1. ತೋಟಗಾರಿಕೆ

ದಾಳಿಂಬೆಯಲ್ಲಿ ದುಂಡಾಣು ಅಂಗಮಾರಿ ರೋಗ ವೈಜ್ಞಾನಿಕವಾಗಿ ನಿಯಂತ್ರಣ ಮಾಡುವುದು ಹೇಗೆ?

ಎಲೆಗಳ ಮೇಲೆ ಹಳದಿ ಉಂಗುರದ ಆವೃತವಾದ ಕಂದು / ಕಪ್ಪು ಚುಕ್ಕೆಗಳು ಕಂಡು ಬಂದು ಎಲೆಗಳು ಹಳದಿ ವರ್ಣಕ್ಕೆ ತಿರುಗಿ ಉದುರುತ್ತವೆ . ರೋಗವು ಕಾಂಡಗಳಿಗೂ , ಮತ್ತು ರೆಂಬೆಗಳಿಗೂ ಹರಡಿ ಒಣಗುವಂತೆ ಮಾಡುತ್ತದೆ . ಹೂಗಳ ಮೇಲೆ ರೋಗ ಬಾಧೆ ಕಂಡು ಬಂದರೆ ಅವು ಉದುರುತ್ತವೆ .

ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬಂದು , ವೃದ್ಧಿಯಾಗಿ ಅವುಗಳ ಮೇಲ್ಮೀಯೆಲ್ಲಾ ಆವರಿಸಿ ಹಣ್ಣುಗಳು ಸೀಳುವಂತೆ ಹಾಗೂ ಕೊಳೆಯುವಂತೆ ಮಾಡುತ್ತವೆ , ಕೀಟ ಬಾಧೆ ಹಾಗೂ ಉಷ್ಣ ಮಿಶ್ರಿತ ತೇವಾಂಶದ ವಾತಾವರಣವಿದ್ದಲ್ಲಿ ರೋಗ ತೀವ್ರವಾಗಿ ಹರಡಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ .

ದಾಳಿಂಬೆ ದುಂಡಾಣು ಅಂಗಮಾರಿ ರೋಗದ ಸಮಗ್ರ ನಿರ್ವಹಣೆಗಾಗಿ ಅನುಸರಿಸಬೇಕಾದ ಕ್ರಮಗಳು

1 ) ನಾಟಿ ಪೂರ್ವದಲ್ಲಿ ಅನುಸರಿಸಬೇಕಾದ ಕ್ರಮಗಳು : - ರೋಗರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು , • ಶಿಫಾರಸ್ಸು ಮಾಡಿದ ಪೋಷಕಾಂಶಗಳ ಜೊತೆಗೆ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ರೋಗದ ತೀವ್ರತೆಯನ್ನು ಕಡಿಮೆಗೊಳಿಸಬಹುದು .

 2 ) ಚಾಟನಿ ( ಸವರುವ ) ಪೂರ್ವದಲ್ಲಿ ಮತ್ತು ನಂತರದಲ್ಲಿ ಅನುಸರಿಸಬೇಕಾದ ಕ್ರಮಗಳು : • ದಾಳಿಂಬೆ ತೋಟವನ್ನು ಸ್ವಚ್ಚವಾಗಿಡುವುದು , ರೋಗ ಪೀಡಿತ ಎಲೆ , ಕಾಂಡ ಮತ್ತು ಕಾಯಿಗಳನ್ನು ಸಂಗ್ರಹಿಸಿ ಸುಡಬೇಕು . ಇದರಿಂದ ರೋಗದ ಪ್ರಸಾರವನ್ನು ತಡೆಗಟ್ಟಬಹುದು ಚಾಟನಿಯ ( ಸವರುವ ) ಪೂರ್ವದಲ್ಲಿ ರೋಗ ತಗುಲಿದ ಎಲೆಗಳ ಸೋಂಕನ್ನು ಕಡಿಮೆ ಮಾಡಲು ಶೇ .1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸುವುದು . ನಂತರ ಪ್ರತಿ ಲೀಟರ್ ನೀರಿಗೆ 2.0 ರಿಂದ 2.5 ಇತ್ರೆಲ್ ಅನ್ನು ಬೆರೆಸಿ ಸಿಂಪಡಿಸಿ ಎಲೆಗಳನ್ನು ಉದುರಿಸಬೇಕು.

