1. ಆರೋಗ್ಯ ಜೀವನ

ಹಸಿ ಬಟಾಣಿ ತಿನ್ನುವುದರಿಂದ ಆಗುವ ಲಾಭಗಳಿವು

Maltesh
Maltesh
Green Peas Health Benefits

ಚಳಿಗಾಲದ ಸೀಸನ್‌ ಬಂದ ಕೂಡಲೆ ಮಾರುಕಟ್ಟೆಯಲ್ಲಿ ಫ್ರೆಶ್‌ ಹಸಿ ಬಟಾಣಿಗಳು ಸಿಗುತ್ತವೆ. ಹಸಿರು ಬಟಾಣಿ ರುಚಿಯಲ್ಲಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಹಸಿ ಬಟಾಣಿ ಅಂದ್ರೆ ಯಾರೀಗೆ ತಾನೇ ಇಷ್ಟ ಇಲ್ಲ ಹೇಳಿ..ಮಾರುಕಟ್ಟೆಯಲ್ಲಿ ನಿರ್ದಿಷ್ಟ ಅವಧಿಗೆ ಮಾತ್ರ ದೊರಕುವ ಈ ತರಕಾರಿ ಸಾಕಷ್ಟು ಆರೋಗ್ಯದ ಖನಿಜವನ್ನೆ ತನ್ನೊಳಗೆ ಅಳವಡಿಸಿಕೊಂಡಿದೆ.

ಎಲ್ಲಾ ಆರೋಗ್ಯ ಸಮಸ್ಯೆಗೂ ಆರೋಗ್ಯ ಸಂಜೀವಿನಿ ವಿಮೆ

ಅತಿಯಾಗಿ ಮೊಟ್ಟೆ ತಿಂದರೆ ಏನೆಲ್ಲಾ ಅಡ್ಡ ಪರಿಣಾಮಗಳು ಇವೆ ಗೊತ್ತಾ..?

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈ ಬಟಾಣಿ ಅಂದ್ರೆ ಬಲು ಅಚ್ಚು ಮೆಚ್ಚು. ಸ್ವಲ್ಪ ದುಬಾರಿ ಅಂತಾ ಮೂಗು ಮುರಿದುಕೊಂಡು ಹೋದ್ರೆ ಆರೋಗ್ಯ ಸಂಪತ್ತಿನ ತರಕಾರಿಯಿಂದ ವಂಚಿತರಾಗೋದು ಮಾತ್ರ ಫಿಕ್ಸ್‌..

ರೋಗ ನಿರೋಧಕ ಶಕ್ತಿಯ ವರ್ಧಕ
ಹಸಿ ಬಟಾಣಿಯಲ್ಲಿ ರೋಗ - ನಿರೋಧಕ ಶಕ್ತಿಯನ್ನು ವೃರ್ಧಿಸುವಂತಹ ವಿಟಮಿನ್ ' ಸಿ ' ಅಂಶ ಇದೆ. ಹಾಗಾಗಿ ಇದೊಂದು ಅತ್ಯುತ್ತಮ ಆಹಾರ ಎನ್ನಲಾಗಿದೆ. ಜೊತೆಗೆ ಆಂಟಿ - ಆಕ್ಸಿಡೆಂಟ್ ಅಂಶಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ ಎಂದು ಸಂಶೋಧನೆಗಳು ಹೇಳುತ್ತಿದ್ದು ಸಮತೋಲಿತ ಆಹಾರಕ್ಕಾಗಿ ಈ ಬಟಾಣಿ ಫರಫೆಕ್ಟ್‌.. ಫೈಟೋ - ಅಲೆಕ್ಸಿನ್ ಎಂಬ ಆಂಟಿ - ಆಕ್ಸಿಡೆಂಟ್ ಅಂಶ ಕರುಳಿನ ಭಾಗದ ಹುಣ್ಣುಗಳನ್ನು ಸರಿ ಪಡಿಸಿ ಕರುಳಿನ ಕ್ಯಾನ್ಸರ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವುದು ಹೇಗೆ ?

ಆರೋಗ್ಯವೇ ಭಾಗ್ಯ: ʼsugar free potatoʼ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ

ಕಣ್ಣುಗಳ ಆರೋಗ್ಯ ಕಾಪಾಡುತ್ತದೆ
ವಯಸ್ಸಾದಂತೆ ಎದುರಾಗುವ ಕಣ್ಣಿನ ಪೊರೆ ಸಮಸ್ಯೆ ಕೆಲವರನ್ನ ನಾನಾ ಸಂಕಷ್ಟಗಳಿಗೆ ಗುರಿ ಮಾಡುತ್ತದೆ.
ಇನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹಾಗೂ ವಯಸ್ಕರಿಗೆ ಕಣ್ಣಿಗೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ಲ್ಯೂಟೀನ್ ಅಂಶ ಹಸಿ ಬಟಾಣಿ ಕಾಳುಗಳಲ್ಲಿ ಸಾಕಷ್ಟು ಇದೆ ಎಂದು ಹೇಳುತ್ತಾರೆ. ಇದರ ನಿರಂತರ ಸೇವನೆಯಿಂದ ದೂರದೃಷ್ಟಿ ಅಥವಾ ಹತ್ತಿರದ ದೃಷ್ಟಿ ಸಮಸ್ಯೆಯನ್ನು ಕೂಡ ಇದು ಪರಿಹಾರ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತದೆ.

ಹೃದಯವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ
ಹಸಿ ಬಟಾಣಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ರಕ್ತನಾಳಗಳನ್ನು ಬಲಗೊಳಿಸಿ ಇದರಿಂದ ಹೃದಯದ ಮೇಲೆ ಬೀಳುವ ಭಾರವನ್ನು ಕಡಿಮೆಗೊಳಿಸುತ್ತವೆ. ಜೊತೆಗೆ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?

ಸಾವಯವ ಗೊಬ್ಬರ ಖರೀದಿಸುವ ರೈತರಿಗೆ ಭರ್ಜರಿ ರಿಯಾಯಿತಿ: ಈ ಯೋಜನೆಯಡಿ ₹227.40 ಲಕ್ಷ ಅನುದಾನ ಮೀಸಲು!

Published On: 09 June 2022, 04:34 PM English Summary: Green Peas Health Benefits

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.