ರೈತಮಿತ್ರ “ಸ್ವಾವಲಂಬಿ ಆ್ಯಪ್”: ಈಗ ಜಮೀನು ಸರ್ವೇ, ನಕ್ಷೆಗಳನ್ನು ಖುದ್ದು ರೈತರೆ ಮಾಡಬಹುದು!

Kalmesh T
Kalmesh T
Raita Mitra “Swavalambi App”: Now Land Survey, Farmers Can Make First Maps!

ರೈತರು ಇನ್ನೂ ಮುಂದೆ ತಮ್ಮ ಸ್ವಂತ ಜಮೀನಿನ 11 ಇ ಸ್ಕೆಚ್, ಪೋಡಿ, ಭೂ ಪರಿವರ್ತನಾ ಪೂರ್ವ ಸ್ಕೆಚ್ ಗಳನ್ನು (ನಕ್ಷೆ) ಗಳನ್ನು ತಾವೇ ತಯಾರಿಸಿಕೊಳ್ಳಬಹುದಾದ ಸ್ವಯಂ ಸೇವೆಯ ಹೊಸ ವ್ಯವಸ್ಥೆಯನ್ನು ಕಂದಾಯ ಇಲಾಖೆ ಸಿದ್ದಪಡಿಸಿದೆ. ರೈತರು ಇದೇ ತಿಂಗಳು ಏಪ್ರೀಲ್ 25 ರಿಂದ ಈ ಸೌಲಭ್ಯ ಪಡೆಯಬಹುದು. ಅದುವೇ ಸ್ವಾವಲಂಬಿ ಆಪ್‌.

ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ನಾಗರಿಕರಿಂದ ಸ್ವೀಕೃತವಾಗುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ಆರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆ ಅರ್ಜಿಗಳು ಅಳತೆಗಾಗಿ ವಿವಿಧ ಹಂತಗಳಲ್ಲಿ ಬಾಕಿಯಿವೆ. ಇದರಿಂದಾಗಿ ನಾಗರಿಕರು ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಸಿಕೊಳ್ಳಲು ಅಗತ್ಯವಿರುವ ಸ್ಕೆಚ್ ಗಾಗಿ ಹಲವಾರು ತಿಂಗಳುಗಳವರೆಗೆ ಕಾಯಬೇಕಾಗುತ್ತದೆ. ಈ ರೀತಿ ರೈತರು ತಮ್ಮ ಕೆಲಸಕ್ಕಾಗಿಕಾಯದೆ 11 ಇ ಸ್ಕೆಚ್, ತತ್ಕಾಲ್ ಪೋಡಿ ಇವುಗಳನ್ನು ಸ್ವಂತ ಜಮೀನಿಗೆ ತಾವೇ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.

ಇದನ್ನೂ ಓದಿರಿ:

ಸಿಡಿಲಿನ ಮುನ್ಸೂಚನೆ ನೀಡಲಿದ್ದಾಳೆ ಈ ದಾಮಿನಿ!

ಪಡಿತರ ತರಲು ಪರದಾಡಿದ್ದ ಯುವಕ; ಹೊಸ App ರಚಿಸಿದ ಕಥೆ!

ಏನಿದು ಸ್ವಾವಲಂಬಿ ಆ್ಯಪ್ (what is swavalambi app)

ರೈತರಿಗಾಗಿ ಕಂದಾಯ ಇಲಾಖೆಯು ಸ್ವಾವಲಂಬಿ ಆ್ಯಪ್ (Swavalambi App)  ಅಭಿವೃದ್ಧಿಪಡಿಸಿದೆ.  ಈ ಆ್ಯಪ್ ರೈತರಿಗೆ ಏಪ್ರೀಲ್ 25 ರಿಂದ ಸಿಗಲಿದೆ. ಈ ಆ್ಯಪ್ ಬಗ್ಗೆ ಸ್ವಲ್ಪ ಮಾಹಿತಿಯಿದ್ದರೆ ಸಾಕು, ರೈತರೇ ತಮ್ಮ ಜಮೀನಿನ ನಕ್ಷೆ ತಯಾರಿಸಬಹುದು.

