1. ತೋಟಗಾರಿಕೆ

ಮಾವು ಉತ್ಪಾದನೆಯಲ್ಲಿ ಶೇ.80ರಷ್ಟು ದಾಖಲೆಯ ಕುಸಿತ ಕಂಡ ಭಾರತ: ಮಾವು ಬೆಳೆಗಾರರಿಗೆ ಸಂಕಷ್ಟ!

Kalmesh T
Kalmesh T
Indian Mango production

ದೇಶದಲ್ಲಿ ಬಿಸಿಲಿನ ತಾಪದಿಂದ ಈ ಬಾರಿ ಶೇಕಡ 80ರಷ್ಟು ಉತ್ಪಾದನೆಯಲ್ಲಿ ಭಾರತದ ಮಾವು ಕುಸಿತ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ. ಮಾವು ಬೆಳೆ ನಾಶವಾಗಿ ರೈತರಿಗೆ ಅಪಾರ ನಷ್ಟ ಉಂಟಾಗಿದ್ದು, ಬೆಲೆಯಲ್ಲಿ ಭಾರಿ ಜಿಗಿತವಾಗಿದೆ.

ಇದನ್ನೂ ಓದಿರಿ: 

Breaking: ಕೇಂದ್ರ ಸರ್ಕಾರದಿಂದ LPG ಗೆ ನೀಡುತ್ತಿದ್ದ ಸಬ್ಸಿಡಿ ರದ್ದು! ಇನ್ಮುಂದೆ ನಿಮ್ಮ ಖಾತೆಗೆ ಬರಲ್ಲ ಹಣ!

ರೈತರಿಗೆ ಸಿಹಿಸುದ್ದಿ: ಮಾಸಾಂತ್ಯದೊಳಗೆ “ರೈತ ಶಕ್ತಿ ಯೋಜನೆ”ಗೆ ಚಾಲನೆ! ಏನಿದರ ಲಾಭ ಗೊತ್ತೆ?

ಪ್ರತಿಯೊಬ್ಬರೂ ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ತಿನ್ನಲು ಬಯಸುತ್ತಾರೆ. ಮಾವನ್ನು ಹಣ್ಣುಗಳ ರಾಜ ಎಂದೂ ಕರೆಯುತ್ತಾರೆ. ಏಕೆಂದರೆ ಅದರ ರುಚಿಯಲ್ಲಿ ಯಾವುದೇ ಸಾಟಿಯಿಲ್ಲ.

ಉತ್ಪಾದನೆಯಲ್ಲಿ 80% ಕುಸಿತ ಕಂಡ ಮಾವು

ಮಾವಿನ ಹಬ್ (Mango Hub) ಎಂದು ಕರೆಯಲ್ಪಡುವ ಉತ್ತರ ಪ್ರದೇಶದಲ್ಲಿ ಮಾವಿನ ಬೆಳೆಗಳು ಈ ವರ್ಷ ಭಾರಿ ನಷ್ಟವನ್ನು ಅನುಭವಿಸಿವೆ. ಬಿಸಿಲಿನ ತಾಪಕ್ಕೆ 80 ರಷ್ಟು ಮಾವಿನ ಬೆಳೆ ನಾಶವಾಗಿದೆ.

ಇದರಿಂದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಭಾರತದಲ್ಲಿನ ಒಟ್ಟು ಉತ್ಪಾದನೆಯ 23.47 ಪ್ರತಿಶತ ಮಾವು ಉತ್ತರ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತದೆ.

PM Kisan 11 ನೇ ಕಂತಿನ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲವೇ? ಹಾಗಿದ್ದರೆ ಈಗಲೇ ಚೆಕ್‌ ಮಾಡಿ...

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

ಇದೀಗ ಬೆಳೆ ವೈಫಲ್ಯದಿಂದ ಮಾವಿನ ಹಣ್ಣಿನ ಬೆಲೆಯಲ್ಲಿ ಜಿಗಿತ ಕಂಡುಬಂದಿದ್ದು, ಇದೀಗ ರಫ್ತು ಮೇಲೂ ಪರಿಣಾಮ ಬೀರುವ ನಿರೀಕ್ಷೆ ಇದೆ.

ಮಾವಿನ ಹಣ್ಣಿನ ಬೆಲೆ 100 ದಾಟಬಹುದು

ಅಖಿಲ ಭಾರತ ಮಾವು ಬೆಳೆಗಾರರ ಸಂಘ ಮಾವು ಬೆಳೆ ವೈಫಲ್ಯದಿಂದ ವಿವಿಧ ತಳಿಗಳ ಮಾವಿನ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಪ್ರತಿ ಕೆಜಿಗೆ 70-80 ರೂ.ಗಿಂತ ಕಡಿಮೆಯಿಲ್ಲ. ಜೂನ್ 10ರ ಸುಮಾರಿಗೆ ನೈಸರ್ಗಿಕವಾಗಿ ಮಾಗಿದ ಮಾವು ಮಾರುಕಟ್ಟೆಗೆ ಬಂದ ತಕ್ಷಣ ಕೆಜಿಗೆ 100 ರೂ.ಗೆ ಮಾರಾಟ ಆರಂಭಿಸಲಿದೆ ಎಂದು ಸಂಘ ತಿಳಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ಜನಸಾಮಾನ್ಯರು ಈಗಾಗಲೇ ಹಣದುಬ್ಬರವನ್ನು ಎದುರಿಸುತ್ತಿದ್ದಾರೆ, ಹಣದುಬ್ಬರವು ಅಡುಗೆಮನೆಯಿಂದ ಮಾರುಕಟ್ಟೆಗೆ ತನ್ನ ಪಾದಗಳನ್ನು ಹರಡಿದೆ. ಇದೀಗ ಮಾವಿನ ಹಣ್ಣಿನ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಸಮಸ್ಯೆಗಳು ಹೆಚ್ಚಾಗುವ ಲಕ್ಷಣ ಕಾಣುತ್ತಿದೆ.

Published On: 03 June 2022, 03:27 PM English Summary: Indian Mango production

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.