ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಹೆಚ್ಚಿಸಲಿದ್ದು, ನೌಕರರ ಡಿಎ ಶೇಕಡ 42ರಿಂದ ಶೇ.50ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಹೆಚ್ಚಿಸಲಿದ್ದು, ನೌಕರರು ಪಡೆಯುವ ಡಿಎ ಶೇ.42ರಿಂದ ಶೇ.50ಕ್ಕೆ ಏರಿಕೆಯಾಗಲಿದೆ. ಈ ತುಟ್ಟಿಭತ್ಯೆಯನ್ನು ಸರ್ಕಾರ ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸುತ್ತದೆ.
ಮಾರ್ಚ್ನಲ್ಲಿಯೇ ಸರ್ಕಾರ ನೌಕರರ ಡಿಎಯನ್ನು ಶೇ 4ರಷ್ಟು ಹೆಚ್ಚಿಸಿತ್ತು. ಈಗ ಮತ್ತೆ ಸರ್ಕಾರಿ ನೌಕರರ ಡಿಎಯಲ್ಲಿ ಹೆಚ್ಚಳವಾಗಲಿದೆ.
ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳ :
ಮಾರ್ಚನಲ್ಲಿ ಕೇಂದ್ರ ನೌಕರರ ಡಿಎಯನ್ನು ಸರ್ಕಾರವು ಶೇಕಡಾ 4 ರಷ್ಟು ಹೆಚ್ಚಿಸಿದೆ. ಈ ಹೆಚ್ಚಳದೊಂದಿಗೆ ತುಟ್ಟಿ ಭತ್ಯೆಯು ಶೇಕಡಾ 42 ಕ್ಕೆ ಏರಿದೆ. ಈ ಹೆಚ್ಚಳವು ಜನವರಿ 2023 ರ ವೇತನಕ್ಕೆ ಅನ್ವಯವಾಗುವಂತೆ ಜಾರಿಗೆ ಬಂದಿದೆ.
ಈಗ ಮುಂದಿನ ತುಟ್ಟಿಭತ್ಯೆಯನ್ನು ಜುಲೈ 2023 ರಿಂದ ಘೋಷಿಸಲಾಗುವುದು. ಈ ಬಾರಿ ಕೂಡಾ ಡಿಎ ಶೇ.4 ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ವೇತನದಲ್ಲಿ ಆಗುವುದು ಬಂಪರ್ ಹೆಚ್ಚಳ :
ಹಣದುಬ್ಬರ ಏರಿಕೆಯ ನಡುವೆಯೂ ಉದ್ಯೋಗಿಗಳ ಭತ್ಯೆಯಲ್ಲಿ ಉತ್ತಮ ಹೆಚ್ಚಳವಾಗುವುದು ಖಚಿತ. ತುಟ್ಟಿಭತ್ಯೆಯಲ್ಲಿನ ಹೆಚ್ಚಳ ದಿಂದ ಮುಂದಿನ ದಿನಗಳಲ್ಲಿ ನೌಕರರ ವೇತನ ಕೂಡಾ ಹೆಚ್ಚಳವಾಗುವುದು.
ತುಟ್ಟಿ ಭತ್ಯೆಯ ನಿಯಮವೆಂದರೆ 2016 ರಲ್ಲಿ ಸರ್ಕಾರ 7 ನೇ ವೇತನ ಆಯೋಗವನ್ನು ಜಾರಿಗೆ ತಂದ ಸಮಯದಲ್ಲಿ ತುಟ್ಟಿಭತ್ಯೆ ಶೂನ್ಯವಾಗಿತ್ತು.
ನಿಯಮಗಳ ಪ್ರಕಾರ, ತುಟ್ಟಿಭತ್ಯೆ ಶೇಕಡಾ 50 ತಲುಪಿದ ತಕ್ಷಣ, ಅದನ್ನು ಶೂನ್ಯಗೊಳಿಸಲಾಗುತ್ತದೆ. ಇದಾದ ನಂತರ ಶೇಕಡಾ 50 ರ ಪ್ರಕಾರ, ನೌಕರರು ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.
ವೇತನದಲ್ಲಿ 9000 ರೂ ಹೆಚ್ಚಳ :
ಉದ್ಯೋಗಿಯ ಮೂಲ ವೇತನವು 18000 ರೂ ಆಗಿದ್ದರೆ, 50% ಡಿಎಯ ಪ್ರಕಾರ 9000 ರೂ.ಗಳನ್ನು ಪಡೆಯುತ್ತಾರೆ. ಡಿಎ 50% ಆದ ನಂತರ, ಈ 9000 ರೂ.ಗಳನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಮತ್ತೆ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ.
Share your comments