1. ಆರೋಗ್ಯ ಜೀವನ

Heart Attack: ಹೃದಯಾಘಾತ ಹೆಚ್ಚಳ: ಜಯದೇವ ಆಸ್ಪತ್ರೆಯಿಂದ ಸಂಶೋಧನೆ

Hitesh
Hitesh
Increase in heart attacks: Research from Jayadeva Hospital

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಕಡಿಮೆ ವಯಸ್ಸಿನ ಹಾಗೂ ಯುವಕರಲ್ಲಿ ಹೃದಯಾಘಾತ ಕಾಣಿಸಿಕೊಂಡು ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕೋವಿಡ್‌ ನಂತರದಲ್ಲಿ ಹಲವರು ಹೃದಯಾಘಾದಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ಯುವಕರು ಜಿಮ್‌ ಮಾಡುವ ಸಂದರ್ಭದಲ್ಲಿ ಮೃತಪಟ್ಟಿದ್ದೇ ಹೆಚ್ಚು.

ಅಧಿಕ ರಕ್ತದೊತ್ತಡ ತಪ್ಪಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌! 

ಇದೀಗ ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ, ಕಳೆದ ಐದಾರು ವರ್ಷದಲ್ಲಿ ಬೆಂಗಳೂರಿನ (Jayadeva Hospital) ಜಯದೇವ ಹೃದ್ರೋಗ ಆಸ್ಪತ್ರೆಯು ಬರೋಬ್ಬರಿ ಏಳು

ಸಾವಿರ ಯುವಕರಿಗೆ ಹೃದಯ ಸಂಬಂಧಿ ಚಿಕಿತ್ಸೆ ನೀಡಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.  

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಘಾತ ಮತ್ತು ಹೃದಯ ಸಂಬಂಧ ಆರೋಗ್ಯ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದು ವೈದ್ಯರಿಗೂ ಬಿಡಿಸಲಾಗದ ಪ್ರಶ್ನೆಯಾಗಿ ಬದಲಾಗಿದೆ.

ಆಂಧ್ರಪ್ರದೇಶದಲ್ಲಿ 10,500 ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ!  

ವೈದ್ಯರಿಗೆ ಸವಾಲಾದ ಹೃದಯಾಘಾತಕ್ಕೆ ಕಾರಣಗಳನ್ನು ತಿಳಿದುಕೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಲು ಜಯದೇವ ಹೃದ್ರೋಗ ಆಸ್ಪತ್ರೆ ಮುಂದಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹೃದ್ರೋಗಕ್ಕೆ ಬಲಿಯಾಗುತ್ತಿದ್ದು, ಇದಕ್ಕೆ ಏನು ಕಾರಣ ಎಂದು ಪತ್ತೆಹಚ್ಚಲು ಪ್ರತಿಷ್ಠಿತ ಜಯದೇವ ಆಸ್ಪತ್ರೆ ಮುಂದಾಗಿದೆ.

ಜಯದೇವ ಹೃದ್ರೋಗ Jayadeva Hospital  ಆಸ್ಪತ್ರೆ ಒಂದರಲ್ಲೇ ಕಳೆದ ಐದಾರು ವರ್ಷದಲ್ಲಿ ಬರೋಬ್ಬರಿ 7 ಸಾವಿರ ಯುವ ಜನರಿಗೆ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದಾರೆ.  

15 ವರ್ಷ ಬಾಲಕರು ಮತ್ತು  19 ವರ್ಷದ ಯುವಕರಿಗೆ ಚಿಕಿತ್ಸೆ ನೀಡಲಾಗಿದೆ. ಮಹಿಳೆಯರಲ್ಲೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ.

ಹೀಗಾಗಿ, ಯುವಜನರಲ್ಲಿ ಈ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಲು ಕಾರಣದ ಬಗ್ಗೆ ಅಧ್ಯಯನ ನಡೆಸಲು ಜಯದೇವ ಹೃದ್ರೋಗ ಉದ್ದೇಶಿಸಿದೆ.  

ಇದನ್ನೂ ಓದಿರಿ: ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ? 

ಶೇ 30ರಷ್ಟು ಹೃದಯಾಘಾತ ಪ್ರಕರಣಕ್ಕೆ ಕಾರಣವೇ ನಿಗೂಢ!

