1. ತೋಟಗಾರಿಕೆ

ತೋಟಗಾರಿಕೆ ಕ್ಷೇತ್ರಗಳಲ್ಲಿ ನಿಗದಿತ ದರದಲ್ಲಿ ವಿವಿಧ ಸಸಿಗಳು ಮಾರಾಟಕ್ಕೆ ಲಭ್ಯ

Ramlinganna
Ramlinganna
Horticulture

ಮುಂಗಾರು ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ  ಮಾವು, ಸೀಬೆ, ತೆಂಗು, ನಿಂಬೆ, ಕರಿಬೇವು ಮತ್ತು ವಿವಿಧ ಅಲಂಕಾರಿಕ ಸಸಿಗಳನ್ನು ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರಾದ ಪ್ರಭುರಾಜ್ ಹೆಚ್.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣ್ಣು ಹಾಗೂ ಇತರೆ ಬೆಳೆಯನ್ನು ಬೆಳೆಯಲಿಚ್ಛಿಸುವ ಜಿಲ್ಲೆಯ ರೈತರು ವಿವಿಧ ಸಸಿಗಳನ್ನು ಖರೀದಿಸಲು ತಾಲೂಕುವಾರು ಸಂಬಂಧಪಟ್ಟ ಕ್ಷೇತ್ರಗಳನ್ನು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಕೆಸರಟಗಿ ತೋಟಗಾರಿಕೆ ಕ್ಷೇತ್ರದ 7353694199, ಬಡೇಪೂರ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9591482423, ಕಲಬುರಗಿ ಐವಾನ್ ಶಾಹಿ ನರ್ಸರಿ ಮೊಬೈಲ್ ಸಂಖ್ಯೆ 9972138920, ಸೇಡಂ ನರ್ಸರಿ ಕಚೇರಿ ಮೊಬೈಲ್ ಸಂಖ್ಯೆ 9663489542, ಚಂದ್ರಂಪಳ್ಳಿ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9008556488, ಹಳ್ಳಿಸಲಗರ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9108382507, ಮಾಲಗತ್ತಿ ತೋಟಗಾರಿಕೆ ಕ್ಷೇತ್ರದ ಮೊಬೈಲ್ ಸಂಖ್ಯೆ 9060394179, ಚಿತ್ತಾಪೂರ ನರ್ಸರಿ ಕಚೇರಿ ಮೊಬೈಲ್ ಸಂಖ್ಯೆ 9844907534, ಗೋಳಾ (ಕೆ) ತೋಟಗಾರಿಕೆ ಕ್ಷೇತ್ರ  ಮೊಬೈಲ್ ಸಂಖ್ಯೆ 8884931830 ಹಾಗೂ ಗುಡೂರ್ ತೋಟಗಾರಿಕೆ ಕ್ಷೇತ್ರ  ಮೊಬೈಲ್ ಸಂಖ್ಯೆ 9731222275ಗೆ ಸಂಪರ್ಕಿಸಲು ಕೋರಲಾಗಿದೆ.

ವ್ಯವಸಾಯಕ್ಕೆ ಯೋಗ್ಯವಲ್ಲದ ಬರಡು ಜಮೀನುಗಳು, ಹಳ್ಳ ಸಾಲುಗಳು, ಕಲ್ಲು ಗುಡ್ಡಗಳ ಜಮೀನುಗಳಲ್ಲಿ ಹಲವಾರು ಖುಷ್ಕಿ ತೋಡದ ಬೆಳೆಗಳನ್ನು ಬೆಳೆದು ರೈತರು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿದೆ. ಆಯ್ಕೆ ಮಾಡುವಾಗ ಆಯಾ ವಲಯಕ್ಕೆ ಸೂಕ್ತವಾದ ಬೆಳೆ ಮತ್ತು ತಳಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ. ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ತಳಿಗಳನ್ನು ಆಯ್ಕೆ ಮಾಡುವುದು ಸೂಕ್ತ.

ಉತ್ತಮ ಗುಣಮಟ್ಟದ ಬೆಳೆ ತಳಿಗಳನ್ನು ವಿವಿಧ ಮೂಲಗಳಿಂದ ಪ್ರಮುಖವಾಗಿ ತೊಟಗಾರಿಕೆ ಇಲಾಖೆಯ ನರ್ಸರಿಗಳು, ಕೃಷಿ / ತೋಟಗಾರಿಕೆ ವಿಶ್ವವಿದ್ಯಾಲಯಗಳು, ಕೃಷಿ / ತೋಟಗಾರಿಕೆ ಸಂಶೋಧನ ಕೇಂದ್ರಗಳು, ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆಗಳಿಂದ ರೈತರಿಗೆ ಪೂರೈಸಲಾಗುವುದು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.