1. ಸುದ್ದಿಗಳು

Breaking News: ಡೈರಿ ಸ್ಪೋಟದಿಂದ 18 ಸಾವಿರ ಹಸುಗಳ ಸಾವು! ಎಲ್ಲಿ ಗೊತ್ತಾ?

Kalmesh T
Kalmesh T
Breaking News: 18 thousand cows died due to dairy explosion!

ಡೈರಿ ಸ್ಪೋಟದಿಂದಾಗಿ ಸರಿಸುಮಾರು 18 ಸಾವಿರ ಹಸುಗಳು ಸಾವನ್ನಪ್ಪಿದ ಘಟನೆ ಅಮೇರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.

ಅಮೆರಿಕದ ಟೆಕ್ಸಾಸ್‌ನ ಪಶ್ಚಿಮ ಭಾಗದಲ್ಲಿರುವ ಡೈರಿ ಫಾರ್ಮೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಸುಮಾರು 18,000  ಹಸುಗಳು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಇದು ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದ ಹಸುಗಳು ಸಾವಿಗೀಡಾಗಿರುವ ಅತಿದೊಡ್ಡ ಪ್ರಕರಣ ಎನಿಸಿಕೊಂಡಿದೆ.

ಟೆಕ್ಸಾಸ್‌ನ ಸೌತ್‌ ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಸೋಮವಾರ ಈ ಸ್ಫೋಟ ಸಂಭವಿಸಿದ್ದು, ಡೈರಿಯ ಮೇಲ್ಭಾಗದಲ್ಲಿ ಗಂಟೆಗಳ ಕಾಲ ಕಪ್ಪು ಮೋಡ ಆವರಿಸಿತ್ತು.

ಸ್ಫೋಟದ ಬಳಿಕ  ಫಾರ್ಮ್‌ನಲ್ಲಿ ಭೀಕರವಾದ ಬೆಂಕಿ ಹೊತ್ತಿಕೊಂಡಿದ್ದು, ಈ ಬೆಂಕಿಯ ಕೆನ್ನಾಲಿಗೆಗೆ 18 ಸಾವಿರ ಹಸುಗಳು ಬಲಿಯಾಗಿವೆ.

ಇವುಗಳಲ್ಲಿ ಬಹುತೇಕ ಹೋಲಿಸ್ಟೈನ್‌ ಮತ್ತು ಜೆರ್ಸಿ ತಳಿಗೆ ಸೇರಿದ ಹಸುಗಳಾಗಿವೆ. ಡೈರಿ ಫಾರ್ಮ್‌ನಲ್ಲಿದ್ದ ಶೇ.90ರಷ್ಟು ಹಸುಗಳು ದುರ್ಘಟನೆಯಲ್ಲಿ ಸಾವನ್ನಪ್ಪಿವೆ.

ಈ ಘಟನೆಯಲ್ಲಿ ಯಾವುದೇ ಮಾನವರು ಸಾವಿಗೀಡಾಗಿಲ್ಲ. ಆದರೆ ಇಲ್ಲಿಯವರೆಗೂ ಈ ಸ್ಫೋಟಕ್ಕೆ ಕಾರಣವೇನು ಎಂಬುದು ಬೆಳಕಿಗೆ ಬಂದಿಲ್ಲ.

ಈ ದುರ್ಘಟನೆಯಿಂದ ಉಂಟಾದ ನಷ್ಟದ ಪ್ರಮಾಣವೂ ಸಹ ದೊಡ್ಡದಾಗಿದೆ. ಅಮೆರಿಕ ಟುಡೇ ವರದಿಯ ಪ್ರಕಾರ ಪ್ರತಿ ಹಸುವೂ ಸುಮಾರು 1.63 ಲಕ್ಷ ರು. ಬೆಲೆ ಬಾಳುತ್ತಿತ್ತು ಎಂದು ತಿಳಿದುಬಂದಿದೆ.

ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಈ ಭತ್ಯೆಗಳಲ್ಲೂ ಹೆಚ್ಚಳ: ಈ ಭರ್ಜರಿ ಹೆಚ್ಚಳ ಯಾರಿಗೆ ಎಷ್ಟು ಗೊತ್ತೆ?

ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ : ಇತಿಹಾಸ ಮತ್ತು ಕೃತಿಗಳು

Published On: 14 April 2023, 02:50 PM English Summary: Breaking News: 18 thousand cows died due to dairy explosion!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.