1. ಸುದ್ದಿಗಳು

ಉಚಿತ ಕಂಪ್ಯೂಟರ್ ತರಬೇತಿ ಪಡೆಯಲು ಅರ್ಜಿ ಆಹ್ವಾನ

Computer training

ಬೆಂಗಳೂರು ಮಲ್ಲೇಶ್ವರದಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕ–ಯುವತಿಯರಿಗೆ ಮೂರು ತಿಂಗಳ ಉಚಿತ ಕಂಪ್ಯೂಟರ್ ಕಲಿಕಾ ತರಬೇತಿ ಶಿಕ್ಷಣವನ್ನು ಹಮ್ಮಿಕೊಂಡಿದೆ.

ಕನಿಷ್ಠ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾಗಿರಬೇಕು. 18ರಿಂದ 27 ವರ್ಷದೊಳಗಿನವರಿಗೆ ಆದ್ಯತೆ ನೀಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲಿದೆ. ಎಂದು ಸಂಸ್ಥೆಯ ನಿರ್ದೇಶಕ ಎಂ. ವೆಂಕಟೇಶ ಶೇಷಾದ್ರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ  ದೂ.: 080 23440036, ಮೊಬೈಲ್ ನಂಬರ್ 94485 38107ಗೆ ಸಂಪರ್ಕಿಸಬಹುದು.

ಯುವ ಪರಿವರ್ತಕರ ಹುದ್ದೆಗೆ ಅರ್ಜಿ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸ್ಪಂದನ ಕೇಂದ್ರದ ವತಿಯಿಂದ ನವಲಗುಂದ, ಕುಂದಗೋಳ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲ್ಲೂಕಿನಲ್ಲಿ ಖಾಲಿ ಇರುವ ಯುವ ಪರಿವರ್ತಕರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಪದವಿ ಪಾಸಾಗಿರಬೇಕು. 21ರಿಂದ 35 ವರ್ಷದೊಳಗಿನವರಾಗಿರಬೇಕು. ಸ್ಪಷ್ಟವಾಗಿ ಕನ್ನಡ ಮಾತನಾಡಬೇಕು. ಸಮುದಾಯದಲ್ಲಿ ಕೆಲಸ ಮಾಡಿದವರನ್ನು ಅಪೇಕ್ಷಿಸಲಾಗಿದೆ. ಆಯಾ ತಾಲ್ಲೂಕುಗಳ ಅಭ್ಯರ್ಥಿಗಳಿಗೆ ಆದ್ಯತೆ. ಅಭ್ಯರ್ಥಿಗಳು ಸ್ವವಿವರಗಳೊಂದಿಗೆ ಅರ್ಜಿಯನ್ನು ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿರುವ ಕ್ರೀಡಾ ಇಲಾಖೆಗೆ ಮಾರ್ಚ್ 23ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ ಮೊ: 94482 99673/ 63644 28497

ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ

ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ‘ಕುಡಿತದ ಕೆಡುಕು’ ಎಂಬ ವಿಷಯದಲ್ಲಿ 19ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಶಶಿಕಾಂತ್ ಜೈನ್ ತಿಳಿಸಿದ್ದಾರೆ.

20x14 ಸೆಂ.ಮೀ ಗಾತ್ರದ ಡ್ರಾಯಿಂಗ್ ಶೀಟ್, ಸ್ಪರ್ಧಾ ಕಾರ್ಡ್ ಅಥವಾ ಅಂಚೆ ಕಾರ್ಡ್ ಮೂಲಕ ಚಿತ್ರ ಬಿಡಿಸಬಹುದು. ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗ ಎಂಬ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಚಿತ್ರಗಳನ್ನು ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ 2022ರ ಮಾರ್ಚ್ 31ರೊಳಗೆ ಕಳುಹಿಸಲು ಕೋರಲಾಗಿದೆ. ವಿಳಾಸ: ನಿರ್ದೇಶಕರು, ಅಂಚೆ-ಕುಂಚ ವಿಭಾಗ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ, ಧರ್ಮಸ್ಥಳ – 574216.

Published On: 17 March 2021, 09:10 AM English Summary: Application invitation for free computer training

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.