1. ಆರೋಗ್ಯ ಜೀವನ

ಮೊಳಕೆ ಕಾಳಿನಲ್ಲಿ ಅಡಗಿದೆ ಹಲವಾರು ಆರೋಗ್ಯದ ಗುಟ್ಟು

ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್‌ ಫ‌ುಡ್‌ಗಳ ಹಾವಳಿಯೇ ಹೆಚ್ಚಾಗಿದೆ. ಅದರಲ್ಲೂ ಮೊಳಕೆ ಬಂದ ಕಾಳುಗಳ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.  ಮೊಳಕೆ ಕಾಳಲ್ಲಿ ಪ್ರೋಟಿನ್‌, ಫೈಬರ್‌, ವಿಟಮಿನ್‌ ಕಬ್ಬಿಣದ ಅಂಶ, ಕ್ಯಾಲ್ಸಿಯಂ ಹೀಗೆ ದೇಹಕ್ಕೆ ಬೇಕಾದ ಪೌಷ್ಟಿಕತೆ ಇರುತ್ತವೆ. ಅನೇಕ ಆರೋಗ್ಯಕಾರಿ ಅಂಶಗಳಿರುವ ಮೊಳಕೆ ಕಾಳುಗಳಲ್ಲಿ ಹೆಸರು ಕಾಳು ಒಂದು. ಮೊಳಕೆ ಒಡೆದ ಹೆಸರು ಕಾಳು ಆರೋಗ್ಯಕ್ಕೆ ಎಷ್ಟು ಉಪಯುಕ್ತ? ಅದರ ಲಾಭಗಳೇನು? ಅದನ್ನು ಯಾಕೆ ಸೇವಿಸಬೇಕು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೀರ್ಣಶಕ್ತಿ ಹೆಚ್ಚಾಗುತ್ತದೆ:

ಹೆಸರು ಮೊಳಕೆಯೊಡೆಯಲು ಎರಡು ಮಾರ್ಗಗಳಿವೆ. ಮೊದ¯ನೆಯದಾಗಿ ಹತ್ತಿ ಬಟ್ಟೆಯಲ್ಲಿ  ಮೊಳಕೆಯೊಡೆಯುವದು. ಎರಡನೆಯ ವಿಧಾನವೆಂದರೆ ನೇರವಾಗಿ ಪಾತ್ರೆಯಲ್ಲಿ ಮೊಳಕೆಯೊಡೆಯುವದು. ಹೆಸರು ಕಾಳನ್ನು ನೀರಿನಲ್ಲಿ ನೆನಸಿಟ್ಟು, ಬಳಿಕ ಮೊಳಕೆ ಬಂದ ಮೇಲೆ ಸೇವಿಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ.ಇದು ಫೈಬರ್‍ಗಳಿಂದ ತುಂಬಿರುತ್ತವೆ, ಅಲ್ಲದೆ ಕೊಬ್ಬು ರಹಿತವಾಗಿವೆ. ಮೊಳಕೆಯೊಡೆದ ಇವು ಪೋಷಕಾಂಶಗಳ ಗರಿಷ್ಠ ಸಾಂದ್ರತೆ ಮತ್ತು ಜೈವಿಕ ಲಭ್ಯತೆಯನ್ನು ಹೊಂದಿವೆ.

ಕಡಿಮೆ ತೂಕ:

ಮೊಳಕೆ ಬಂದ ಹೆಸರು ಕಾಳಿನಲ್ಲಿ ಕ್ಯಾಲೋರೀಸ್‌ ಇಲ್ಲದ ಕಾರಣ ಇದನ್ನು ಎಷ್ಟು ತಿಂದರೂ ತೂಕ ಹೆಚ್ಚಾಗಲ್ಲ. ಕೊಬ್ಬುಗಳು ಕಡಿಮೆ ಇರುವದರಿಂದ ಕಾರ್ಬೋಹೈಡ್ರೆಟಗಳ ಅತ್ಯುತ್ತಮ ಮೂಲ. ಇದು ನಾರಿನಾಂಶದಿಂದ ಕೂಡಿದೆ. ಬೀನ್ಸ್‍ನ ಹೆಚ್ಚಿನ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹೆಚ್ಚಿನ ಏರಿಳಿತವನ್ನು ತಡೆಯುತ್ತದೆ. ಆದ್ದರಿಂದ ಇದು ಡಯಾಬಿಟಿಸ್, ಮೆಲ್ಲಿಡಸ್, ಇನ್ಸುಲಿನ್ ಪ್ರತಿರೋಧ ಮತ್ತು ಹೈಪೊಗ್ಲೆಸಿಮಿಯಾ ರೋಗನಿರ್ಣಯದವರಿಗೆ ಇದು ಸೂಕ್ತ ಆಯ್ಕೆಯಾಗಿದೆ.

ದೇಹಕ್ಕೆ ಸೋಂಕು ತಗಲದಂತೆ ತಡೆಯುತ್ತದೆ:

ಇದು ಮೊಳಕೆಯೊಡೆಯುವದರಿಂದ  ನಾರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ದೇಹಕ್ಕೆ ಸೋಂಕು ಆಗದಂತೆ ತಡೆಯುತ್ತದೆ. ವಾರಕ್ಕೆ ಎರಡು ಬಾರಿ ತಿನ್ನುವದರಿಂದ ಕ್ಯಾನ್ಸರ್ ಸಂಭವ ಕಡಿಮೆಯಾತ್ತದೆ.  ಪ್ರತಿನಿತ್ಯ ಹೆಸರು ಕಾಳನ್ನು ತಿನ್ನುವುದರಿಂದ ತ್ವಚೆಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ. 

ಲೇಖಕರು: ಶಗುಪ್ತಾ ಅ. ಶೇಖ

 

 

Published On: 28 September 2020, 09:10 PM English Summary: Benefits Of Sprouting

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.