ಗುಣಮಟ್ಟದ ಆಹಾರ ಉತ್ಪಾದಿಸುವ ದೃಷ್ಟಿಯಿಂದ, ಸರ್ಕಾರವು ಸಮಗ್ರ ಮೊಷಕಾಂಶಗಳ ನಿರ್ವಹಣೆಗೆ (INM) ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ.
ರಸಗೊಬ್ಬರದ ಬಳಕೆ ಪ್ರಮಾಣ ಕಡಿಮೆ ಮಾಡುತ್ತಾ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರ ರೈತರಿಗೆ ಪೂರೈಸಲಾಗುವ ಸಾವಯವ ಗೊಬ್ಬರಗಳಿಗೆ ರಿಯಾಯಿತಿ ನೀಡುತ್ತಿದೆ.
ಇದನ್ನೂ ಓದಿರಿ: ₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?
ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?
2021-22 ನೇ ಸಾಲಿಗೆ ಈ ಯೋಜನೆಯನ್ನು ಚಾಲ್ತಿ ಯೋಜನೆಯಾಗಿ ಮುಂದುವರಿಸಲಾಗಿದ್ದು, ಅಯವ್ಯಯದ ಉ.ಲೇ ಶೇ. 106 (ಸಹಾಯ ಧನ) ಯೋಜನೆಯಡಿ ಒಟ್ಟು 227.40 ಲಕ್ಷ ರೂ.ಗಳ ಅನುದಾನವನ್ನು,
ಪರಿಶಿಷ್ಟ ಜಾತಿ ಉಪಯೋಜನೆ(422) ಯಡಿ ಒಟ್ಟು, 5,60 ಲಕ್ಷ ರೂ.ಗಳ ಅನುದಾನವನ್ನು ಮತ್ತು ಪರಿಶಿಷ್ಟ ಪಂಗಡ ಉಪ ಯೋಜನ(423)ಯಡಿ ಒಟ್ಟು, 21.00 ಲಕ್ಷ ರೂ.ಗಳ ಅನುದಾನವನ್ನು ಒದಗಿಸಲಾಗಿರುತ್ತದೆ.
ಅದರಂತೆ ಈ ಯೋಜನೆಯಲ್ಲಿ ಎರೆಹುಳು ಗೊಬ್ಬರ, ಸಾವಯವ ಗೊಬ್ಬರ (ಆರ್ಗಾನಿಕ್ ಮನ್ಸೂರ್) ಮತ್ತು ರಂಜಕಯುಕ್ತ ಸಾವಯವ ಗೊಬ್ಬರ, ಖಾದ್ಯವಲ್ಲದ ಎಣ್ಣೀ ರಹಿತ ಹಿಂಡಿ ಗೊಬ್ಬರ ಮತ್ತು ಸಿಟಿ ಕಾಂಪೋಸ್ಟ್(BULK SUPPLY) ಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದರ ಮೂಲಕ ಅವುಗಳ ಬಳಕೆಯನ್ನು ಎಲ್ಲಾ ವರ್ಗದ ರೈತರಲ್ಲಿ ಪ್ರೋತ್ಸಾಹಿಸಲಾಗುವುದು.
EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!
-
ಎರೆಹುಳು ಗೊಬ್ಬರ
ಸಾಮಾನ್ಯ ವರ್ಗದ ರೈತರಿಗೆ: ಶೇ. 50 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.2200/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ: ಶೇ. 75 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.3300/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
-
ಸಾವಯವ ಗೊಬ್ಬರ

ರಂಜಕಯುಕ್ತ ಸಾವಯವ ಗೊಬ್ಬರ
ಸಾಮಾನ್ಯ ವರ್ಗದ ರೈತರಿಗೆ: ಶೇ. 50 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.3,000/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ: ಶೇ. 75 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.4,500/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
ಮಾವು ಉತ್ಪಾದನೆಯಲ್ಲಿ ಶೇ.80ರಷ್ಟು ದಾಖಲೆಯ ಕುಸಿತ ಕಂಡ ಭಾರತ
ಚಹಾ ಬೆಳೆಗಾರರಿಗೆ ಕಹಿ ಸುದ್ದಿ; ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡ ಭಾರತದ ಚಹಾ!
-
ಖಾದ್ಯವಲ್ಲದ ಎಣ್ಣೆ ರಹಿತ ಹಿಂಡಿಗೊಬ್ಬರ
ಸಾಮಾನ್ಯ ವರ್ಗದ ರೈತರಿಗೆ: ಶೇ. 50 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.3,000/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ: ಶೇ. 75 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.4,500/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
-
ಸಿಟಿ ಕಾಂಪೋಸ್ಟ್
ಸಾಮಾನ್ಯ ವರ್ಗದ ರೈತರಿಗೆ: ಶೇ. 50 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.4,000/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ: ಶೇ. 75 ರ ರಿಯಾಯಿತಿ ಅಥವಾ ಪ್ರತಿ ಹೆಕ್ಟೇರ್ ಗೆ ರೂ.6,000/- ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.
Share your comments