1. ಸುದ್ದಿಗಳು

Annabhagya Yojana ಅನ್ನಭಾಗ್ಯ ಯೋಜನೆಯ ಬಗ್ಗೆ ಕಾಂಗ್ರೆಸ್‌ ಹೇಳಿದ್ದೇನು, ಆಗಿದ್ದೇನು, ಇದಕ್ಕೆಲ್ಲ ಕಾರಣವೇನು?

Hitesh
Hitesh
What did the Congress say about Annabhagya Yojana, what happened, what is the reason for all this?

ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಅನುಷ್ಠಾನ ಮಾಡುವುದಕ್ಕೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗದೆ ಇರುವುದರಿಂದ ಪಡಿತರಚೀಟಿದಾರರಿಗೆ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.  

ಕಾಂಗ್ರೆಸ್‌ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಪ್ರಮುಖ ಗ್ಯಾರಂಟಿ ಅನ್ನಭಾಗ್ಯ ಯೋಜನೆಯೂ ಪ್ರಮುಖವಾಗಿದೆ.

ಅನ್ನಭಾಗ್ಯ ಯೋಜನೆಯಡಿ ಪಡಿತರಚೀಟಿದಾರರ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆ.ಜಿ ಅಕ್ಕಿ ನೀಡುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಕೇಂದ್ರ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯನ್ನು ವಿತರಿಸುವುದಕ್ಕೆ (ಅಕ್ಕಿ ಪೂರೈಸದೆ ಇರುವುದರಿಂದ) ರಾಜ್ಯ ಸರ್ಕಾರಕ್ಕೆ ಸಮ್ಮತಿ ನೀಡದೆ

ಇರುವುದರಿಂದಾಗಿ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜುಲೈ 1ರಿಂದ ಅಕ್ಕಿ ಬದಲು 34 ರೂ. ಪ್ರತಿ kgಗೆ ನೀಡಲು ಸರ್ಕಾರದ ನಿರ್ಧಾರ ಮಾಡಿದೆ. 

ಪಡಿತರ ಚೀಟಿ ಹೊಂದಿರುವವರ ಖಾತೆಗೆ ಹಣ

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜುಲೈ 1ರಿಂದ ಅಕ್ಕಿ ಬದಲು 34 ರೂ. ಪ್ರತಿ kgಗೆ ನೀಡಲಾಗುವುದು. 

ಅಕ್ಕಿ ಟೆಂಡರ್ ಫೈನಲ್ ಆದ ನಂತರ ಅಕ್ಕಿ ನೀಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.   

Breaking : ಅನ್ನ ಭಾಗ್ಯ ಯೋಜನೆ ಅಕ್ಕಿ ಬದಲಿಗೆ ಪಡಿತರದಾರರ ಖಾತೆಗೆ ಹಣ ಹಾಕಲು ನಿರ್ಧಾರ!

ಬಿಜೆಪಿ- ಕಾಂಗ್ರೆಸ್‌ ವಾಕ್ಸಮರ

ಅನ್ನಭಾಗ್ಯ ಯೋಜನೆಯ ಬಗ್ಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಸೃಷ್ಟಿ ಆಗಿತ್ತು.

ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿ ಮಾಡುವ ಮುನ್ನ ಯೋಜನೆ ಜಾರಿಯ ಬಗ್ಗೆ ಕೇಂದ್ರದೊಂದಿಗೆ ಯಾವುದೇ ಚರ್ಚೆಯನ್ನು ಮಾಡಿರಲಿಲ್ಲ ಎಂದಿದ್ದರು.

ಅಲ್ಲದೇ ಕೇಂದ್ರ ಸರ್ಕಾರಕ್ಕೆ ಕರ್ನಾಟಕವಷ್ಟೇ ಮುಖ್ಯವಲ್ಲ ಎಂದು ಸಂಸದ ಸದಾನಂದ ಗೌಡ ಅವರು ಹೇಳಿದ್ದರು.

