1. ಆರೋಗ್ಯ ಜೀವನ

ಹೀರೆಕಾಯಿ ನೋಡಲು ಅಷ್ಟೇನೂ ಚೆನ್ನಾಗಿ ಕಾಣದಿದ್ದರೂ ಆರೋಗ್ಯಕ್ಕೆ ಪ್ರಯೋಜನಕಾರಿ

ಸಾಮಾನ್ಯವಾಗಿ ಹೀರೇಕಾಯಿ ಬಹಳಷ್ಟು ಜನ ಇಷ್ಟಪಡುವುದಿಲ್ಲ. ಮುಖ ಒಂಥರಾ ಮಾಡ್ತಾರೆ. ಅಯ್ಯೋ ಈವತ್ತೂ ಹೀರೇಕಾಯಿಯಾ? ಅಂತಾರೆ. ಆದರೆ ಹೀರೇಕಾಯಿ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಅಂತಾರೆ ವೈದ್ಯರು. ಹೀರೇಕಾಯಿ ನಮ್ಮ ಆಹಾರದಲ್ಲಿ ಕಡ್ಡಾಯವಾಗಿ ಇರಬೇಕು ಎಂಬುದೈ ವೈದ್ಯರ ಸಲಹೆ.  ಹೀರೆಕಾಯಿ ನೋಡಲು ಅಷ್ಟೇನೂ ಚೆನ್ನಾಗಿ ಕಾಣದಿದ್ದರೂ ಸಹ ಅದರ ಆರೋಗ್ಯಕ್ಕೆ ಪ್ರಯೋಜನಕಾರಿ. ಹೀರೇಕಾಯಲ್ಲಿ ಸಹಜವಾಗಿರುವ ನಾರಿನ ಅಂಶದಲ್ಲಿ ಅದೆಷ್ಟೋ ಪ್ರಯೋಜನ ಗಳಿವೆಯಂತೆ. ಇನ್ನೂ ಏನೇನು ಲಾಭ ಅಂತ ನೋಡೋಣ ಬನ್ನಿ…

ಹೀರೇಕಾಯಿಯನ್ನು ಸಾಬಾರ್, ದಾಲ್, ಚಟ್ನಿ,ರೈತಾ, ಪಲ್ಯಾಗಳಲ್ಲಿ ಬಳಸಲಾಗುತ್ತದೆ. ಇದು ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಸ್ಯವು ಹಳದಿ ಹೂಗಳನ್ನು ಹೊಂದಿರುತ್ತದೆ. ಹೊರಗೆ ಹಸಿರು ಚರ್ಮ ಮತ್ತು ಒಳಗೆ ಬಿಳಿ ಮಾಂಸವನ್ನು ಅಲ್ಲದೆ ಮಧ್ಯದಲ್ಲಿ ಕಪ್ಪು ಬೀಜಗಳನ್ನು ಹೊಂದಿರುತ್ತದೆ. ಇದು ನಾರುಗಳು, ನೀರಿನ ಅಂಶ, ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಮೆಗ್ನಿಸಿಯಂ ಮತ್ತು ವಿಟಮಿನ್ ಬಿ ಘಟಕಗಳಲ್ಲಿ ಸಮೃದ್ಧವಾಗಿದೆ.

ವಿಟಮಿನ್ ಎ ಇರುವದರಿಂದ ವಯಸ್ಸಿನಲ್ಲಿ ದೃಷ್ಟಿ ಸುಧಾರಿಸುತ್ತದೆ. ಕಬ್ಬಿಣಾಂಶವು ಜಾಸ್ತಿ ಇರುವದರಿಂದ ರಕ್ತಹೀನತೆಯನ್ನು ಗುಣಪಡಿಸಲು ಸಹಕಾರಿ. ದೇಹದ ಅಂಗಾಂಶಗಳಲ್ಲಿ ಕೊಬ್ಬಿನ ಹೆಚ್ಚುವರಿ ಸಂಗ್ರಹವನ್ನು ತಪ್ಪಿಸುತ್ತದೆ. ಕಾರಣ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಸ್ವಲ್ಪ ಜೇನು ತುಪ್ಪದೊಂದಿಗೆ ಹೀರಿಕಾಯಿ ರಸವನ್ನು ಕುಡಿಯುವದರಿಂದ ಮಲಬದ್ಧತೆಯಿಂದ ತಕ್ಷಣವೇ ಪರಿಹಾರ ಸಿಗುತ್ತದೆ.

ವಿಷಕಾರಿ ತ್ಯಾಜ್ಯಗಳು, ಆಲ್ಕೋಹಾಲ್ ಉಳಿಕೆಗಳು ಮತ್ತು ಜೀರ್ಣವಾಗದ ಆಹಾರ ಕಣಗಳ ರಕ್ತವನ್ನು ಶುದ್ಧಿಕರಿಸುವ ಸಾಮಥ್ರ್ಯವನ್ನು ಹೊಂದಿದೆ.ಆದ್ದರಿಂದ ಯಕೃತ್ತಿನ ಆರೋಗ್ಯ ಮತ್ತು ಪಿತ್ತರಸ ಕಾರ್ಯವನ್ನು ಹೆಚ್ಚಿಸಲು ಇದು ನಿರ್ಣಾಯಕ ಪಾತ್ರ ವಹಿಸುತ್ತದೆ. ಪಿತ್ತರಸವು ಯಕೃತ್ತಿನ ದ್ರವ ಸ್ರವಿಕೆಯಾಗಿದ್ದು, ಇದು ಲಿಪಡ್ ಅಥವಾ ಕೊಬ್ಬನ್ನು ಒಡೆಯಲು ಸಹಾಯ ಮಡುತ್ತದೆ.

ಲೇಖಕರು: ಶಗುಪ್ತಾ ಅ. ಶೇಖ

Published On: 27 September 2020, 07:03 PM English Summary: health benefits of ridge gourd

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.