ಇತ್ತೀಚಿನ ವರ್ಷಗಳ ಶೇಕಡ 70ಕ್ಕೂ ಹೆಚ್ಚು ಆರೋಗ್ಯದಲ್ಲಿ ಸಮಸ್ಯೆಗಳಿಂದ ಹೃದ್ರೋಗಕ್ಕೆ ಒಳಗಾಗುತ್ತಿದ್ದಾರೆ. ಆದರೆ, ಶೇ 30  ರಷ್ಟು ಪ್ರಕರಣಗಳಲ್ಲಿ ಹೃದಯಘಾತಕ್ಕೆ ಕಾರಣವೇ ತಿಳಿಯುತ್ತಿಲ್ಲ.

ಈ ಪ್ರಮಾಣ ವೈದ್ಯರಿಗೂ ಆತಂಕ ಮೂಡಿಸಿದ್ದು, ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಒಂದೆರಡು ಪ್ರಮಾಣದಲ್ಲಿ ಆದರೆ ಏನು ಆರೋಗ್ಯ

ಏರುಪೇರು ಎಂದು ಅಥವಾ ವಂಶಪರಂಪರೆ ಆಗಿ ಬಂದ ಸಮಸ್ಯೆ ಎಂದು ಪರಿಗಣಿಸಬಹುದಾಗಿತ್ತು. ಆದರೆ, ಇದರಲ್ಲಿ ಯಾವುದೂ ತಿಳಿದಿಲ್ಲ.  

ರಾಜೀವ್‌ ಗಾಂಧಿ ಹತ್ಯೆಗೆ ಕಾರಣವೇನು, ಸಂಚು ರೂಪಿಸಿದ್ದೇಗೆ ?  

Heart attacks

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಜಯದೇವ ಹೃದ್ರೋಗ ಸಂಸ್ಥೆ ಮುಂದಾಗಿರುವ ಕುರಿತು ಸಂಸ್ಥೆಯ ನಿರ್ದೇಶಕ ಎನ್.ಮಂಜುನಾಥ್ ಅವರು ತಿಳಿಸಿದ್ದಾರೆ.

Heart attacks

ಈಚೆಗೆ ಮಾತನಾಡಿದ್ದ ಅವರು ಜೀವನ ಶೈಲಿ ಬದಲಾವಣೆಯಿಂದಾಗಿ ಮಕ್ಕಳು, ಯುವಕರಲ್ಲಿ ಹೃದಯಾಘಾತದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ್ದರು.  

ಯುವಕರಲ್ಲಿ ಉಂಟಾಗುತ್ತಿರುವ ಹೃದಯಾಘಾತಕ್ಕೆ ಮದ್ಯಪಾನ, ಧೂಮಪಾನ ಹಾಗೂ ಒತ್ತಡವೇ ಪ್ರಮುಖ ಕಾರಣವಾಗಿದೆ.

ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಹೃದಯಾಘಾತಕ್ಕೊಳಗಾದ 7 ಸಾವಿರ ಯುವಕರಿಗೆ ಚಿಕಿತ್ಸೆ ನೀಡಿದ್ದೇವೆ. ಚಟವಿಲ್ಲದ ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಆಸ್ಪತ್ರೆಗೆ ಕರೆ ತರುತ್ತಿದ್ದಾರೆ.

ಅದರಲ್ಲಿ ಹೃದಯ ಸಂಬಂಧಿಗಳ ಕಾಯಿಲೆಗಳೇ ಹೆಚ್ಚಿವೆ.

ದಶಕಗಳ ಹಿಂದೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಹೃದಯಾಘಾತವಾಗುತ್ತಿದ್ದದ್ದು ತೀರ ವಿರಳ. ಆದರೆ, ಈಗ 50 ರಿಂದ 30ರ ವಯೋಮಿತಿಯಲ್ಲಿರುವ ಹೆಂಗಸರಲ್ಲೂ ಈ ರೋಗ ಕಾಣಿಸಿಕೊಳ್ಳುತ್ತಿದೆ.

ಶೇ 30ರಷ್ಟು ಮಂದಿಗೆ ಯಾವುದೇ ಚಟ ಇಲ್ಲ. ಹಾಗಾಗಿ, ಕಾರಣಗಳ ಕುರಿತು ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದ್ದರು.

ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ? 

Published On: 12 November 2022, 04:44 PM English Summary: Increase in heart attacks: Research from Jayadeva Hospital

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.