1. ಆರೋಗ್ಯ ಜೀವನ

ಬಾರೆ ಹಣ್ಣಿನಲ್ಲಿ ಅಡಗಿದೆ ಅಪಾರ ಆರೋಗ್ಯದ ಗುಟ್ಟು

ಬಯಲು ಸೀಮೆಯ ಜನರಿಗೆ ಪ್ರಿಯವಾಗಿರುವ ಬಡವನ ಸೇಬು ಎಂದೇ ಖ್ಯಾತಿ ಪಡೆದಿರುವ ಬಾರೆಹಣ್ಣಿನಲ್ಲಿ ಅಡಗಿದೆ ಅಪಾರ ಆರೋಗ್ಯದ ಗುಟ್ಟು. ಅರಿಸಿನ, ಹಸುರು, ಕಂದು ಬಣ್ಣಗಳಲ್ಲಿ ಮೊಟ್ಟೆ ಆಕಾರ, ಗುಂಡಗೆ ಹಾಗೂ ಚಪ್ಪಟೆ ಆಕಾರದಲ್ಲಿರುವ ಬಾರೆ ಹಣ್ಣು ರುಚಿ ಸವಿದಿರಬಹುದು.

ಬಾರೆ ಹಣ್ಣುಗಳಲ್ಲಿ ಎ, ಬಿ ಮತ್ತು ಸಿ ಜೀವಸತ್ವ ಹೊಂದಿದ್ದು, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೇಗ್ನೇಶಿಯಂ, ಸತು ಹೇರಳವಾಗಿದೆ. ನೀರಿನಂಶ, ನಾರಿನಾಂಶ ಇರುವುದರಿಂದ ದೇಹಕ್ಕೆ ಶಕ್ತಿ ಒದಗಿಸುತ್ತದೆ. ವರ್ಷದುದ್ದಕ್ಕೂ ಲಭಿಸುವ ಹಣ್ಣುಗಳ ಜತೆಗೆ ಹವಾಮಾನಕ್ಕೆ ಅನುಗುಣವಾಗಿ ಕೆಲವೇ ಕೆಲವು ದಿನಗಳ ಕಾಲ ಮಾತ್ರವೇ ದೊರೆಯುವ ಬಾರೆ ಹಣ್ಣಿನ ರುಚಿಯನ್ನು ತಪ್ಪದೇ ಸವಿಯಬೇಕು. ಇದರಿಂದ ಬಾಯಿ ರುಚಿ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಬಾರೆ ಹಣ್ಣಿನಿಂದ ಸಿಗುವ ಉಪಯೋಗಗಳು

   1. ವಾಂತಿಯಾಗುತ್ತಿದ್ದಲ್ಲಿ ಬಾರೆ ಹಣ್ಣು ಮತ್ತು ಕಾಳು ಮೆಣಸು ಸೇರಿಸಿ ಕಷಾಯ ತಯಾರಿಸಿ ಅದಕ್ಕೆಕಲ್ಲು ಸಕ್ಕರೆ ಬೆರೆಸಿ ಕುಡಿಯಬೇಕು.

   2 ನರಗಳ ದೌರ್ಬಲ್ಯವಿರುವವರಿಗೆ ಈ ಹಣ್ಣು ಉತ್ತಮವಾದದು.

  1. ಹೃದ್ರೋಗದಿಂದ ಬಳಲುವವರಿಗೆ ಬಾರೆಹಣ್ಣು ಉತ್ತಮ ಟಾನಿಕ್‍ಆಗಿದೆ.
  2. ಜೀರ್ಣ ಶಕ್ತಿ ಹೆಚ್ಚಿಸಲು ಈ ಹಣ್ಣನ್ನು ತಿನ್ನಬೇಕು.
  3. ಮಲಬದ್ಧತೆ ಇರುವವರು ಬಾರೆ ಹಣ್ಣುತಿಂದರೆ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ.
  4. ಭೇದಿಯಾಗುತ್ತಿದ್ದಲ್ಲಿ ತೊಗಟೆಯ ಪುಡಿಕಷಾಯದ ಸೇವನೆ ಒಳ್ಳೆಯದು.
  5. ಜ್ವರವಿರುವಾಗ ಬಾರೆ ಹಣ್ಣಿನ ಬೇರಿನ ಪುಡಿಯನ್ನು ಜೇನಯತುಪ್ಪ ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು.
  6. ತಲೆಕೂದಲು ಉದುರುತ್ತಿದ್ದಲ್ಲಿ ಬಾರೆ ಹಣ್ಣಿನ ಎಲೆಗಳ ರಸವನ್ನು ಹಚ್ಚಿಕೊಂಡು ತಲೆ ತೊಳೆದುಕೊಳ್ಳಬೇಕು.
  7. ಈ ಹಣ್ಣುಗಳ ಸೇವನೆ ರಕ್ತ ಶುದ್ಧಿ ಮಾಡುತ್ತದೆ.

ಲೇಖಕರು: ಶಗುಪ್ತಾ ಅ ಶೇಖ

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.