1. ಆರೋಗ್ಯ ಜೀವನ

ಕಿಡ್ನಿ ಸಮಸ್ಯೆಗೆ ತುತ್ತಾದಾಗ ಏನು ಮಾಡಬೇಕು..?

ಮೂತ್ರಪಿಂಡಗಳು ಮಾನವನ ದೇಹದಲ್ಲಿನ ಅತಿ ಮುಖ್ಯವಾದ ಅಂಗಾಂಗಗಳಲ್ಲಿ ಒಂದು.ದೇಹದಲ್ಲಿನ ಎಲ್ಲ ಕ್ರಿಯೆಗಳು ಸರಿಯಾಗಿ ಆಗಲು ಮೂತ್ರಪಿಂಡಗಳ ಪಾತ್ರ ಅತ್ಯಗತ್ಯ. ಈಗಿನ ಸಂದರ್ಭದಲ್ಲಿ ಅಂದರೆ ಆಧುನಿಕತೆಗೆ ಅತೀವವಾಗಿ ಹೊಂದಿಕೊಳ್ಳುವುದು, ಮೊದಲಿನ ಪಾರಂಪರಿಕ ಜೀವನಶೈಲಿಯನ್ನು ಬದಲಾಯಿಸಿಕೊಂಡಾಗ ಮಾನವನ ಮೇಲೆ ಆಗುವ ಪರಿಣಾಮಗಳ ದೃಷ್ಟಿಕೋನದಿಂದ, ಮಾನವನಿಗೆ ಮೊದಲಿಗಿಂತಲೂ ಅಧಿಕವಾಗಿ ದೈಹಿಕ ಶಾರೀರದ ಸಮಸ್ಯೆಗಳು ಅದರಲ್ಲೂ ಮೂತ್ರಪಿಂಡದ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿವೆ.

ಸಾಮಾನ್ಯವಾಗಿ ಕಿಡ್ನಿ ಸಮಸ್ಯೆಯಿಂದ  ಬಳಲುವ ಜನರು ರೋಗದ ಕೊನೆಯ ಹಾಗೂ ನಿರ್ಣಾಯಕ ಹಂತವನ್ನು ತಲುಪವವರೆಗೂ ಕಿಡ್ನಿ ಸಮಸ್ಯೆಯನ್ನು ಬಹಳ ಕಡೆಗಣಿಸುತ್ತಾರೆ. ಕಿಡ್ನಿ ಸಮಸ್ಯೆಯು ಪ್ರಾರಂಭದಲ್ಲಿ ಅತೀ ನಿಧಾನವಾಗಿ ಹರಡುತ್ತದೆ, ಆಮೇಲೆ ರೋಗದ ಲಕ್ಷಣಗಳು ಬೆಳೆಯುಲು ಪ್ರಾರಂಭಿಸುತ್ತವೆ. ಮೂತ್ರಪಿಂಡಗಳು ಮಾನವನ ದೇಹದ ಬಹುಮುಖ್ಯ ಕಾರ್ಯಗಳಿಗೆ ಅತ್ಯವಶ್ಯಕ. ಮೂತ್ರಪಿಂಡಗಳು ರಕ್ತದಿಂದ ವಿಷ ಹಾಗೂ ತ್ಯಾಜ್ಯವನ್ನು ಹೊರಹಾಕಲು ಸಹಾಯಕಾರಿ.

ಈಗಾಗಲೇ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ಈ ಕೆಳಗಿನ ಆಹಾರಗಳಿಂದ ದೂರವಿದ್ದರೆ ಉತ್ತಮ.

1.ಪೊಟ್ಯಾಶಿಯಂ ಅಂಶ ಅಧಿಕವಿರುವ ಹಣ್ಣು ಹಂಪಲುಗಳು: ನಮಗೆ ಕಿಡ್ನಿ ಸಮಸ್ಯೆ ಇದೆ ಎಂದ ಖಚಿತವಾದಲ್ಲಿ ಪೊಟ್ಯಾಶಿಯಂ ಅಂಶ ನಿಯಂತ್ರಣೆಯು ಬಹಳ ಮುಖ್ಯವಾದದ್ದು. ಇದರಿಂದ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಹಣ್ಣುಗಳನ್ನು ಕಡೆಗಣಿಸಿದರೆ ಆರೋಗ್ಯದ ದೃಷ್ಟಿಯಿಂದ ಉತ್ತಮ.

2.ಸಂಸ್ಕರಿಸಿದ ಮಾಂಸ: ಮಾಂಸವನ್ನು ಸಂಸ್ಕರಣೆಗೆ ಅನೇಕ ವಿಧಾನಗಳಿವೆ.  ಮಾಂಸ ಬಾಯಿಗೆ ರುಚಿಯಾದರೂ ಕಿಡ್ನಿಗೆ ಅತಿ ಹೆಚ್ಚಿನ ಕಂಟಕ ನೀಡಬಲ್ಲದು. ಮಾಂಸದಲ್ಲಿ ಸೋಡಿಯಂ ಅಂಶ ಕೂಡ ಹೆಚ್ಚಿರುವುದರಿಂದ, ಮಾಂಸ ಪದಾರ್ಥವನ್ನು ಆದಷ್ಟು ಕಡೆಗಣಿಸಿ.

ಈ ಅಭ್ಯಾಸಗಳಿಂದ ದೂರವಿರಿ!

  1. ಮೂತ್ರ ತಡೆಹಿಡಿಯುವುದು : ಮೂತ್ರ ವಿಸರ್ಜನೆ ಮಾಡಬೇಕೆನಿಸಿದರೂ, ತಡೆಹಿಡಿಯುವ ಅಭ್ಯಾಸ ಇದ್ದರೆ ಅದನ್ನು ಕೂಡಲೇ ಬಿಟ್ಟುಬಿಡಿ. ಏಕೆಂದರೆ ಇದು ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಲು ಮತ್ತು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ.
  2. ಹೆಚ್ಚು ಮಾಂಸಾಹಾರ ಸೇವನೆ : ಕುರಿ, ಮೇಕೆ, ದನ ಮೊದಲಾದ ಪ್ರಾಣಿಗಳ ಮಾಂಸ ಬಲು ರುಚಿ. ಹಾಗೆಂದು ಅದನ್ನು ಪ್ರತಿನಿತ್ಯ ಸೇವಿಸಲು ಆರಂಭಿಸಿದರೆ ಕಿಡ್ನಿ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಕೆಂಪು ಮಾಂಸ ಸೇವನೆಯಿಂದ ದೂರವಿರಿ. 
Published On: 09 May 2021, 07:37 PM English Summary: Maintain Kidney Health

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.