ಕೇಂದ್ರ ಸರ್ಕಾರು ಭಾರತದಿಂದ ಸಕ್ಕರೆ ರಫ್ತಿಗೆ ನಿರ್ಬಂಧ ಹೇರಿದ್ದು, ವಿಶ್ವದ ವಿವಿಧೆಡೆ ಸಕ್ಕರೆ ರಫ್ತಿನಲ್ಲಿ ಸಮಸ್ಯೆ ಆಗಿದೆ.
ಆಧಾರ್ ಕಾರ್ಡ್‌ಗಾಗಿ 24 ವರ್ಷ ಬಿಟ್ಟು ಮನೆಗೆ ಬಂದ ವ್ಯಕ್ತಿ!
ಕೇಂದ್ರ ಸರ್ಕಾರವು 2022 -2023ನೇ ಸಾಲಿನ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಇದರಿಂದ ಸಕ್ಕರೆ ಸಾಗಣೆಯಲ್ಲಿ ಮುಂದಿರುವ ಬ್ರೆಜಿಲ್‌ನಲ್ಲಿ ಸಕ್ಕರೆ ಪೂರೈಕೆಯ ಬಿಕ್ಕಟ್ಟು ಎದುರಾಗಿದೆ.
ಈ ಬೆಳವಣಿಗೆಯಿಂದ ಪರೋಕ್ಷವಾಗಿ ಜಾಗತಿಕ ಮಾರುಕಟ್ಟೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಕೇಂದ್ರ ಆಹಾರ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಪ್ರಸಕ್ತ ವರ್ಷ ಮೇ 31ರ ಒಳಗೆ ಜಾಗತಿಕ ಮಾರುಕಟ್ಟೆಯಲ್ಲಿ 6 ಮಿಲಿಯನ್ ಟನ್ ಸಕ್ಕರೆ ಮಾರಾಟ ಮಾಡಲು ದಕ್ಷಿಣ ಏಷ್ಯಾದ ರಾಷ್ಟ್ರವು ಗುರಿ ಹಾಕಿಕೊಂಡಿತ್ತು.
ಕರಾವಳಿ ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿಸುದ್ದಿ: ಇನ್ಮುಂದೆ ಸಿಗಲಿದೆ ಕುಚಲಕ್ಕಿ!
ಇದು ಮುಂದಿನ ಮತ್ತಷ್ಟು ಸಕ್ಕರೆಯನ್ನು ರಫ್ತು ಮಾಡಲು ಇರುವ ಗುರಿಯನ್ನು ಸೂಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬ್ರೆಜಿಲ್‌ನಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆ ನಾಶವಾಗಿದೆ.
ಅಕ್ಟೋಬರ್ ಅಂತ್ಯದಿಂದ ನ್ಯೂಯಾರ್ಕ್‌ನಲ್ಲಿನ ಕಚ್ಚಾ ಸಕ್ಕರೆಯ ಬೆಲೆ ಶೇ. 6ಕ್ಕಿಂತಲೂ ಹೆಚ್ಚಾಗಿದೆ.
ಉತ್ಪಾದನೆಯ ವೇಗದ ಆಧಾರದ ಮೇಲೆ ಭಾರತವು ಮೊದಲ ಕಂತಿನಲ್ಲಿ ಆರು ಮಿಲಿಯನ್ ಟನ್ ಸಕ್ಕರೆ ರಫ್ತು ಮಾಡಲು ಹಾಗೂ ಎರಡನೇ ಕಂತಿನಲ್ಲಿ ಸುಮಾರು 3 ಮಿಲಿಯನ್ ಟನ್‌ನಷ್ಟು ಸಕ್ಕರೆ ರಫ್ತಿಗೆ ಅನುಮತಿ ನೀಡಿದೆ.
ಕೇಂದ್ರ ಸರ್ಕಾರವು ದೇಶದಲ್ಲಿ ಸಕ್ಕರೆಯ ಲಭ್ಯತೆ ದೃಷ್ಟಿಯಿಂದ 2023ರ ಅಕ್ಟೋಬರ್ ಸಕ್ಕರೆ ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ.
ಚಂದ್ರಗ್ರಹಣ; ಬೆಂಗಳೂರಲ್ಲಿ ಮೊಟ್ಟೆ ಬಿರಿಯಾನಿ ತಿನ್ನುವ ಪ್ರತಿಭಟನೆ!
ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಪ್ರಕಾರ, ಭಾರತ ದೇಶ ಒಂದರಲ್ಲೇ ಈ ವರ್ಷ 35.5 ಮಿಲಿಯನ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆ ಆಗಲಿದೆ ಎಂದು ಅಂದಾಜಿಸಲಾಗಿದೆ.
ಸಕ್ಕರೆ ಉತ್ಪಾದನೆಯಲ್ಲಿ ಭಾರತವು ಇಂಡೋನೇಷ್ಯಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಿಗಿಂತಲೂ ಮುಂಚೂಣಿಯಲ್ಲಿದೆ.
ಭಾರತೀಯ ಸಕ್ಕರೆ ಕಾರ್ಖಾನೆಗಳು ಈಗಾಗಲೇ 2.2 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿವೆ.
