1. ಸುದ್ದಿಗಳು

ಅಸ್ಸಾಂನಲ್ಲಿ ಪ್ರವಾಹ-ಐದು ಜನರ ಸಾವು (five more dead): ಜುಲೈ 29ರವರೆಗೆ ಭಾರಿ ಮಳೆ ಸಾಧ್ಯತೆ

ಅಸ್ಸಾಂ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದರಿಂದ ಅಸ್ಸಾಂ ರಾಜ್ಯ ಪ್ರವಾಹದ (flood) ಭೀಕರತೆಗೆ ನಲುಗಿ ಹೋಗಿದೆ. ಲಕ್ಷಾಂತರ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಪ್ರವಾಹದ ಭೀಕರತೆಗೆ ಅಸ್ಸಾಂ (Assam) ರಾಜ್ಯ ತತ್ತರಿಸಿ ಹೋಗಿದೆ.

ಪ್ರವಾಹದಿಂದಾಗಿ ಭಾನುವಾರ ಐಧು ಜನರು ಮೃತಪಟ್ಟಿದ್ದಾರೆ. ಇದರಿಂದಾಗಿ ಈ ವರ್ಷ ಅಸ್ಸಾಂನಲ್ಲಿ ಪ್ರಕೃತಿ ವಿಕೋಪದಿಂದ ಸತ್ತವರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಒಟ್ಟು 23 ಜಿಲ್ಲೆಗಳಲ್ಲಿ ಸುಮಾರು 25 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.

ಗೋಲಾಪರ (4,7 ಲಕ್ಷ(, ಬಾರಪೇಟಾ (3.95 ಲಕ್ಷ), ಮಾರಿಗಾಂವನಲ್ಲಿ (3.33 ಲಕ್ಷ) ಜನ ಪ್ರವಾಹದ ಭೀಕರತೆಗೆ ನಲುಗಿ ಹೋಗದ್ದಾರೆ. ಎಸ್.ಡಿ.ಆರ್.ಎಪ್, ಜಿಲ್ಲಾಡಳಿತ ಹಾಗೂ ಸ್ಛಳಿಯಾಡಳಿತಗಳ ನೆರವಿನಿಂದ ಭಾನುವಾರ 188 ಜನರನ್ನು ರಕ್ಷಿಸಲಾಗಿದೆ. , ಸುಮಾರು 2,543 ಹಳ್ಳಿಗಳು ಜಲಾವೃತವಾಗಿವೆ ಮತ್ತು 1,22,573.16 ಹೆಕ್ಟೇರ್ ಬೆಳೆ ಪ್ರದೇಶಗಳಿಗೆ ಹಾನಿಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಜುಲೈ 29ರವರೆಗೆ ಹಿಮಾಚಲ ಪ್ರದೇಶ, ಉತ್ತರಕಾಂಡ, ಅಸ್ಸಾಂ, ಮೇಘಾಲಯದಲ್ಲಿ ವ್ಯಾಪಕ ಮಳೆ:

ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಭಾರೀ ಮಳೆಯಾಗುವ (heavy rain) ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಾರ್ಖಂಡ್, ಒಡಿಶಾ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಡ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಕರಾವಳಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಜುಲೈ 28 ರ ಮಂಗಳವಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಡ, ಬಿಹಾರ, ಜಾರ್ಖಂಡ್, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತೆಲಂಗಾಣ ಮತ್ತು ಕೇರಳ,ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಕರಾವಳಿ ಆಂಧ್ರಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಬಹುದು.  ಹಿಮಾಚಲ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿರುವುದು ಯೆಲ್ಲೋ ಅಲರ್ಟ್ (yellow alert) ಘೋಷಿಸಲಾಗಿದೆ.

.ಬಿಹಾರ ಮತ್ತು ಅಸ್ಸಾಂ ಈಗಾಗಲೇ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಇದು ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ.

Published On: 27 July 2020, 04:55 PM English Summary: 5 more die as flood situation in Assam remains critical (1)

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.