1. ಇತರೆ

ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿಸಿದ ಹೊಸ ನಮೂನೆಯ ʼಕಡ್ಡಿ ಇಡ್ಲಿʼ ! ಫಿದಾ ಆದ ನೆಟ್ಟಿಗರು..

Kalmesh T
Kalmesh T
Stick Idli: A new form of stick idli that has become popular on social media Stick Idli

ಆಧುನಿಕತೆ ಹೆಚ್ಚಿದಂತೆಲ್ಲ ಅಂದ ಚೆಂದಕ್ಕೆ, ವಿಭಿನ್ನ ಶೈಲಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ. ಎಲ್ಲರೂ ಮಾಡುವುದನ್ನು ಬಿಟ್ಟು ವಿಶೇಷವಾಗಿ ಏನಾದರೂ ಮಾಡಬೇಕು ಎನ್ನುವ ತುಡಿತ ಇದೀಘ ಎಲ್ಲರಲ್ಲೂ ಇದ್ದೆ ಇದೆ. ಇದೀಗ ಇಂತಹ ಡಿಫರೆಂಟ್‌ ಕ್ರಿಯೇಟರ್‌ ಸಾಲಿಗೆ ವಿಶೇಷ ಇಡ್ಲಿಯೊಂದು ಸೇರಿದೆ.

ಅದ್ಭುತ ಕಸೂತಿ ಕಲೆಯಿಂದ ಆಕರ್ಷಕ ಆಭರಣ ತಯಾರಿಸುವ ಸಮುದಾಯದ ತಲ್ಲಣ

ಹೌದು, ನಮ್ಮೆಲ್ಲರ ಮನೆಯಲ್ಲಿ ವಾರಕ್ಕೆ ಒಂದು ಬಾರಿಯಾದರೂ ತಪ್ಪದೇ ಮಾಡುವ ಉಪಹಾರ ಇಡ್ಲಿ. ಇದೀಗ ಈ ಇಡ್ಲಿಗೆ ಹೊಸ ಶೈಲಿಯೊಂದನ್ನು ನೀಡಿ ಸದ್ಯ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಐಸ್‌ ಕ್ರೀಂ ಶೈಲಿಯಲ್ಲಿ ಐಸ್‌ ಕ್ರೀಂ ಕಡ್ಡಿಯನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ತಯಾರಿಸಲಾದ ಹೊಸ ನಮೂನೆಯ ಕಡ್ಡಿ ಇಡ್ಲಿ (ಸ್ಟಿಕ್‌ ಇಡ್ಲಿ) ಸದ್ಯ ಇಂಟರ್‌ನೆಟ್‌ನಲ್ಲಿ  ಸುದ್ದಿಯಲ್ಲಿದೆ.

Dragon fruit: ಡ್ರ್ಯಾಗನ್‌ ಫ್ರೂಟ್‌ ಬೆಳೆದು 1.5 ಕೋಟಿ ಗಳಿಸುತ್ತಿರುವ ಡಾಕ್ಟರ್‌; ಇಲ್ಲಿದೆ ವೈದ್ಯರೊಬ್ಬರ ಕೃಷಿ ಕತೆ!

ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಹವಾ ಸೃಷ್ಟಿಸಿದ ಕಡ್ಡಿ ಇಡ್ಲಿ!

ಸಾಮಾನ್ಯವಾಗಿ ಇಡ್ಲಿ, ತಟ್ಟೆಇಡ್ಲಿ, ನೋಡಿದ್ದೇವೆ. ಆದರೆ ಇಲ್ಲೊಬ್ಬರು ಸ್ಟಿಕ್‌ ಇಡ್ಲಿ ಮಾಡುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.

ಇದೀಗ ಟ್ವೀಟರ್‌ನಲ್ಲಿ ಈ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದ್ದು ಸಿಕ್ಕಾಪಟ್ಟೆ ವೀಕ್ಷಣೆಯನ್ನ ಪಡೆದುಕೊಂಡಿದೆ. ಅಲ್ಲದೇ ಪೋಸ್ಟ್‌ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

Today Gold Rate| ವಾರಾಂತ್ಯದಲ್ಲಿ ಚಿನ್ನದ ಬೆಲೆ ತುಸು ಇಳಿಕೆ, ಎಷ್ಟಿದೆ ಇಂದಿನ ಚಿನ್ನದ ದರ!

ಇತ್ತೀಚಿಗೆ ತೆಂಗಿನ ಚಿಪ್ಪಿನಲ್ಲಿ ಇಡ್ಲಿಯನ್ನು ಮಾಡಿದ್ದು ಕೂಡ ವೈರಲ್‌ ಆಗಿತ್ತು. ಇದೀಗ ಕಡ್ಡಿ ಇಡ್ಲಿಯ (ಸ್ಟಿಕ್‌ ಇಡ್ಲಿ) ಸರದಿ. ಇದನ್ನು ಚಿಕ್ಕ ಮಕ್ಕಳು ಹೆಚ್ಚು ಆಕರ್ಷಣೆಗೆ ಒಳಗಾಗಿ ತಿನ್ನಲು ಬಯಸುತ್ತಿವೆ ಎಂದು ಸಾಕಷ್ಟು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನೂ ಕೆಲವರು ತಾವು ಏನೇ ಬದಲಾದರೂ ಹಳೆ ಶೈಲಿಯ ಇಡ್ಲಿಯೆ ಬೆಸ್ಟ್‌ ಎಂದಿದ್ದಾರೆ. ಮತ್ತಷ್ಟು ಜನ ಇದನ್ನು ಕೈಯಿಂದ ಇಡ್ಲಿಯನ್ನು ಮುಟ್ಟದೇ ಕಡ್ಡಿಯನ್ನ ಹಿಡಿದುಕೊಂಡೆ ಚಟ್ನಿಯೊಂದಿಗೆ ನೆಂಚಿಕೊಂಡು ತಿನ್ನಬಹುದು ಎಂದಿದ್ದಾರೆ.

Published On: 29 January 2023, 05:49 PM English Summary: Stick Idli: A new form of stick idli that has become popular on social media Stick Idli

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.