1. ಸುದ್ದಿಗಳು

ಭಾರತೀಯ ಮೂಲದ ಅಜಯ್ ಬಂಗಾ ವಿಶ್ವಬ್ಯಾಂಕ್‌ ಅಧ್ಯಕ್ಷ!

Hitesh
Hitesh
Ajay Banga of Indian origin is the president of the World Bank!

ವಿಶ್ವಬ್ಯಾಂಕ್‌ನ 25 ಸದಸ್ಯರ ಕಾರ್ಯಕಾರಿ ಸಮಿತಿಯು ಬುಧವಾರ ಭಾರತೀಯ ಮೂಲದ ಅಮೆರಿಕದ ಅಜಯ್ ಬಂಗಾ ಅವರನ್ನು ವಿಶ್ವಬ್ಯಾಂಕನ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರು ಇದೇ ವರ್ಷ ಜೂನ್‌ 2ರಿಂದ ಮುಂದಿನ ಐದು ವರ್ಷಗಳ ಅವಧಿಗೆ  ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಶ್ವ ಯುದ್ಧ-2ರ ಕೊನೆಯಲ್ಲಿ ಸ್ಥಾಪನೆಯಾದಾಗಿನಿಂದ ವಿಶ್ವಬ್ಯಾಂಕನ ನೇತೃತ್ವವನ್ನು  ಅಮೆರಿಕ ವಹಿಸಿಕೊಂಡಿದೆ.

ಆದರೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯು ಯುರೋಪಿಯನ್ನರ ನೇತೃತ್ವದಲ್ಲಿದೆ. 

ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಬಂಗಾ, ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ

ಬಿಎ ಮತ್ತು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ-ಎ) ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಬಿಜಿಪಿ ಪದವಿ ಪಡೆದಿದ್ದಾರೆ.

2016ರಲ್ಲಿ ಭಾರತ ಸರ್ಕಾರವು ಅವರ ಸೇವೆಯನ್ನು ಗುರುತಿಸಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಅಜಯ್ ಬಂಗಾ ಅವರು ನೆಸ್ಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಮಾರಾಟ, ಮಾರ್ಕೆಟಿಂಗ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದರು.

ನಂತರ ಅವರು ಎರಡು ವರ್ಷಗಳ ಕಾಲ ಪೆಪ್ಸಿಕೋದಲ್ಲಿ ಕೆಲಸ  ಮಾಡಿದರು.

ಆ ಅವಧಿಯಲ್ಲಿ ಅವರು ಭಾರತದಲ್ಲಿ ಅದರ ಫಾಸ್ಟ್ ಫುಡ್ ಫ್ರಾಂಚೈಸಿಗಳನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

 ಅಜಯ್ ಬಂಗಾ ಅವರನ್ನು ಶ್ಲಾಘಿಸಿದ ಯುಎಸ್ ಅಧ್ಯಕ್ಷ ಬಿಡೆನ್

ಬಂಗಾ ಅವರು “ಇತಿಹಾಸದ ಈ ನಿರ್ಣಾಯಕ ಕ್ಷಣದಲ್ಲಿ ವಿಶ್ವ ಬ್ಯಾಂಕ್ ಅನ್ನು ಮುನ್ನಡೆಸಲು ಅನನ್ಯವಾಗಿ ಸಿದ್ಧರಾಗಿದ್ದಾರೆ” ಎಂದು ಫೆಬ್ರವರಿಯಲ್ಲಿ ವಿಶ್ವಬ್ಯಾಂಕ್‌ನ

ಉನ್ನತ ಹುದ್ದೆಗೆ ಅವರನ್ನು ನಾಮನಿರ್ದೇಶನ ಮಾಡಿದ ಯುಎಸ್ ಅಧ್ಯಕ್ಷ ಬಿಡೆನ್ ಹೇಳಿದರು.

“ ಬಂಗಾ ಅವರು ಸತತ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಯಶಸ್ವಿ, ಜಾಗತಿಕ ಸಂಸ್ಥೆಗಳನ್ನು ನಿರ್ಮಿಸಲು ಮತ್ತು ನಿರ್ವಹಿಸುತ್ತಿದ್ದಾರೆ.

ಅದು ವೈವಿಧ್ಯಮಯ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿದೆ” ಎಂದಿದ್ದಾರೆ. 

ಅಜಯ್ ಬಂಗಾ 2021ರಲ್ಲಿ ಜನರಲ್ ಅಟ್ಲಾಂಟಿಕ್‌ನ ಹವಾಮಾನ ಕೇಂದ್ರಿತ ನಿಧಿ ಬಿಯಾಂಡ್‌ನೆಟ್‌ಝೀರೋಗೆ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.

ಎಲ್ ಸಾಲ್ವಡಾರ್‌ನಲ್ಲಿ ಅನನುಕೂಲಕರ ಜನಸಂಖ್ಯೆಯ ನಡುವೆ ಆರ್ಥಿಕ ಅವಕಾಶವನ್ನು ಸುಧಾರಿಸಲು ಕೆಲಸ ಮಾಡುವ ಖಾಸಗಿ ಉದ್ಯಮಗಳ

ಒಕ್ಕೂಟವಾದ ಸೆಂಟ್ರಲ್ ಅಮೆರಿಕಾ ಪಾಲುದಾರಿಕೆಯ ಸಹ-ಅಧ್ಯಕ್ಷರಾಗಿಯೂ ಬಂಗಾ ಅವರು ಕೆಲಸ ಮಾಡಿದ್ದಾರೆ. 

ಚಿತ್ರಕೃಪೆ: Allevents.in

Published On: 04 May 2023, 03:27 PM English Summary: Ajay Banga of Indian origin is the president of the World Bank!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.