1. ತೋಟಗಾರಿಕೆ

ಇಂದು (ಜುಲೈ 22) ರಾಷ್ಟ್ರೀಯ ಮಾವು ದಿನ; ಬನ್ನಿ ಹಣ್ಣುಗಳ ರಾಜನ ಇತಿಹಾಸ ತಿಳಿಯೋಣ

Basavaraja KG
Basavaraja KG

ಮಾವು ಎಲ್ಲರಿಗೂ ಪ್ರಿಯವಾಗಿರುವ ಹಣ್ಣು ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೀಸನ್ ಶುರುವಾದರೆ ಎಲ್ಲರ ಮನೆಯಲ್ಲೂ ಮಾವಿನ ಮೇಳವೇ ನಡೆಯುತ್ತದೆ. ಕಾರಣವಿಷ್ಟೇ, ಹಣ್ಣುಗಳ ರಾಜ ಎಂದೆನಿಸಿಕೊAಡಿರುವ ಮಾವಿನ ಹಣ್ಣನ್ನು ಇಷ್ಟ ಪಡದೇ ಇರುವ ಜನರೇ ಇಲ್ಲ. ‘ಅಯ್ಯೋ ಮಾವಿನ ಹಣ್ಣಂದ್ರೆ ನನಗೆ ಆಗಲ್ಲ’ ಅನ್ನುವವರು ಕೋಟಿಯಲ್ಲಿ ಒಬ್ಬರು ಮಾತ್ರ. ಕೆಂಪು, ಹಳದಿ ಬಣ್ಣದ ತೊಗಟೆಯನ್ನು ಹೊದ್ದು, ನುಣುಪಾದ ಮೇಲ್ಮೆöÊ ಹೊಂದಿರುವ, ನೋಡಲು ಅಂದವಾಗಿ ಕಾಣುವ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಸಿಹಿಯಾದ ತಿರುಳು ಹೊಂದಿರುವ ಮಾವಿನ ಹಣ್ಣಿನ ರುಚಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಂದು ಹಣ್ಣಿಲ್ಲ ಎಂದರೂ ತಪ್ಪಾಗಲಾರದು.

ಇಂತಹ ರುಚಿಯಾದ ಹಣ್ಣುಗಳ ರಾಜನಿಗೇ ಮೀಸಲಾಗಿರುವ ದಿನ ಇಂದು (ಜುಲೈ 22). ದೇಶದಾದ್ಯಂತ ಜುಲೈ 22ನ್ನು ‘ರಾಷ್ಟ್ರೀಯ ಮಾವು ದಿನ’ವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಮಹತ್ವದ ದಿನದ ಹಿನ್ನೆಲೆಯಲ್ಲಿ ಮಾವು ದಿನ ಆಚರಣೆಯ ವಿಷತೆ, ಈ ದಿನ ಆಚರಿಸುವ ಬಗೆ ಹಾಗೂ ಮಾವಿನ ಹಣ್ಣಿಗೆ ಸಂಬAಧಿಸಿದ ಕೆಲವು ಆಸಕ್ತಿದಾಯಕ ಅಂಶಗಳನ್ನು ‘ಕೃಷಿ ಜಾಗರಣ’ ಈ ಲೇಖನದ ಮೂಲಕ ನಿಮ್ಮ ಮುಂದಿಡುತ್ತಿದೆ.