 ಉದುರಿದ ಎಲೆಗಳನ್ನು ಸಂಗ್ರಹಿಸಿ ಸುಟ್ಟು ಹಾಕಬೇಕು ಚಾಟನಿಯ ಕತ್ತರಿಯನ್ನು ಪ್ರತಿ ಲೀಟರ್ ನೀರಿಗೆ 25 ಮಿಲೀ . ಸೋಡಿಯಂ ಹೈಪೋಕ್ಲೋರೈಡ್ ಬೆರೆಸಿದ ದ್ರಾವಣದಲ್ಲಿ ಅದ್ದಿ ಚಾಟನಿ ಮಾಡುವುದರಿಂದ ರೋಗಾಣುಗಳ ಹರಡುವಿಕೆಯನ್ನು ತಡೆಗಟ್ಟಬಹುದು . ಕಳಚಿ ಬಿದ್ದ ಅಳಿದುಳಿದ ಎಲೆಗಳ ಮೇಲೆ ಎಕರೆಗೆ 8 - 10 ಕಿಗ್ರಾಂ . ಬ್ಲೀಚಿಂಗ್ ಪುಡಿಯನ್ನು ಧೂಳೀಕರಿಸಬೇಕು . ಚಾಟನಿಯ ನಂತರ ರೋಗ ತಗುಲಿದ ಗಿಡದ ಕಾಂಡಕ್ಕೆ ಸ್ಟ್ರೆಪ್ಟೋಸೈಕ್ಲಿನ್  ಅಥವಾ  ಸ್ಟ್ರೆಪ್ಟೋಮೈಸಿನ್ ಸಿಟ್ ( 0.5 ಗ್ರಾಂ ) ಅಥವಾ ರೋಗ – ಬ್ರೋಮೋ ಅಥವಾ

ನೈಟ್ರೋನ್ ಅಥವಾ ಡಯೋಲ್ ( ಬ್ಯಾಕ್ಟಿನಾಶಕ್ 0.5 ಗ್ರಾಂ ) ಮತ್ತು ತಾಮ್ರದ ಆಕ್ಸಿಕ್ಲೋರೈಡ್ ( 3.0 ಗ್ರಾಂ ) ಗಳಂತೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಂಡಕ್ಕೆ ಲೇಪಿಸಬೇಕು .

ಲೇಪನಕ್ಕೆ ಅನುಕೂಲವಾಗಲು ಕೆಂಪು ಮಣ್ಣುನ್ನು ಸೇರಿಸಬೇಕು . - ರೋಗದ ತೀವ್ರತೆ ಅಧಿಕವಾಗಿದ್ದಲ್ಲಿ ದಾಳಿಂಬೆ ಬೆಳೆಯನ್ನು ಹಸ್ತ ಬಹಾರ್ ( ಸೆಪ್ಟೆಂಬರ್ ಅಕ್ಟೋಬರ್ ಚಾಟನಿ ಮಾಡುವುದು ) ನಲ್ಲಿ ತೆಗೆದುಕೊಳ್ಳುವುದು ಸೂಕ್ತ . ಜೂನ್ - ಜುಲೈ ತಿಂಗಳಲ್ಲಿ ಚಾಟನಿ ಮಾಡುವ ಬೆಳೆಗೆ ಡಿಸೆಂಬರ್ ನಿಂದ ಮೇ ತಿಂಗಳವರೆಗೆ ವಿಶ್ರಾಂತಿ ಕೊಡುವುದರಿಂದ ರೋಗದ ಬಾಧೆಯನ್ನು ಕಡಿಮೆ ಮಾಡಬಹುದು .

 ರೋಗ ತಗುಲಿದ ಗಿಡಗಳಿಗೆ ರೋಗದ ಪ್ರಾರಂಭಿಕ ಹಂತದಲ್ಲಿ ಹವಾಮಾನ ಹಾಗೂ ರೋಗ ಬಾಧೆಗೆ ಅನುಸಾರವಾಗಿ ಸಿಂಪರಣೆಗಳನ್ನು 10 ದಿನಗಳ ಅಂತರದಲ್ಲಿ ಕೋಷ್ಟಕದಲ್ಲಿ ತಿಳಿಸಿದಂತೆ ಕೈಗೊಳ್ಳುವುದು , • ಪ್ರತಿ ಜೀವನಾಶಕ ( ದುಂಡಾಣು ನಾಶಕ ) ದ ಸಿಂಪರಣೆಯ ನಂತರ ಸತುವಿನ ಸಿಟ್ 1.0 ಗ್ರಾಂ , ಮೆಗ್ನಿಶಿಯಂ ಸಿಟ್ 1.0 ಗ್ರಾಂ ಸುಣ್ಣದ ಸಿಟ್ 1.0 ಗ್ರಾಂ ಹಾಗೂ ಬೋರಾಕ್ಸ್ 1.0 ಗ್ರಾಂ . ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ಸಸ್ಯಗಳಲ್ಲಿ ರೋಗ ನಿರೋಧಕತೆ ಹೆಚ್ಚಿಸಿ , ರೋಗದ ತೀವ್ರತೆಯನ್ನು ಕಡಿಮೆಗೊಳಿಸಬಹುದು . ತಿಳಿಸಿದ ಹತೋಟಿ ಕ್ರಮವನ್ನು ಸಾಮೂಹಿಕವಾಗಿ ಎಲ್ಲಾ ರೈತರು ಅಳವಡಿಸಿದಲ್ಲಿ ಈ ರೋಗದ ನಿರ್ವಹಣೆ ಪರಿಣಾಮಕಾರಿಯಾಗುವುದು

Published On: 06 May 2021, 08:04 PM English Summary: pomegranate cultivation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.