ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ.. ಎಲ್ಲಿ ರಿಜಿಸ್ಟರ್‌ ಮಾಡಬೇಕು ಗೊತ್ತಾ..?

Maltesh
Maltesh
Grilahakshmi Yojana registration process started

ರಾಜ್ಯ ಸರ್ಕಾರದ ಬಹು ನಿರೀಕ್ಷಿತ “ ಗೃಹಲಕ್ಷ್ಮಿ ” ಯೋಜನೆಗೆ ವಿದ್ಯುಕ್ತವಾಗಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ನಿನ್ನೆ ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾದ ಎರಡು ತಿಂಗಳೊಳಗೆ ನಾಲ್ಕನೇ ಯೋಜನೆ ಜಾರಿಯಾದಂತಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ  ಈ ಯೋಜನೆಗೆ ಚಾಲನೆ ನೀಡಲಾಗಿದೆ. 1. 28 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಮೂಲಕ ಅನುಕೂಲವಾಗಲಿದೆ. ಮುಂದಿನ ತಿಂಗಳಲ್ಲಿ ಮನೆ ಯಜಮಾನಿಗೆ ₹ 2,000/- ಹಣ ಜಮಾ ಆಗಲಿದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರವರು ಗೃಹಲಕ್ಷ್ಮಿ ಯೋಜನೆಯ ಮೊದಲ ಮೂರು ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿದರು. ಇದೇ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಲಾಂಛನ ಮತ್ತು ಪೋಸ್ಟರ್ ಅನ್ನು ಅನಾವರಣಗೊಳಿಸಲಾಯಿತು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಆಧಾರ್‌ ಕಾರ್ಡ್‌ ( Aadhar Card )

ಪಡಿತರ ಚೀಟಿ ( Rtation Card )

ಬ್ಯಾಂಕ್‌ ಖಾತೆ ಮಾಹಿತಿ

ಎಲ್ಲಿ ರಿಜಿಸ್ಟರ್‌ ಮಾಡಬಹುದು?

ಗ್ರಾಮ ಒನ್‌

ಬಾಪೂಜಿ ಕೇಂದ್ರ

ಬೆಂಗಳೂರು ಒನ್‌

ಕರ್ನಾಟಕ ಒನ್‌

ಬಿಬಿಎಂಪಿ ವಾರ್ಡ್‌ ಕಚೇರಿ

ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳು

ಪ್ರಜಾಪ್ರತಿನಿಧಿಗಳ ಮೂಲಕ

ಯಾರು ಅರ್ಹರು ..?

ಪಡಿತರ ಚೀಟಿಯಲ್ಲಿರುವ ಯಜಮಾನಿ ನೋಂದಾಯಿಸಿಕೊಳ್ಳಲು ಅವಕಾಶ

ಫಲಾನುಭವಿ ಮಹಿಳೆ ಅವರ ಪತಿ ಆದಾಯ ತೆರಿಗೆ ಪಾವತಿದಾರ ಆಗಿರಬಾರದು

ಫಲಾನುಭವಿ ಮಹಿಳೆ ಅವರ ಪತಿ GST ತರಿಗೆ ಪಾವತಿದಾರರು ಆಗಿರಬಾರದು

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1902 ಈ ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಪಡಿತರ ಕಾರ್ಡ್ ಸಂಖ್ಯೆಯನ್ನು ಎಸ್ ಎಂ ಎಸ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಿ.

ʻʻಪ್ರತಿ ಬಡ ಕುಟುಂಬದ ಹಸಿವನ್ನ ನೀಗಿಸಲು ಸಹಕಾರಿಯಾಗಲಿದೆʼʼ- ಲಕ್ಷ್ಮಿ ಹೆಬ್ಬಾಳ್ಕರ್‌

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಸುಮಾರು 1. 28 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಮೂಲಕ ಅನುಕೂಲವಾಗಲಿದೆ. ಮುಂದಿನ ತಿಂಗಳಲ್ಲಿ ಮನೆ ಯಜಮಾನಿಗೆ ₹ 2,000/- ಹಣ ಜಮಾ ಆಗಲಿದೆ. ಇಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿದ ದಿನ, ಇಂದೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತಿರುವುದು ನನ್ನ ಪುಣ್ಯ.

ಮನೆ ಮನೆಗೂ ಈ ಯೋಜನೆ ತಲುಪಲಿ ಸರ್ಕಾರ ನೀಡುತ್ತಿರುವ ₹ 2000/- ರೂ,ಗಳು ಪ್ರತಿ ಬಡ ಕುಟುಂಬದ ಹಸಿವನ್ನ ನೀಗಿಸಲು ಸಹಕಾರಿಯಾಗಲಿದೆ. ನಾನೊಬ್ಬ ರೈತನ ಮಗಳು ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ. ಹಳ್ಳಿಯ ಜೀವನ ಅನುಭವಿಸಿದ್ದೇನೆ.

Published On: 20 July 2023, 02:30 PM English Summary: Gruhalakshmi Yojana registration process started

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.