ಸಂಸದರ ಈ ಹೇಳಿಕೆಗೆ ವ್ಯಪಕವಾದ ಆಕ್ಷೇಪ ವ್ಯಕ್ತವಾಗಿತ್ತು.

ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕೀಯ; ಸಿ.ಎಂ

ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ಕನ್ನಡಿಗರ ಪಾಲನ್ನು, ಬಡವರ ಪಾಲನ್ನು ಕಸಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ

ಯಾವುದೇ ಸಂಶಯ ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯ ಸರ್ಕಾರ ಈಗಾಗಲೇ ಒಂದು ಗ್ಯಾರಂಟಿಯನ್ನು  ಜಾರಿಮಾಡಿದ್ದು, ಜುಲೈ 1 ರಂದು ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡುದಾರರಿಗೆ

ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಆಹಾರ

ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ  ಮೆ.ಟನ್ ಅಗತ್ಯವಿದೆ ಎಂದು ಕೋರಿ ಜೂನ್‌ 9 ರಂದು  ಪತ್ರ ಬರೆಯಲಾಗಿತ್ತು. 

ಅಕ್ಕಿ ಸರಬರಾಜು ಸ್ಥಗಿತ: ಕೇಂದ್ರ ಸರ್ಕಾರವು ಈ ನಡುವೆ ಮುಕ್ತ ಮಾರುಕಟ್ಟೆಯಲ್ಲಿ ಯಾವುದೇ ರಾಜ್ಯಕ್ಕೆ

ಅಕ್ಕಿ ಹಾಗೂ ಗೋಧಿ ಸರಬರಾಜು ಮಾಡುವುದನ್ನು ಸ್ಥಗಿತ ಮಾಡಿ ಆದೇಶ ಮಾಡಿದ್ದನ್ನು ಸಹ ಕಾಂಗ್ರೆಸ್‌ ವಿರೋಧಿಸಿತ್ತು.

ಕೇಂದ್ರ ಸರ್ಕಾರವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯನ್ನು ರದ್ದು ಮಾಡಿದೆ.

ಈ ಯೋಜನೆಯ ಮೂಲಕ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಹೇಳಿದ್ದರು.

ಪರ್ಯಾಯ ಮಾರ್ಗದ ಚರ್ಚೆ

ಅನ್ನಭಾಗ್ಯ ಯೋಜನೆ ಜಾರಿ ಕಗ್ಗಂಟಾಗುತ್ತಿದ್ದಂತೆಯೇ ರಾಜ್ಯ ಸರ್ಕಾರವು ಈಚೆಗೆ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಅನ್ನಭಾಗ್ಯ

ಯೋಜನೆ ಜಾರಿಗೆ ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಚ್‌. ಮುನಿಯಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.

ಕೇಂದ್ರದಿಂದ ಅಕ್ಕಿ ಸಿಗದೆ ಇದ್ದರೆ ಪರ್ಯಾಯವಾಗಿ ಯೋಜನೆಯನ್ನು ರೂಪಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದರು.   

ಕೇಂದ್ರ ಸರ್ಕಾರದ ಸ್ಪಷ್ಟ ನಿರಾಕರಣೆ

ರಾಜ್ಯ ಸರ್ಕಾರದ 5 ಗ್ಯಾರಂಟಿ (Congress 5 guarantee) ಯೋಜನೆಗಳಲ್ಲಿ ಒಂದಾಗಿದ್ದ, ಅನ್ನಭಾಗ್ಯ ಯೋಜನೆ (Anna Bhagya Scheme)

ಸದ್ಯದಲ್ಲಿ ಅಕ್ಕಿ ಸಮಸ್ಯೆ ಅನುಭವಿಸುತ್ತಿದ್ದು, ಇದರ ಬದಲಿಗೆ ಪಡಿತರದಾರರ ಖಾತೆಗೆ ಹಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 

Published On: 28 June 2023, 04:10 PM English Summary: What did the Congress say about Annabhagya Yojana, what happened, what is the reason for all this?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.