ಪಿಎಂ ಕಿಸಾನ್‌: ಈ ದಿನದಂದು ಖಾತೆಗೆ ಬರುತ್ತೆ ಹಣ..ರಿಲೀಸ್‌ ಡೇಟ್‌ ಅನೌನ್ಸ್

Maltesh
Maltesh
PM Kisan: The money will come into the account on this day

Pm Kisan 14th Installment: ದೇಶದ 10 ಕೋಟಿಗೂ ಹೆಚ್ಚು ರೈತ ಸಹೋದರರಿಗೆ ಸಂತಸದ ಸುದ್ದಿಯಿದೆ.

ರೈತಾಪಿ ವರ್ಗ ಪಿಎಂ ಕಿಸಾನ್‌ ಹಣ ಯಾವಾಗ ಬರುತ್ತೆ ಎಂದು ಇಷ್ಟು ದಿನದಿಂದ ಕಾಯುತ್ತಿದ್ದ ಪ್ರಶ್ನೆಗೆ ಕಿಸಾನ್‌ ಹಣಕ್ಕೆ ಇದೀಗ ಸಂತಸದ ಸುದ್ದಿಯೊಂದು ಬಂದಿದೆ. ರೈತರ ಖಾತೆಗಳಿಗೆ ಪಿಎಂ ಕಿಸಾನ್‌ ಹಣ ವರ್ಗಾವಣೆ ಆಗುವ ದಿನಾಂಕ ಫಿಕ್ಸ್‌ ಆಗಿದೆ.

ಯಾವಾಗ ಬರುತ್ತೆ ಹಣ?

ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 28 ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ನಾಗೌರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಈ ಸಮಯದಲ್ಲಿ, ಪ್ರಧಾನಿ ಮೋದಿ ಅವರು ದೇಶದ 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 17,000 ಕೋಟಿ ಕಿಸಾನ್‌ ಸಮ್ಮಾನ್ ನಿಧಿಯ ಹಣವನ್ನು ವರ್ಗಾಯಿಸಲಿದ್ದಾರೆ.

ಅರ್ಹ ರೈತರಿಗೆ ಸರ್ಕಾರವು ವರ್ಷಕ್ಕೆ 6000 ಆರ್ಥಿಕ ನೆರವು ನೀಡುತ್ತದೆ.  ಕೇಂದ್ರ ಸರ್ಕಾರ ಈ ಹಣವನ್ನು 3 ಕಂತುಗಳಲ್ಲಿ 2000 ಗಳ ಕಂತಿನಂತೆ ನೀಡುತ್ತದೆ. ಇದರ ಮೊದಲ ಕಂತನ್ನು ಏಪ್ರಿಲ್‌ನಿಂದ ಜುಲೈವರೆಗೆ, ಎರಡನೇ ಕಂತನ್ನು ಆಗಸ್ಟ್‌ನಿಂದ ನವೆಂಬರ್‌ವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ವರ್ಗಾವಣೆ ಮಾಡಲಾಗುತ್ತದೆ. ಈ ಹಿಂದೆ ಪ್ರಧಾನಿ ಮೋದಿಯವರು 2023ರ ಫೆಬ್ರವರಿ 27ರಂದು ರೈತರ ಖಾತೆಗೆ 13ನೇ ಕಂತಿನ ಹಣವನ್ನು ವರ್ಗಾಯಿಸಿದ್ದರು.

ವಾಸ್ತವವಾಗಿ ಇದು ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಪ್ರಧಾನ ಮಂತ್ರಿಯಾದ ನಂತರ, ನರೇಂದ್ರ ಮೋದಿ ಅವರು ಡಿಸೆಂಬರ್ 2018 ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭಿಸಿದರು.

ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ  ಕೇಂದ್ರೀಯ ಯೋಜನೆಯಾಗಿದೆ. ಬಡ ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ. ಸಂಪೂರ್ಣ ಸರ್ಕಾರಿ ಬೆಂಬಲಿತ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಸೀಮಿತ ಜಮೀನು ಹೊಂದಿರುವ ಎಲ್ಲಾ ರೈತ ಕುಟುಂಬಗಳಿಗೆ ಅನ್ವಯಿಸುತ್ತದೆ.

Published On: 18 July 2023, 10:13 AM English Summary: PM Kisan: The money will come into the account on this day

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.