ರತಿ

ರೈತರು ಇ-ಕೆವೈಸಿ ನೋಂದಾಯಿಸಲು ಸೂಚಿಸಿದ್ದು ರೈತರು ಹತ್ತಿರದ ಗ್ರಾಮ ಒನ್, ಸಿಎಸ್ಸಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ

ಸಹ ಇ-ಕೆವೈಸಿ ಮಾಡಿಸಬಹುದಾಗಿದೆ ಇದನ್ನು ಹೊರತುಪಡಿಸಿ ತಮ್ಮಲ್ಲಿರುವ ಮೊಬೈಲ್‌ಗಳಲ್ಲಿಯೇ

ಆಧಾರ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.  

Image Courtesy: Pexels

PM ಕಿಸಾನ್ ಯೋಜನೆ: ಇ-ಕೆವೈಸಿ ದಾಖಲಿಸಲು ಜೂನ್ 30 ಕಡೇ ದಿನ!

Published On: 28 June 2023, 02:44 PM English Summary: e-KYC of PM Kisan scheme can be done by farmers!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.