ಜಗತ್ತಿನಾದ್ಯಂತ ಇರುವ ಹಣ್ಣು ಬೆಳೆಯುವ ರಾಷ್ಟ್ರಗಳಲ್ಲಿ ಮಾವು ಒಂದು ಪ್ರಧಾನ ಬೆಳೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಮಾವು ಬೆಳೆಯುತ್ತಿದ್ದು, ಇಲ್ಲಿ ಇದಕ್ಕೆ ‘ಹಣ್ಣುಗಳ ರಾಜ’ ಎಂದು ಪಟ್ಟಾಭಿಷೇಕ ಕೂಡ ಮಾಡಲಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸಿಗುವ ಮಾವಿನ ಹಣ್ಣುಗಳು ತಮ್ಮ ಅದ್ಭುತ ರುಚಿಯಿಂದಲೇ ಜಗತ್ತಿನಾದ್ಯಂತ ಫಲ ಪ್ರಿಯರ ಅಚ್ಚುಮೆಚ್ಚಿನ ಹಣ್ಣುಗಳಾಗಿ ಗುರುತಿಸಿಕೊಂಡಿವೆ.

ಹಲವು ಅವಶ್ಯಕ ಪೋಷಕಾಂಶಗಳನ್ನು ಒಳಗೊಂಡಿರುವ ಮಾವು, ಹೇರಳವಾದ ಫೈಬರ್ ಹಾಗೂ ಉತ್ಕರ್ಷಣ ನಿರೋಧಕಗಳನ್ನು (ಆ್ಯಂಟಿಯಾಕ್ಸಿಡಟ್ಸ್) ತನ್ನೊಳಗೆ ಅಡಕವಾಗಿಸಿಕೊಂಡಿದೆ. ಇದರೊಂದಿಗೆ, ರೋಗ ನಿರೋಧಕ ಶಕ್ತಿ ವೃದ್ಧಿ, ಹೃದಯದ ಆರೋಗ್ಯ ಸುಧಾರಣೆ, ಪಚನ ಕ್ರಿಯೆಯನ್ನು ಉತ್ತಮಪಡಿಸುವಿಕೆ, ಕಣ್ಣುಗಳ ಆರೋಗ್ಯ, ಕೂದಲು ಮತ್ತು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಮಾವಿನ ಹಣ್ಣು ನೆರವಾಗುತ್ತದೆ. ಇಂತಹ ಹತ್ತು ಹಲವು ಗುಣ ವಿಶೇಷತೆಗಳನ್ನು ಒಳಗೊಂಡಿರುವ ಮಾವು, ಶ್ರೀಮಂತ ಹಾಗೂ ವರ್ಣರಂಜಿತ ಇತಿಹಾಸವನ್ನು ಕೂಡ ಹೊಂದಿದೆ. ವಾಯುವ್ಯ ಈಶಾನ್ಯ ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಭಾಗಗಲ್ಲಿ ಕ್ರಿ.ಪೂ 300ರ ಸಮಯದಲ್ಲಿ ಬೆಳೆಯಲಾದ ಮಾವು, ನಂತರ ಜಗತ್ತಿನಾದ್ಯಂತ ಪ್ರಯಾಣಿಸಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಹಾಗೇ ಭಾರತದಲ್ಲಿ ಈ ಹಣ್ಣಿನ ಬೆಳೆಗೆ ಸುಮಾರು 5000 ವರ್ಷಗಳ ಇತಿಹಾಸವಿದೆ ಎಂದು ನಂಬಲಾಗಿದೆ.

ಹಣ್ಣುಗಳ ಬಣ್ಣ, ಆಕಾರ, ಗಾತ್ರ ಹಾಗೂ ರುಚಿಗೆ ಅನುಗುಣವಾಗಿ ತಳಿಗಳನ್ನು ಗುರುತಿಸಲಾಗಿದ್ದು, ಜಗತ್ತಿನಾದ್ಯಂತ ಇಂತಹ 500ಕ್ಕೂ ಹೆಚ್ಚು ಮಾವಿನ ತಳಿಗಳನ್ನು ಇಂದು ಕಾಣಬಹುದಾಗಿದೆ. ಹಾಗೇ ಮಾವು ಕೂಡ ನಮ್ಮ ಇತಿಹಾಸ ಹಾಗೂ ಸಂಸ್ಕೃತಿಯ ಒಂದು ಭಾಗ ಎಂದು ನಂಬಿರುವ ಕೋಟ್ಯಂತರ ಮಾವು ಪ್ರಿಯರು ನಮ್ಮ ನಡುವೆ ಇದ್ದಾರೆ. ಇಂತಹ ಇತಿಹಾಸವನ್ನು ತಿಳಿಯಲು, ಇತರರಿಗೆ ತಿಳಿಸಲೆಂದೇ ಜುಲೈ 22ರಂದು ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ.

