1. ತೋಟಗಾರಿಕೆ

ಸಾವಯವ ಪೌಷ್ಟಿಕ ಕೈತೋಟ ಕುರಿತು ತರಬೇತಿ

KJ Staff
KJ Staff
ಸಾಂದರ್ಭಿಕ ಚಿತ್ರ

ದಾವಣಗೆರೆ ನಗರದಲ್ಲಿರುವ ಭಾರತೀಯ ಕೃಷಿ ಸಂಸೋಧನಾ ಸಂಸ್ಥೆಯ (ಐಸಿಎಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಯಿಂದ ಜೂನ್ 3ರಂದು ಗುರುವಾರ ಮಧ್ಯಹ್ನ 12 ಗಂಟೆಗೆ ‘ಸಾವಯವ ಪೌಷ್ಟಿಕ ಕೈತೋಟ’ ಕುರಿತು ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಭಾರತ ಅಮೃತ ಮಹೋತ್ಸವದ ಅಂಗವಾಗಿ ಈ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞರಾಗಿರುವ ಬಸವನಗೌಡ ಎಂ.ಜಿ. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಆಸಕ್ತರಿಗೆ ಸಾವಯವ ಕೈತೋಟದ ಕುರಿತು ಅಗತ್ಯ ಮಾಹಿತಿ ನೀಡಲಿದ್ದಾರೆ. ಗೂಗಲ್ ಮೀಟ್ ವೇದಿಕೆಯಲ್ಲಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತರು https://meet.google.com/qkp-hggd-aey ಲಿಂಕ್ ಮೂಲಕ 12 ಗಂಟೆಗೆ ಸರಿಯಾಗಿ ಕಾರ್ಯಾಗಾರದಲ್ಲಿ ಭಾಗವಹಿಸಬೇಕು.

ಇದು ವಿಶೇಷವಾಗಿ ಕೈತೋಟಕ್ಕೆ ಸಂಬAಧಿಸಿದ ಕಾರ್ಯಾಗಾರವಾಗಿದ್ದು, ಪ್ರಮುಖವಾಗಿ ಪೌಷ್ಟಿಕ ಕೈತೋಟ ಬೆಳೆಸುವುದು ಮತ್ತು ಅದರ ಉಪಯೋಗಗಳು, ಕೈತೋಟದಲ್ಲಿ ಬೆಳೆಯಬಹುದಾದ ವಿವಿಧ ಬೆಳೆಗಳು, ಅವುಗಳ ಆರೈಕೆ, ಬೆಳೆಗಳನ್ನು ನಾಟಿ ಮಾಡುವ ವಿಧಾನ, ಸಾವಯವ ಕೃಷಿ ಪದ್ಧತಿ ಅನುಸರಿಸುವ ಮೂಲಕ ಕೈತೋಟಗಳನ್ನು ಬೆಳೆಸುವ ವಿಧಾನ, ರಾಸಾಯನಿಕ ಹಾಗೂ ಪೆಸ್ಟಿಸೈಡ್‌ಗಳನ್ನು ಬಳಸದೆಯೇ ಬೆಳೆಗಳನ್ನು ಬೆಳೆಯುವ ಬಗೆ, ಸಾವಯವ ಪದ್ಧತಿ ಮೂಲಕ ಕೀಟಗಳ ನಾಶ ಮತ್ತು ರೋಗಗಳ ನಿಯಂತ್ರಣ ಮಾಡುವ ವಿಧಾನ, ತಾರಸಿ ತೋಟ ಬೆಳೆಸುವ ಬಗೆ, ಕುಂಡಗಳ ಬೇಸಾಯ ಪದ್ಧತಿ ಮತ್ತು ಕುಂಡಗಳ ಮರು ನಾಟಿ ಸೇರಿ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ತೋಟಗಾರಿಕೆ ವಿಷಯ ತಜ್ಞರಾಗಿರುವ ಬಸವನಗೌಡ ಎಂ.ಜಿ. ಅವರು ತಿಳಿಸಿದ್ದಾರೆ.

ಇದು ಕೈತೋಟಕ್ಕೆ ಸಂಬAಧಿಸಿದ ತರಬೇತಿಯಾಗಿರುವ ಕಾರಣ ಗೃಹಿಣಿಯರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಎಲ್ಲರಿಗಿಂತಲೂ ಹೆಚ್ಚು ಕಾಳಜಿ ವಹಿಸುವ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು, ಸಾವಯವ ಪದ್ಧತಿಯಲ್ಲಿ ಕೈತೋಟ ಅಭಿವೃದ್ಧಿಪಡಿಸುವ ವಿಧಾನವನ್ನು ತಿಳಿದುಕೊಳ್ಳಬೇಕು. ಆ ಮೂಲಕ ತಮ್ಮ ಕುಟುಂಬಕ್ಕಾಗಿ ರಾಸಾಯನಿಕ, ವಿಷ ಮುಕ್ತ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯಬೇಕು.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ಪ್ರಸೆಂಟ್ ನೌ ಮೇಲೆ ಕ್ಲಿಕ್ ಮಾಡದೆ, ಆಸ್ಕ್ ಟು ಜಾಯಿನ್ ಮೇಲೆ ಒತ್ತಬೇಕು.

Published On: 02 June 2021, 09:26 PM English Summary: Training on Organic Nutrition Garden

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.