ಆದರೆ, ಕೆಲವು ನಿರ್ದಿಷ್ಟ ಒಪ್ಪಂದಗಳನ್ನು ಹೊರತುಪಡಿಸಿ ಕೇಂದ್ರ ಸರ್ಕಾರವು ಸಕ್ಕರೆ ರಫ್ತು ನಿಷೇಧಿಸಿದೆ.
ಕೇಂದ್ರ ಸರ್ಕಾರವು ಗೋಧಿ ರಫ್ತಿಗೆ ಕಡಿವಾಣ ಹಾಕಿದ ಕೆಲವೇ ದಿನಗಳ ನಂತರದಲ್ಲಿ ಸಕ್ಕರೆ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಿತ್ತು.
ಹೊಸ ನಿರ್ಬಂಧಗಳು ಜೂನ್ 1 ರಿಂದ ಜಾರಿಗೆ ಬರಲಿವೆ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ನವೆಂಬರ್ 8ಕ್ಕೆ ವಿವಿಧೆಡೆ ಪೂರ್ಣ ಚಂದ್ರಗ್ರಹಣ, ವಿಶೇಷತೆ ಗೊತ್ತೆ ?
ದೇಶೀಯ ಮಾರುಕಟ್ಟೆಯಲ್ಲಿನ ಸಕ್ಕರೆಯ ಲಭ್ಯತೆ ಹೆಚ್ಚಿಸಲು ಹಾಗೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ
ಸಕ್ಕರೆ (Sugar) ರಫ್ತಿನ (Export) ನಿರ್ಬಂಧ ( restriction) ವಿಧಿಸಿತ್ತು. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (DGDT) ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
"ಸಕ್ಕರೆ ರಫ್ತು ಜೂನ್ 1, 2022 ರಿಂದ ನಿರ್ಬಂಧಿತ ವರ್ಗದಲ್ಲಿ ಇರಿಸಲಾಗಿದೆ" ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಈಚೆಗೆ ಅಧಿಸೂಚನೆಯಲ್ಲಿ ತಿಳಿಸಿದೆ.
ಕೇಂದ್ರ 2021-22 ರ ಸಕ್ಕರೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ದೇಶದಲ್ಲಿ ಸಕ್ಕರೆ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ
ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತುಗಳನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಈ ಕ್ರಮವು ಪ್ರಾಥಮಿಕವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಯನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ಇತರ ಕಾರಣಗಳ ನಡುವೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಉತ್ತೇಜಿತವಾಗಿರುವ ಹಣದುಬ್ಬರದಲ್ಲಿ ಅಭೂತಪೂರ್ವ ಏರಿಕೆಯ ನಡುವೆ
ದೇಶೀಯ ಮಾರುಕಟ್ಟೆಗಳಲ್ಲಿ ಸರಕುಗಳ ಬೆಲೆಗಳನ್ನು ಕಡಿಮೆ ಮಾಡಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ.
ಕೇಳುವವರೇ ಇಲ್ಲ ಕೋವ್ಯಾಕ್ಸಿನ್; 50 ಮಿಲಿಯನ್ ಕೋವ್ಯಾಕ್ಸಿನ್ ನಿಷ್ಕ್ರೀಯತೆಗೆ ತಯಾರಿ!
"ಸಕ್ಕರೆ ರಫ್ತಿನಲ್ಲಿ ಅಭೂತಪೂರ್ವ ಬೆಳವಣಿಗೆ ಮತ್ತು ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಕಾಯ್ದುಕೊಳ್ಳುವ ಅಗತ್ಯತೆ ಮತ್ತು ಸಕ್ಕರೆ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು
ದೇಶದ ಸಾಮಾನ್ಯ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ಅಗತ್ಯವನ್ನು ಪರಿಗಣಿಸಿ, ಸರ್ಕಾರವು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಇತ್ತೀಚಿನ ನಿರ್ಧಾರವು ಸಕ್ಕರೆಯ ದಾಖಲೆಯ ರಫ್ತುಗಳ ಹಿನ್ನೆಲೆಯಲ್ಲಿ ಬರುತ್ತದೆ ಎಂಬುದನ್ನು ಗಮನಿಸಬೇಕು.
2017-18, 2018-19 ಮತ್ತು 2019-20 ರ ಸಕ್ಕರೆ ಋತುಗಳಲ್ಲಿ ಕೇವಲ 6.2 LMT, 38 LMT ಮತ್ತು 59.60 LMT ಸಕ್ಕರೆ ರಫ್ತು ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಆದಾಗ್ಯೂ, 2020-21 ರ ಸಕ್ಕರೆ ಋತುವಿನಲ್ಲಿ 60 LMT ಗುರಿಯ ವಿರುದ್ಧ ಸುಮಾರು 70 LMT ರಫ್ತು ಮಾಡಲಾಗಿದೆ.
ಈ ಬಗ್ಗೆ ಸರ್ಕಾರ ತನ್ನ ಕಳವಳ ವ್ಯಕ್ತಪಡಿಸಿದೆ ಮತ್ತು ಸಕ್ಕರೆ ರಫ್ತು ನಿರ್ಬಂಧಿಸುವ ಕ್ರಮವು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡುವ ಗುರಿಯನ್ನು ಹೊಂದಿದೆ ಎಂದು ಹೇಳಿತ್ತು.
Share your comments