ಮಾವು ದಿನದ ಇತಿಹಾಸ

ಮಾವು ದಿನವನ್ನು ಮೊದಲು ಯಾವ ವರ್ಷ ಆಚರಿಸಲಾಯಿತು ಎಂಬ ಬಗ್ಗೆ ಎಲ್ಲೂ ಸ್ಪಷ್ಟ ಉಲ್ಲೇಖಗಳಿಲ್ಲ. ಆದರೆ, ಮಾವಿನ ಹಣ್ಣನ್ನು ಮೊದಲು ಬೆಳೆದದ್ದು ಮಾತ್ರ ದಕ್ಷಿಣ ಏಷ್ಯಾದಲ್ಲಿ ಎಂದು ಹೇಳಲಾಗುತ್ತದೆ. ಬಳಿಕ ಆಗ್ನೇಯ ಏಷ್ಯಾ ದೇಶಗಳನ್ನು ಪ್ರವೇಶಿಸಿದ ಮಾವು, ಇತರ ದೇಶಗಳಲ್ಲೂ ತನ್ನ ಛಾಪು ಮೂಡಿಸಿತು. ಮೂಲವೊಂದರ ಪ್ರಕಾರ 10ನೇ ಶತಮಾನದ ಆದಿಯಲ್ಲಿ ಪೂರ್ವ ಆಫ್ರಿಕಾದಲ್ಲಿ ಮಾವು ಬೆಳೆಯಲು ಆರಂಭಿಸಲಾಯಿತು. ಮಾವಿಗೆ ‘ಮಂಗೀಫೆರಾ’ ಎಂಬ ವೈಜ್ಞಾನಿಕ ಹೆಸರಿದ್ದು, ಇದು ಸಂಸ್ಕೃತದ ‘ಮಂಜಿರಿ’ ಎಂಬ ಪದದಿಂದ ಬಂದಿದೆ. ಮಂಜಿರಿ ಎಂದರೆ ಸಣ್ಣ ಗೊಂಚಲುಗಳಲ್ಲಿ ಬೆಳೆಯುವ ಹೂವುಗಳು ಎಂಬ ಅರ್ಥವಿದ್ದು, ಮಾವಿನ ಹಣ್ಣಿನ ಬೇರುಗಳು ಭಾರತದಲ್ಲಿವೆ ಎಂಬುದನ್ನು ಇದು ಸೂಚಿಸುತ್ತದೆ. ಅತಿ ಹೆಚ್ಚು ಜನರ ಪ್ರೀತಿಗೆ ಪಾತ್ರವಾಗಿರುವ ಈ ಹಣ್ಣಿಗೆ ಗೌರವ ಸೂಚಿಸುವ ಉದ್ದೇಶದಿಂದ ಭಾರತದಲ್ಲಿ ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ.

ಆಚರಣೆ ಹೇಗಿದೆ?