ಒಂದು ಕುಟುಂಬದ ಸದಸ್ಯರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನು ಭಾಗ ಮಾಡಿಕೊಳ್ಳಬಹುದು. ಉದಾಹರಣೆಗೆ 4 ಎಕರೆ ಜಮೀನು ಇದ್ದರೆ ಕುಟುಂಬದ ಸದಸ್ಯರಿಗೆ ಯಾರಿಗೆ ಎಷ್ಟು ಭಾಗ ಎಂಬುದನ್ನು ಕುಟುಂಬದ ಸದಸ್ಯರು ನಿರ್ಧರಿಸಿ ಆ್ಯಪ್ ಮೂಲಕ ಸ್ಕೆಚ್ ಮಾಡಬಹುದು. ಇದಕ್ಕಾರಿ ರೈತರು ಯಾರ ಸಹಾಯವೂ ಕೇಳಬೇಕಿಲ್ಲ. ಸರ್ವೆಯರ್‌ಗಳಿಗೆ ಕರೆಯಬೇಕಿಲ್ಲ.

ರೈತರು ತಮ್ಮಜಮೀನಿನ ಸ್ಕೆಚ್ ಸಿದ್ದಪಡಿಸಿದ ಬಳಿಕ ಭೂ ದಾಖಲೆಗಳ ಕಚೇರಿಗೆ ಅಪ್ಲೋಡ್ ಮಾಡಿದರೆಸಾಕು, ನಂತರ ನೋಂದಣಿಇಲಾಖೆಯಲ್ಲಿ ಆ ಸ್ಕೆಚ್ ಗಡಿಗಳಿಗೆ ಅನುಗುಣವಾಗಿ ನೋಂದಣಿ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆಯ ಸಚಿವರು ತಿಳಿಸಿದರು.

ಭಾರತದ palm oil ಆಮದು ಹೆಚ್ಚಳ!

ಬೇಸಿಗೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆಯೇ..? ಈ ಟ್ರಿಕ್ಸ್ ಬಳಸಿ.. ಹಣ ಉಳಿಸಿ

ಸ್ವಾವಲಂಬಿ ಆ್ಯಪ್ ದಿಂದಾಗುವ ಉಪಯೋಗ

ರೈತರು ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ನೋಂದಣಿಗೆ ಸ್ಕೆಚ್ ಸಿದ್ದಪಡಿಸಬಹುದು.ಜಮೀನಿನಲ್ಲಿ ಪೋಡಿ ಮಾಡಿಕೊಡುವ ಬಗ್ಗೆ ಸ್ಕೆಚ್ ತಯಾರಿಸಬಹುದು. ಭೂ ಪರಿವರ್ತನಾ ಪೂರ್ವ ಸ್ಕೆಚ್ ಕೃಷಿ ಜಮೀನಿನ ಒಂದು ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಸ್ಕೆಚ್ ಮಾಡಬಹುದು.

ಸಮಯ ಉಳಿತಾಯ

ಸ್ವಾವಲಂಬಿ ಆ್ಯಪ್ ದಿಂದ ಈಗ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ.ಹಿಂದೆ ಆಸ್ತಿಯನ್ನು ಹಿಸ್ಸಾದಲ್ಲಿ ಭಾಗ ಮಾಡಲು ಸರ್ವೆ ನಡೆಸಿ, ಸ್ಕೆಚ್ ಮಾಡಿ, ನೋಂದಣಿ ಮಾಡಿ ಪಹಣಿ ಪಡೆಯಲು ಕನಿಷ್ಠ ಆರು ತಿಂಗಳುಗಳಿಂದ ಒಂದು ವರ್ಷ ಬೇಕಾಗುತ್ತಿತ್ತು. ಈಗ ಕಡಿಮೆ ಸಮಯದಲ್ಲಿ ಈ ಕೆಲಸವಾಗುತ್ತದೆ.

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..! 

Published On: 25 April 2022, 03:09 PM English Summary: Raita Mitra “Swavalambi App”: Now Land Survey, Farmers Can Make First Maps!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.