1. ತೋಟಗಾರಿಕೆ

ಬಾಳೆ ಕೃಷಿಗಾಗಿ BANANA PRODUCTION TECHNOLOGY ಎಂಬ ಆ್ಯಪ್

Atmanand M Haigar
Atmanand M Haigar
Banana Cultivation

ಆತ್ಮೀಯ ರೈತ ಭಾಂದವರೆ,ಇತ್ತೀಚಿನ ದಿನಗಳಲ್ಲಿ ಕೃಷಿಯಜೊತೆಗೆ ಪಶು ಸಂಗೋಪನೆ, ತೋಟಗಾರಿಕೆ ಮುಂತಾದವುಗಳನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಪದ್ಧತಿಯತ್ತ ಸಾಗುತ್ತಿದ್ದಾರೆ. ಅದರಲ್ಲೂ ತೋಟಗಾರಿಕೆ ಬೆಳೆಗಳಾದ ಮಾವು, ಬಾಳೆ, ದಾಳಿಂಬೆ ಮುಂತಾದವುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದು, ರೈತರಿಗೆ ಲಾಭ ತರುವುದಲ್ಲದೆ, ಕೃಷಿಕಾರ್ಮಿಕರಿಗೆ ದುಡಿಮೆಯ ಆಸರೆಯಾಗಿವೆ.

ಅದೇ ರೀತಿ ಹಲವಾರು ಸಂಶೋಧನಾ ಕೇಂದ್ರಗಳು ರೈತಾಪಿ ಸಮುದಾಯಕ್ಕೆ ಹಲವಾರು ತಂತ್ರಜ್ಞಾನಗಳನ್ನು ಪರಿಚಯಿಸುವುದರ ಮೂಲಕ ರೈತರು ತಮ್ಮ ಇಳುವರಿಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತವೆ. ಅದೇ ರೀತಿ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ, ತಿರುಚಿರಪಲ್ಲಿಯ ವಿಜ್ಞಾನಿಗಳು C- DAC (Centre for Development Of Advanced Computing ) ಹೈದರಾಬಾದ್ ಅವರ ಸಹಯೋಗಿತ್ವದಲ್ಲಿ ಬಾಳೆಕೃಷಿಗಾಗಿ BANANA PRODUCTION TECHNOLOGY ಎಂಬ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ.

 ಏನಿದೆ ಈ ಆಪ್ ನಲ್ಲಿ?

ಈ ಆ್ಯಪ್ನಲ್ಲಿ ಬಾಳೆ ಬೆಳೆಗೆ ಬೇಕಾದಂತ ವಾತಾವರಣ, ಮಣ್ಣಿನಬಗೆ, ನಾಟಿ ಮಾಡಲು ಬಳಸುವ ಸಸಿಗಳು ಮತ್ತು ಅವುಗಳನಿರ್ವಹಣೆ ಹಾಗೂ ಅಂಗಾಂಶ ಕೃಷಿಯ ಬಗ್ಗೆ ಮಾಹಿತಿ ಸಿಗಲಿದೆ.

ಸಸಿಗಳನ್ನು ನಾಟಿ ಮಾಡುವ ವಿಧಾನಗಳು ಮತ್ತು ವಿವಿಧ ತಳಿಗಳಿಗೆ ಬೇಕಾಗುವ ನಾಟಿಯ ವಿಧಾನ ಮತ್ತು ನಾಟಿ ಮಾಡುವಾಗಿನ ಅಂತರದ (spacing) ಬಗ್ಗೆ ಮಾಹಿತಿ ಸಿಗಲಿದೆ.

ಹಲವಾರು ನೀರಾವರಿ ವಿಧಾನಗಳ ಬಗೆಗಿನ ಮಾಹಿತಿ

ಪೋಷಕಾಂಶಗಳ ಮತ್ತು ಅವುಗಳನ್ನು ಪೂರೈಸುವವಿಧಾನಗಳ ಬಗ್ಗೆ,ಮತ್ತು ವಿವಿಧ ತಳಿಗಳಿಗೆ ಬೇಕಾಗುವ ರಸಗೊಬ್ಬರದ ಪ್ರಮಾಣ ಮತ್ತು ಅದಕ್ಕೆ ತಗಲುವ ವೆಚ್ಚವನ್ನು ಸಹ ತಿಳಿಸಿಕೊಡುತ್ತದೆ.

ಹಲವು ತಳಿಗಳ ಇಳುವರಿಗೆ ತಕ್ಕಂತೆ ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರದ ಪ್ರಮಾಣವನ್ನು ತಿಳಿಸಿಕೊಡುವ ಪಟ್ಟಿಗಳು ಸಹ ಲಭ್ಯವಿವೆ.

ಕಳೆ ಮತ್ತು ಬಾಳೆ ಗೊನೆಯ ನಿರ್ವಹಣೆ, ಅಂತರ ಬೇಸಾಯ ಪದ್ಧತಿಗಳ ಬಗೆಗಿನ ಮಾಹಿತಿ.

ಕುಳೆ (ratoon crop) ಬೆಳೆ ಮತ್ತು ಅದರ ನಿರ್ವಹಣೆಯ ವಿಧಾನ.

ಕೊಯ್ಲಿನ ವಿಧಾನ ಮತ್ತು ಇಳುವರಿಯ ಬಗ್ಗೆ , ಹೀಗೆ ಹಲವಾರು ಬಾಳೆ ಕೃಷಿಯಲ್ಲಿನ ಆಯಾಮಗಳ ಬಗ್ಗೆ ಈ ಒಂದು ಆ್ಯಪ್ ನಲ್ಲಿ ತಿಳಿದುಕೊಳ್ಳಬಹುದು.ಈ ಆ್ಯಪ್ ಆಂಗ್ಲ ಭಾಷೆಯಲ್ಲಿ ಲಭ್ಯವಿದೆ.

ಆ್ಯಪ್ ನ ಲಿಂಕ್: https://play.google.com/store/apps/details?id=com.cdac.production

 ಆ್ಯಪ್ ಅಭಿವೃದ್ಧಿಪಡಿಸಿದವರುಡಾ.ಸುಮಾ (ಡೈರೆಕ್ಟರ್), ಡಾ.ಆರ್. ಸೆಲ್ವರಾಜನ್, ಪ್ರಧಾನವಿಜ್ಞಾನಿ ( ಸಸ್ಯ ರೋಗಶಾಸ್ತ್ರ) , ಡಾ.ಡಿ.ರಾಮಜಯಮ್, ಪ್ರಧಾನ ವಿಜ್ಞಾನಿ ( ತೋಟಗಾರಿಕೆ)

Share your comments

Top Stories

View More

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.