ಮಾವು ದಿನವನ್ನು ಜಗತ್ತಿನ ವಿವಿಧ ದೇಶಗಳಲ್ಲಿ, ಭಾರತದ ವಿವಿಧ ರಾಜ್ಯಗಳಲ್ಲಿ ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಾವು ಒಂದು ಬಹುಪಯೋಗಿ ಹಣ್ಣಾಗಿದ್ದು, ಇದರಿಂದ ಹಲವಾರು ಖಾದ್ಯಗಳನ್ನು ಮಾಡಬಹುದು. ಗಜರಾತ್‌ನಲ್ಲಿ ‘ಅಮ್ ರಸ’ ಫೇಮಸ್ ಆದರೆ, ಕರ್ನಾಟಕದಲ್ಲಿ ಮಾವಿನ ಹಣ್ಣಿನ ‘ಸೀಕರಣೆ’ ಅತ್ಯಂತ ಜನಪ್ರಿಯ. ಹೀಗೆ ಮಾವಿನ ಹಣ್ಣಿನಲ್ಲಿ ಐಸ್‌ಕ್ರೀಮ್, ಕೇಕ್, ರುಚಿಕರವಾದ ಪಾನೀಯಗಳು, ಸ್ಮೂಥಿಗಳು ಹಾಗೂ ಉಪ್ಪಿನಕಾಯಿ ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಇನ್ನೂ ಕೆಲವರು ಮಾರುಕಟ್ಟೆ ಅಥವಾ ತೋಟದಿಂದ ಬುಟ್ಟಿಗಟ್ಟಲೆ ಹಣ್ಣುಗಳನ್ನು ತಂದು, ಆಪ್ತರು, ಸ್ನೇಹಿತರಿಗೆ ನೀಡುವ ಮೂಲಕ ಮಾವು ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ.

ಮಾವು ಕುರಿತ ಆಸಕ್ತಿದಾಯಕ ಅಂಶಗಳು

* ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಮಾವಿನ ತಳಿಗಳಿವೆ.

* ಜಪಾನಿನಲ್ಲಿ ಬೆಳೆಯುವ ಮಿಯಝಾಕಿ ತಳಿಯ ಮಾವು ಜಗತ್ತಿನ ಅತ್ಯಂತ ದುಬಾರಿ ಮಾವು ಎಂದೆನಿಸಿಕೊಂಡಿದೆ. ಕಳೆದ ವರ್ಷ ಇದರ ಮಾರುಕಟ್ಟೆ ಬೆಲೆ ಒಂದು ಕೆ.ಜಿಗೆ 2.70 ಲಕ್ಷ ರೂ. ಇತ್ತು!

* ಮಾವು ಬಾಂಗ್ಲಾದೇಶದ ರಾಷ್ಟ್ರೀಯ ಮರ. 2019ರಲ್ಲಿ ಅಲ್ಲಿನ ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿತ್ತು.

;

* ಮಧ್ಯಪ್ರದೇಶದಲ್ಲಿ ಬೆಳೆಯುವ ‘ನೂರ್‌ಜಹಾನ್’ ತಳಿಯ ಒಂದು ಮಾವಿನ ಹಣ್ಣಿನ ಬೆಲೆ 1200 ರೂ.!

* ಪಿಸ್ತ ಮತ್ತು ಗೋಡಂಬಿ ಜಾತಿ ಮರಗಳೊಂದಿಗೆ ಮಾವಿನ ಮರ ನಿಕಟ ನಂಟು ಹೊಂದಿದೆ.

* ಮಾವಿನ ಮರಗಳು 115-131 ಅಡಿ ಎತ್ತರದವರೆಗೆ ಬೆಳೆಯಬಲ್ಲವು.

* ಸುಮಾರು 300 ವರ್ಷಗಳವರೆಗೂ ಮಾವಿನ ಮರ ಹಣ್ಣು ಬಿಡಬಲ್ಲದು.

* ಮಾವಿನ ಮರದಲ್ಲಿ ಬಿಡುವ ಹೂವುಗಳ ಪೈಕಿ ಶೇ.1ರಷ್ಟು ಮಾತ್ರ ಕಾಯಿಗಳಾಗುತ್ತವೆ!

* ಮಾವಿನ ಹಣ್ಣುಗಳನ್ನು ಮೊದಲ ಬಾರಿ ಅಮೆರಿಕಾಗೆ ರಫ್ತು ಮಾಡಿದ ದೇಶ ಫ್ಲೋರಿಡಾ; 1833ರಲ್ಲಿ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.