1. ಸುದ್ದಿಗಳು

ಕೇಳುವವರೇ ಇಲ್ಲ ಕೋವ್ಯಾಕ್ಸಿನ್‌; 50 ಮಿಲಿಯನ್‌ ಕೋವ್ಯಾಕ್ಸಿನ್‌ ನಿಷ್ಕ್ರೀಯತೆಗೆ ತಯಾರಿ!

Hitesh
Hitesh
50 million doses of Covaxin set to expire soon!

ಕೊರೊನಾ ಕಾಲದಲ್ಲಿ ಹೆಚ್ಚು ಬೇಡಿಕೆ ಗಳಿಸಿದ್ದ ಮತ್ತು ತುರ್ತು ಔಷಧಿ ಎಂದೇ ಪರಿಗಣಿಸಲ್ಪಟ್ಟಿದ್ದ ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ ಕಾಲಾಂತರದಲ್ಲಿ ಬೇಡಿಕೆ ಕಳೆದುಕೊಂಡಿದೆ.

ರಾಜ್ಯದ ಹಲವು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊರೊನಾ ಸೋಂಕು ಹೆಚ್ಚಾಗಿದ್ದ ಸಂದರ್ಭದಲ್ಲಿ ಕೋವಿಡ್‌ ಲಸಿಕೆಗಳಿಗೆ ಬಹಳಷ್ಟು ಬೇಡಿಕೆ ಇತ್ತು. ಸದ್ಯ ಬಹುತೇಕ ಜನ ಕೋವಿಡ್‌ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆಯನ್ನು ಪಡೆದಿದ್ದಾರೆ.  

ವರದಿಯ ಪ್ರಕಾರ ಲಸಿಕೆಯ ಲಕ್ಷಾಂತರ ಡೋಸ್‌ಗಳ ಅವಧಿಯು ಮುಂದಿನ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. 

ಹೀಗಾಗಿ ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಯ ಅಂದಾಜು 50 ಮಿಲಿಯನ್ ಡೋಸ್‌ಗಳನ್ನು ನಿಷ್ಕ್ರೀಯಗೊಳಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಕೋವಾಕ್ಸಿನ್  ಬೇಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಈ ಲಸಿಕೆಯನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ. 

ಇದನ್ನೂ ಓದಿರಿ: ನವೆಂಬರ್‌ 7ರಿಂದ ಒಂದು ತಿಂಗಳು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಅಭಿಯಾನ: ಪ್ರಭು ಚವ್ಹಾಣ್‌

ಅಲ್ಲದೇ ಕಂಪನಿಯು ಪ್ರಸಕ್ತ ಸಾಲಿನಲ್ಲಿ ಲಸಿಕೆ ಉತ್ಪಾದನೆಯನ್ನು ಸಹ ಸ್ಥಗಿತ ಮಾಡಿದೆ.

ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಹೀಗಾಗಿ, ಬೂಸ್ಟರ್ ಡೋಸ್‌ಗಳನ್ನು ಉತ್ಪಾದನೆ ಹೆಚ್ಚಿಸಲು ಸಾಧ್ಯವಿಲ್ಲ.

ದೇಶದ ಶೇ 98 ಪ್ರತಿಶತ ವಯಸ್ಕ ಜನಸಂಖ್ಯೆಯಲ್ಲಿ ಇರುವವರು ಕನಿಷ್ಠ ಒಂದು ಡೋಸ್ ಕೋವಿಡ್ -19 ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

92 ಪ್ರತಿಶತದಷ್ಟು ಸಂಪೂರ್ಣ ಲಸಿಕೆಯನ್ನು ಪಡೆದಿದ್ದಾರೆ ಎಂದು ET ಸರ್ಕಾರಿ ಡೇಟಾವನ್ನು ಉಲ್ಲೇಖಿಸಲಾಗಿದೆ.

ಬೆಂಗಳೂರು “ಕೃಷಿ ಮೇಳ” ಹಲವು ದಾಖಲೆ ಸೃಷ್ಟಿ ; ಮೇಳಕ್ಕೆ 17.35 ಲಕ್ಷ ಜನ ಭೇಟಿ! 

ಈ  ಹಿಂದಿನ ವರದಿ ಅನ್ವಯ ಹೊಸ ಕೋವಿಡ್ -19 ಲಸಿಕೆಗಳನ್ನು ರಾಜ್ಯಗಳೊಂದಿಗೆ ಬಳಸದೆ ಇರುವ ಕಾರಣದಿಂದ ಸರ್ಕಾರವು ನಿಲ್ಲಿಸಿದೆ ಎಂದು ಹೇಳಿದೆ.

ಅದರ ಹೊರತಾಗಿ, ET ವರದಿಯು, ಭಾರತದ ಮೊದಲ ಎಂಆರ್‌ಎನ್‌ಎ ಲಸಿಕೆಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಹೇಳಿದೆ.

ರೈತರ ಖಾತೆಗೆ ನೇರವಾಗಿ ಡೀಸೆಲ್‌ ಸಬ್ಸಿಡಿ ಪಾವತಿ; ದಾಖಲೆಯೂ ಬೇಕಿಲ್ಲ: ಬಿ.ಸಿ ಪಾಟೀಲ್  

Covaxin

ಕೋವಾಕ್ಸಿನ್ ಸೇರಿದಂತೆ 219.71 ಕೋಟಿ ಡೋಸ್ COVID-19 ಲಸಿಕೆಗಳನ್ನು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ನೀಡಲಾಗಿದೆ.

ಜಾಗತಿಕವಾಗಿ ಕೊರೊನಾ ಸೋಂಕು ಹಬ್ಬುವ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ.

ಅಲ್ಲದೇ ಜನರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿರುವುದರಿಂದ ಸೋಂಕಿನಿಂದ ಉಂಟಾಗಬಹುದಾದ ತೀವ್ರತೆಗೆ ಕಡಿವಾಣ ಬಿದ್ದಿದೆ.

ಈ ಎಲ್ಲ ಕಾರಣಗಳಿಂದ ಮುನ್ನೆಚ್ಚರಿಕೆ ಅಥವಾ ಮೂರನೇ ಕೋವಿಡ್‌ ಡೋಸ್‌ ಅಭಿಯಾನ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. 

ಇನ್ನು ವಿದೇಶಿ ರಾಷ್ಟ್ರಗಳಿಗೆ ಕೋವಾಕ್ಸಿನ್ ರಫ್ತು ಮಾಡುವುದು ಸಹ ಇಳಿಕೆ ಆಗಿದೆ.   

13.5 ಲಕ್ಷ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಅಸ್ತು!  

Published On: 07 November 2022, 02:05 PM English Summary: 50 million doses of Covaxin set to expire soon!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.